More

    ಒಂದೇ ಕ್ಲಿಕ್‌ನಲ್ಲಿ ಕುಳಿತಲ್ಲಿಯೇ ಹಾಸನಾಂಬೆಯ ಪೂಜಾ ಕೈಂಕರ್ಯ ಕಣ್ತುಂಬಿಸಿಕೊಳ್ಳಿ…

    ಹಾಸನ: ಇಂದಿನಿಂದ ಪ್ರಸಿದ್ಧ ಹಾಸನಾಂಬಾ ಜಾತ್ರೆ ಶುರುವಾಗಿದೆ. ನವೆಂಬರ್‌ 16ರವರೆಗೆ ಈ ಜಾತ್ರೆ ನಡೆಯಲಿದೆ.

    ಈ ಜಾತ್ರೆಗೆ ರಾಜ್ಯದ ಮೂಲೆಮೂಲೆಗಳಿಂದಲೂ ಲಕ್ಷಾಂತರ ಮಂದಿ ಹಾಸನಾಂಬೆಯ ದರ್ಶನಕ್ಕಾಗಿ ಬರುತ್ತಿದ್ದರು. ಆದರೆ ಈ ಬಾರಿಯ ಕರೊನಾ ವೈರಸ್‌ ಎಲ್ಲ ಸಂಭ್ರಮಗಳನ್ನೂ ಕಸಿದುಕೊಂಡಿದೆ. ಹಾಗೆಂದು ಭಕ್ತರಿಗೆ ನಿರಾಸೆಯಾಗಬಾರದು, ಹಾಸನಾಂಬೆಯ ದರುಶನ ಪಡೆದು ಭಕ್ತಾದಿಗಳು ಧನ್ಯರಾಗಬೇಕು ಎನ್ನುವ ಕಾರಣದಿಂದ ದೇವಿಗೆ ಸಲ್ಲುವ ಸಂಪೂರ್ಣ ಪೂಜಾ ವಿಧಿವಿಧಾನಗಳನ್ನು ಕುಳಿತಲ್ಲಿಂದಲೇ ನೋಡಲು ಅವಕಾಶ ಕಲ್ಪಿಸಲಾಗಿದೆ.

    ಸಂಪ್ರದಾಯದಂತೆ ಅಶ್ವಯುಜ ಮಾಸದ ಮೊದಲ ಗುರುವಾರ (ಅಂದರೆ ಇಂದು) ಮಧ್ಯಾಹ್ನ 12 ಗಂಟೆಗೆ ಮೈಸೂರು ಅರಸು ಮನೆತನದ ನರಸಿಂಹರಾಜ ಅರಸು ಅವರು ಬಾಳೆ ಕಂದು ಕಡಿದ ಬಳಿಕ ಅಮ್ಮನವರ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಾಗಿದೆ.

    ಮೊದಲ ದಿನ ದೇವಿಯ ಗರ್ಭಗುಡಿ ಸ್ವತ್ಛತೆ, ಸುಣ್ಣಧಾರಣೆ ಮತ್ತು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗುವ ಆಭರಣ ಧಾರಣೆ ನಂತರ ಪೂಜಾ ಕಾರ್ಯ ನಡೆದಿದೆ.

    ಇದನ್ನೂ ಓದಿ: ಹಾಸನಾಂಬೆ ದರ್ಶನ ವಿಚಾರದಲ್ಲಿ ನೀತಿ ಬದಲಿಸಿದ ಜಿಲ್ಲಾಡಳಿತ

    ಬಾಗಿಲು ತೆರೆಯುವ ದಿನ ಸಂಜೆ ದೇವಿಗೆ ವಸ್ತ್ರಾಭರಣಗಳನ್ನು ಧರಿಸಿ, ಅಲಂಕರಿಸಿ ಪೂಜೆ ಆರಂಭಿಸಲಾಗುತ್ತದೆ. ವಿಶ್ವರೂಪ ದರ್ಶನದಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಾಗಿಲು ತೆರೆದ ತಕ್ಷಣ ದರ್ಶನ ಪಡೆಯಲು ಭಕ್ತರು ಪ್ರತಿ ವರ್ಷವೂ ಮುಗಿಬೀಳುತ್ತಿದ್ದರು. ಆದರೆ, ಈ ವರ್ಷ ಅದಕ್ಕೆ ಅವಕಾಶವಿಲ್ಲ. ಇಂದು ಮಾತ್ರ ಕೆಲವೇ ಕೆಲವು ಗಣ್ಯರಿಗೆ ದೇವಿಯ ನೇರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

    ಆದರೆ ಉಳಿದಂತೆ ಭಕ್ತಾದಿಗಳು ಜಾತ್ರೆಯ ಎಲ್ಲಾ ದಿನಗಳ ಸಂಪೂರ್ಣ ಪೂಜಾ ವಿಧಿವಿಧಾನಗಳನ್ನು ಆನ್‌ಲೈನ್‌ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ನವೆಂಬರ್ 5ರಿಂದ 17ರ ತನಕ ಈ ಬಾರಿ ದೇವಾಲಯ ಬಾಗಿಲು ತೆರೆದಿರುತ್ತದೆ.

    ಈ ಲಿಂಕ್‌ ಕ್ಲಿಕ್‌ ಮಾಡಿದರೆ ಹಾಸನಾಂಬೆಯ ಪೂಜಾ ವಿಧಿ ವಿಧಾನಗಳನ್ನು ನೋಡಬಹುದು..

    http://hasanambalive2020.com/Home.aspx

    ಕರೊನಾ ಇದ್ದರೂ ಜಾತ್ರೆ ಹಾಗೂ ಪೂಜಾ ವಿಧಿಗಳನ್ನು ಸಂಭ್ರಮ, ಅದ್ಧೂರಿಯಾಗಿಯೇ ಹಾಸನ ಜಿಲ್ಲಾಡಳಿತ ಮಾಡುತ್ತಿದ್ದು, ಅದರ ಸವಿಯನ್ನು ಕುಳಿತಲ್ಲಿನಿಂದಲೇ ಸವಿಯಬಹುದಾಗಿದೆ. ಇನ್ನುಳಿದಂತೆ ಹಾಸನಾಂಬೆಯ ಪೂಜೆ ನಡೆಯವ 12 ದಿನಗಳೂ ಬೃಹತ್‌ ಎಲ್‌ಇಡಿ ಪರದೆಗಳನ್ನು ಹಾಸನ ನಗರದ 10 ಕಡೆ ಅಳವಡಿಸಲಾಗಿದೆ. ಹಾಸನಾಂಬಾ ದೇವಾಲಯದ ಪರಿಸರದಲ್ಲಿ 4 ಕಡೆ, ಹಾಸನದ ತಣ್ಣೀರುಹಳ್ಳ, ಹೇಮಾವತಿ ಪ್ರತಿಮೆ ಬಳಿ, ಕೇಂದ್ರೀಯ ಬಸ್‌ ನಿಲ್ದಾಣದ ಬಳಿ, ವಿದ್ಯಾನಗರ ಲೇಡಿಸ್‌ ಹಾಸ್ಟೆಲ್‌ ಸಮೀಪ, ಉಪನೋಂದಣಾಧಿಕಾರಿ ಕಚೇರಿ ಬಳಿ, ರೈಲ್ವೆ ನಿಲ್ದಾಣ ಸಮೀಪ, ಜಿಲ್ಲಾ ಕ್ರೀಡಾಂಗಣದ ಬಳಿ, ಹೇಮಾವತಿ ನಗರದಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿದೆ.

    ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಕಪ್ಪು ಹುಲಿ!

    ಆಂಬ್ಯುಲೆನ್ಸ್‌ಗೆ ದಾರಿ ಮಾಡಲು ಕಾನ್ಸ್‌ಟೆಬಲ್‌ ಪಟ್ಟ ಸಾಹಸಕ್ಕೆ ಅಭಿನಂದನೆಗಳ ಮಹಾಪೂರ

    ಆಂಬ್ಯುಲೆನ್ಸ್‌ಗೆ ದಾರಿ ಮಾಡಲು ಕಾನ್ಸ್‌ಟೆಬಲ್‌ ಪಟ್ಟ ಸಾಹಸಕ್ಕೆ ಅಭಿನಂದನೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts