More

    ಕಾಳೇನಹಳ್ಳಿ ಜಾತ್ರೋತ್ಸವಕ್ಕೆ ಪಾದಯಾತ್ರೆ

    ಶಿಕಾರಿಪುರ: ಕಾಳೇನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜಾತ್ರೋತ್ಸವ ಮತ್ತು ಲಿಂ. ಹಾನಗಲ್ ಕುಮಾರಸ್ವಾಮಿಗಳ ಹಾಗೂ ಲಿಂ. ರೇವಣಸಿದ್ದ ಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ದೊಡ್ಡಪೇಟೆಯ ಭಕ್ತರು ಶ್ರೀ ಬಸವೇಶ್ವರ ದೇವಸ್ಥಾನದಿಂದ ಕಾಳೇನಹಳ್ಳಿಯವರೆಗೆ ಪಾದಯಾತ್ರೆ ತೆರಳಿ ಲಿಂಗೈಕ್ಯ ಶ್ರೀಗಳ ಕರ್ತೃ ಗದ್ದುಗೆಗೆ ಸೇವೆ ಸಮರ್ಪಿಸಿದರು. ನಂತರ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆದರು.

    ವೀರಶೈವ ಸಮಾಜದ ಮುಖಂಡ ರುದ್ರಮುನಿ ಮಾತನಾಡಿ, ಕಾಳೇನಹಳ್ಳಿ ಶ್ರೀಮಠಕ್ಕೂ ಶಿಕಾರಿಪುರದ ಭಕ್ತರಿಗೂ ಅವಿನಾಭಾವ ನಂಟಿದೆ. ನಮ್ಮ ಹಿರಿಯ ಕಾಲದಿಂದಲೂ ಕಾಳೇನಹಳ್ಳಿ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಿದ್ದಾರೆ. ರುದ್ರಮುನಿ ಮಹಾಸ್ವಾಮಿಗಳು ಕಾಯಕಯೋಗಿ, ತಪೋನಿರತರಾಗಿದ್ದರು. ಅವರ ನಂತರ ಬಂದ ಶ್ರೀ ರೇವಣಸಿದ್ದ ಸ್ವಾಮಿಗಳು ಕೂಡ ಕೃಷಿ ಕಾಯಕ ನಿಷ್ಠರಾಗಿದ್ದರು. ಈಗಿನ ಶ್ರೀಗಳು ಅನುಷ್ಠಾನ ಮೂರ್ತಿಗಳು. ತಮ್ಮ ಜಪ, ತಪ ಸಾಧನೆ, ಸಿದ್ಧಿಗಳಿಂದ ಈ ಮಣ್ಣನ್ನು ಪುಣ್ಯದ ಮಣ್ಣಾಗಿಸಿದ್ದಾರೆ. ಕಾಳೇನಹಳ್ಳಿಯಲ್ಲಿ ದೈವತ್ವದ ಧಾರೆ ಹರಿಸಿದ್ದಾರೆ ಎಂದರು.
    ನಮಗೆ ಕ್ಷೇತ್ರಕ್ಕೆ ಬಂದು ಹೋದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಇಲ್ಲಿಗೆ ಬಂದು ಗುರುಗಳ ಕರ್ತೃ ಗದ್ದುಗೆ ದರ್ಶನ ಮಾಡಿದರೆ ಮನಸಿಗೆ ನೆಮ್ಮದಿ ದೊರಕುತ್ತದೆ. ಕಾಳೇನಹಳ್ಳಿ ಜಾತ್ರೋತ್ಸವದಲ್ಲಿ ಭಾಗವಹಿಸುವುದೇ ಅತ್ಯಂತ ಸಂತಸದ ವಿಚಾರ ಎಂದು ಹೇಳಿದರು.
    ಶಿವಯೋಗಿ ಹಂಚಿನಮನೆ, ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ರತ್ನಾ ಜಯಣ್ಣ, ಬಸವಣ್ಣಯ್ಯ ಮಠದ್, ಮಲ್ಲಿಕಾರ್ಜುನ, ಜಯಣ್ಣ, ಜಯಶ್ರೀ, ಜ್ಯೋತಿ, ಶೈಲಾ, ನಂದಾ ಹದಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts