More

    ಸುಪ್ರೀಂ ತೀರ್ಪಿನಿಂದ ಸಚಿವ ಸ್ಥಾನ ಸಿಗದಿದ್ರೇನು.. ಇನ್ನೊಂದು ಖುರ್ಚಿ ಮೇಲೆ ವಿಶ್ವನಾಥ್ ಕಣ್ಣು…​

    ಮೈಸೂರು: ಸಚಿವ ಸ್ಥಾನಕ್ಕೆ ಅನರ್ಹ ಎಂದು ಹೈಕೋರ್ಟ್​ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಬಿಜೆಪಿ ನಾಯಕ ಎಚ್​. ವಿಶ್ವನಾಥ್ ಅವರ ಮೇಲ್ಮನವಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದ್ದರಿಂದ ಸಚಿವರಾಗುವ ಆಸೆಯನ್ನು ವಿಶ್ವನಾಥ್​ ಕೈಬಿಡಬೇಕಾಗಿದೆ.
    ವಿಶ್ವನಾಥ್​ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಂದು ತಿರಸ್ಕರಿಸಿದ ಸುಪ್ರೀಂಕೋರ್ಟ್​ ಹೈಕೋರ್ಟ್​ ಆದೇಶವನ್ನು ಎತ್ತಿಹಿಡಿದಿದೆ. ಇದರಿಂದಾಗಿ ಸಚಿವನಾಗುವ ಕನಸು ಕಂಡಿದ್ದ ವಿಶ್ವನಾಥ್​ ಅವರಿಗೆ ಸುಪ್ರೀಂ ತೀರ್ಪು ತಣ್ಣೀರೆರಚಿದೆ.

    ಈ ಆದೇಶದ ನಂತರ ಹುಣಸೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸಚಿವರೆಲ್ಲರೂ ನನಗೆ ಸಹಾನುಭೂತಿ ತೋರುತ್ತಿದ್ದಾರೆ. ಅವರ ಸಹಾನುಭೂತಿ ನನಗೆ ಬೇಕಿಲ್ಲ. ನಾವೆಲ್ಲರೂ ಜತೆಗಿದ್ದೇವೆ ನಿಜ. ಆದರೆ ಉಳಿದವರು ಸಚಿವರಾಗಿದ್ದಾರೆ. ನಾನು ಒಂಟಿಯಾದೆ. ಎಲ್ಲವೂ ಪವರ್ ಪಾಲಿಟಿಕ್ಸ್, ಸಹಾನುಭೂತಿ ತೋರುವ ಬದಲು ನಮ್ಮ 17 ಮಂದಿಯ ಟೀಂ ನನ್ನ ಬಗ್ಗೆ ಸಿಎಂ ಬಳಿ ಮಾತನಾಡಬೇಕಿತ್ತು ಎಂದು ಹೇಳಿದರು.

    ಇದನ್ನೂ ಓದಿ: ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಎಚ್​​. ವಿಶ್ವನಾಥ್​ಗೆ ಭಾರಿ ಮುಖಭಂಗ

    ಸಚಿವ ಸ್ಥಾನವಂತೂ ಸಿಗಲ್ಲ, ಉಪ ಸಭಾಪತಿ ಕೊಟ್ಟರೆ ಹೋಗುವಿರಾ ಎಂದು ಕೇಳಿದ ಪ್ರಶ್ನೆಗೆ, ಪಟ್ಟ ಬೇಕಿಲ್ಲ, ವಿಧಾನ ಪರಿಷತ್ ಉಪಸಭಾಪತಿ ಹುದ್ದೆ ಕೊಟ್ಟರೆ ಒಪ್ಪುವಿರಾ ಎಂಬ ಪ್ರಶ್ನೆಗೆ ನಾನು ಕ್ಯಾಬಿನೆಟ್‌ ದರ್ಜೆ ಸಚಿವನಾಗಿದ್ದವನು, ಉಪ ಸಭಾಪತಿ ಹುದ್ದೆಗೆ ಒಪ್ಪಲಾರೆ ಎಂದರು.

    ಆದರೆ ಇದೇ ವೇಳೆ ಇನ್ನೊಂದು ಹುದ್ದೆಯ ಆಕಾಂಕ್ಷಿಯಾಗಿರುವ ಬಗ್ಗೆ ಪರೋಕ್ಷವಾಗಿ ನುಡಿದರು. ಅದೇ ಸಭಾಪತಿ ಹುದ್ದೆ. ಪಕ್ಷ ಹಾಗೂ ಮುಖ್ಯಮಂತ್ರಿಗಳು ವಿಶ್ವಾಸವಿಟ್ಟು ಸಭಾಪತಿ ಹುದ್ದೆ ನೀಡಿದರೆ ನೋಡೋಣ ಎನ್ನುವ ಮೂಲಕ ತಾವು ಆ ಹುದ್ದೆಯ ಮೇಲೆ ಕಣ್ಣು ಇಟ್ಟಿರುವುದಾಗಿ ಸೂಚ್ಯವಾಗಿ ಹೇಳಿದರು.

    VIDEO: ಮೀನುಪ್ರಿಯರಿಗೆ ಹಬ್ಬಬೋ ಹಬ್ಬ… ಪುಕ್ಕಟೆ ಸಿಕ್ಕ ‘ಫ್ರೆಷ್’​ ಮೀನನ್ನು ಮುಗಿಬಿದ್ದು ಬಾಚಿಕೊಂಡ್ರು…

    ಗಣರಾಜ್ಯೋತ್ಸವದ ದಿನ ಸಿಖ್‌ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್​

    VIDEO: ದೆಹಲಿ ಹಿಂಸಾಚಾರ: ನಟ ದೀಪ್​ ಸಿಧು ಎಸ್ಕೇಪ್​, ಎಫ್​ಐಆರ್​ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts