More

    ಹರ್ಷನ ಕೊಲೆ ಮಾಡಿ ಅನುಮಾನ ಬಾರದಂತೆ ತಣ್ಣಗಿದ್ದ ಆರೋಪಿಗಳು ಸಿಕ್ಕಿಬಿದ್ದದ್ದೇ ರೋಚಕ…

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಅವರ ಕೊಲೆಗೆ ಸಂಬಂಧಿಸಿದಂತೆ ಇದಾಗಲೇ ಹಲವಾರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆಯ ಕುರಿತಾಗಿ ಇನ್ನಷ್ಟು ಮಾಹಿತಿಗಳು ಹೊರ ಬರುತ್ತಲೇ ಇವೆ.

    ಫೆಬ್ರವರಿ 20ರ ರಾತ್ರಿ 8.45ರಿಂದ 9 ಗಂಟೆ ಅವಧಿಯಲ್ಲಿ ಹರ್ಷನನ್ನು ಭಾರತಿ ಕಾಲನಿಯಲ್ಲಿ ಕೊಲೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕೊಲೆ ಮಾಡಿದ ಮೇಲೆ ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು.

    ಎಲ್ಲರೂ ಕೊಲೆ ಮಾಡಿದ ನಂತರ ಸೀದಾ ಭದ್ರಾವತಿಗೆ ತೆರಳಿದ್ದರು. ಅಲ್ಲಿಂದ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಿದ್ದರು. ಆದರೆ ಪ್ರಕರಣದ ಎ1 ಆರೋಪಿ ಖಾಸಿಪ್ ಮಾತ್ರ ಭದ್ರಾವತಿಯಲ್ಲೇ ಉಳಿದುಕೊಂಡಿದ್ದ. ಪ್ರಕರಣದ ಎ2 ಆರೋಪಿ ನದೀಮ್ ಕೊಲೆಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಮನೆಯಲ್ಲೇ ಇದ್ದ. ಎ3, ಎ4, ಎ5, ಆರೋಪಿಗಳು ಹಾಸನಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಎ6 ಆರೋಪಿ ಅಪ್ನಾನ್ ಚಿಕ್ಕಮಗಳೂರಿಗೆ ತೆರಳಿದ್ದ.

    ಹರ್ಷನ ಕೊಲೆ ಮಾಡಿದ ಆರೋಪಿಗಳು ಒಂದಷ್ಟು ಕರೆಗಳನ್ನು ಮಾಡಿ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಕೊಲೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಹರ್ಷನಿಗೆ ಯಾರೊಂದಿಗೆ ವೈರತ್ವವಿತ್ತು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾರಂಭಿಸಿದ್ದರು‌.

    ಹರ್ಷನಿಗೆ ಹಿಂದಿನಿಂದಲೂ ಖಾಸಿಪ್ ಜತೆ ವೈರತ್ವವಿರುವುದು ತಿಳಿದ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆದರೆ‌ ಖಾಸಿಪ್ ಬುದ್ಧನಗರದ ಆತನ ಮನೆಯಲ್ಲಿ ಪತ್ತೆಯಾಗಿಲ್ಲ. ಜೊತೆಗೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

    ಆಗ ಪೊಲೀಸರಿಗೆ ಖಾಸಿಫ್​ಗೂ ಕೊಲೆಗೂ ಸಂಬಂಧವಿದೆ ಎಂಬ ಅನುಮಾನದ ಮೇಲೆ ಖಾಸಿಪ್ ಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಆಗ ಖಾಸಿಫ್​ನ ಸಹಚರ ನದೀಮ್ ವಶಕ್ಕೆ ಪೊಲೀಸರು ಮುಂದಾಗಿದ್ದಾರೆ.

    ನದೀಮ್ ತನ್ನ ಮನೆಯಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ನದೀಮ್ ನೀಡಿದ ಮಾಹಿತಿಯಂತೆ ಪ್ರಕರಣದ ಪ್ರಮುಖ ಆರೋಪಿ ಖಾಸಿಫ್​ನನ್ನು ಪೊಲೀಸರು ಭದ್ರಾವತಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಖಾಸಿಪ್‌ ಹಾಗೂ ನದೀಮ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹರ್ಷ ಹತ್ಯೆಯ ಸಂಪೂರ್ಣ ವಿವರ ಪೊಲೀಸರಿಗೆ ಲಭ್ಯವಾಗಿದೆ‌.

    ಬಳಿಕ ಖಾಸಿಪ್ ನೀಡಿದ ಮಾಹಿತಿಯಂತೆ ಎ3, ಎ4, ಎ5 ಆರೋಪಿಗಳನ್ನು ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ. ಇನ್ನು ಪ್ರಕರಣದ ಎ6 ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೊಲೆ ಮಾಡಿದ ಆರೋಪಿಗಳನ್ನು ಕಾರಿನಲ್ಲಿ ಕರೆದೊಯ್ದ ಜಿಲಾನ್ ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

    ಪೊಲೀಸರ ಕಾರ್ಯಾಚರಣೆ ನಡೆದಿದ್ದೇ ರೋಚಕ:

    ಒಂದು ಸಣ್ಣ ಅನುಮಾನ ಖಾಸಿಪ್ ಮೇಲೆ ಪೊಲೀಸರಿಗೆ ಬರುತ್ತೆ‌. ಪೊಲೀಸರ ಆ ಸಣ್ಣ ಅನುಮಾನವೇ ಕೊನೆಗೂ ನಿಜವಾಗುತ್ತೆ. ಯಾವಾಗ ಖಾಸಿಪ್ ಅಂಡ್ ಗ್ಯಾಂಗೇ ಕೊಲೆ ಮಾಡಿದೆ ಎಂಬುದು ಕನ್ಫರ್ಮ್ ಆಗುತ್ತಿದ್ದಂತೆ ಪೊಲೀಸರು ನಡೆಸಿದ ಕಾರ್ಯಾಚರಣೆಯೇ ರೋಚಕ.

    ಹರ್ಷ ಕೊಲೆಯಾಗುತ್ತಿದ್ದಂತೆ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಆರೋಪಿಗಳನ್ನು ಶೀಘ್ರವೇ ಬಂಧಿಸುವುದು ಪೊಲೀಸರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಆರಂಭಿಸಿದ್ದರು‌. ಇನ್ಸ್ ಪೆಕ್ಟರ್ ಗುರುರಾಜ್ ಕರ್ಕಿ, ಅಭಯ್ ಪ್ರಕಾಶ್ ಸೋಮನಾಳ್, ವೀರೇಶ್ ನೇತೃತ್ವದ ಮೂರು ತಂಡಗಳು ಒಂದೊಂದು ದಿಕ್ಕಿನತ್ತ ತೆರಳಿ ಆರೋಪಿಗಳ ಹೆಡೆಮುರಿ ಕಟ್ಟಿವೆ.

    ಒಂದು ಟೀಂ ಚಿಕ್ಕಮಗಳೂರಿಗೆ, ಇನ್ನೊಂದು ಟೀಂ ಹಾಸನಕ್ಕೆ, ಮತ್ತೊಂದು ಟೀಂ ಬೆಂಗಳೂರಿಗೆ ತೆರಳಿ ಘಟನೆ ನಡೆದು ಎರಡು ದಿನದ ಒಳಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಹರ್ಷ ಕೊಲೆ ಆರೋಪಿಗಳ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ ಪೊಲೀಸರು.

    ಆರೋಪಿಗಳಿಗೆ ಹಣದ ಸಹಾಯ ಮಾಡಿದವರು ಯಾರು? ಆರೋಪಿಗಳಿಗೂ ಹಣ ನೀಡಿದವರಿಗೂ ಸಂಬಂಧ ಏನು? ಹರ್ಷ ಕೊಲೆಗೆ ಫಂಡಿಂಗ್ ಮಾಡಲು ಕಾರಣವೇನು? ಯಾವ ಸಂಘಟನೆ ಹರ್ಷ ಹತ್ಯೆ ಹಿಂದಿದೆ? ಖಾಸಿಪ್ ಮುಂದಿಟ್ಟುಕೊಂಡು ಹರ್ಷ ಕೊಲೆ ಮಾಡಿದವರು ಯಾರು ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಆಗ ಆತನ ಮೊಬೈಲ್ ಕರೆಗಳನ್ನು ಪರಿಶೀಲಿಸಿ ಒಂದಷ್ಟು ಜನರ ಲಿಸ್ಟ್ ರೆಡಿ ಮಾಡಿಕೊಂಡಿದ್ದಾರೆ ಪೊಲೀಸರು. ಲಿಸ್ಟ್ ರೆಡಿಯಾಗುತಿದ್ದಂತೆ ಅದರಲ್ಲಿದ್ದವರ ಪತ್ತೆ ಮಾಡಲಿದ್ದು, ಇನ್ನಷ್ಟು ಸತ್ಯಾಂಶ ಬಹಿರಂಗಗೊಳ್ಳಲಿದೆ.

    ಅಂದು ಗೋಕುಲ್​, ಇಂದು ಹರ್ಷ: ಹತ್ಯೆಗೆ ಜೈಲಿನಿಂದಲೇ ಸ್ಕೆಚ್​ ಹಾಕಿದ್ರಾ? ಇವನದ್ದಾ ಮಾಸ್ಟರ್​ಮೈಂಡ್​?

    ಶಿವಮೊಗ್ಗ ಗಲಭೆಯ ವಿಡಿಯೋ ಲಭ್ಯ: ಈ ಹಂತದಲ್ಲಿ ರಹಸ್ಯ ಬಿಚ್ಚಿಡಲಾಗದು ಎಂದ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts