More

    ಇವರೇ ನೋಡಿ ಗೂಗಲ್​ ದಾದಿ… ಫೋನ್​ ನಂಬರ್​ಗಳ ನಡೆದಾಡುವ ವಿಶ್ವಕೋಶ ಇವರು!

    ಮಿರ್ಜಾಪುರ (ಉತ್ತರ ಪ್ರದೇಶ): ಮೊಬೈಲ್​ ಫೋನ್​ ಬರುವ ಮುನ್ನ ಕೆಲವಾದರೂ ಫೋನ್​ ನಂಬರ್​ಗಳು ನಮ್ಮ ಬಾಯಲ್ಲಿ ಇರುತ್ತಿದ್ದವು. ಲ್ಯಾಂಡ್​ಲೈನ್​ನಲ್ಲಿ ಕರೆ ಮಾಡುವಾಗ ಒಂದಿಷ್ಟು ಸಂಬಂಧಿಕರ, ಸ್ನೇಹಿತರ ನಂಬರ್​ಗಳನ್ನು ಡಯಲ್​ ಮಾಡಬೇಕಾಗಿ ಬರುವ ಕಾರಣ ನೆನಪಿನಲ್ಲಿ ಉಳಿಯುತ್ತಿದ್ದವು. ಆದರೆ ಮೊಬೈಲ್​ಫೋನ್​ ಬಂದ ಮೇಲೆ ಎಷ್ಟೋ ಮಂದಿಗೆ ಅವರ ಫೋನ್​ ನಂಬರೇ ತಿಳಿದಿರುವುದಿಲ್ಲ!
    ಇಂಥ ಸ್ಥಿತಿಯಲ್ಲಿ ಇಲ್ಲೊಬ್ಬ ದಾದಿ, ಫೋನ್​ ನಂಬರ್​ನಿಂದಾಗಿಯೇ ಗೂಗಲ್​ ದಾದಿ (ಗೂಗಲ್​ ಅಜ್ಜಿ) ಎನಿಸಿಕೊಂಡಿದ್ದಾರೆ.

    ಇಂಥದ್ದೊಂದು ಅಚ್ಚರಿಯ ಅಜ್ಜಿ ಇರುವುದು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ. ಇವರ ವಯಸ್ಸು 65. ಇವರು ಎಲ್ಲಿಯೂ ನೋಡದೇ ಸಾವಿರಾರು ಫೋನ್​ ನಂಬರ್​ಗಳನ್ನು ಫಟಾಫಟ್​ ಹೇಳುತ್ತಾರೆ. ಶಾಸಕರ ಕಚೇರಿ, ಪೊಲೀಸ್‌ ಠಾಣೆ, ಸಹಾಯವಾಣಿ ಹೀಗೆ ಮಹತ್ವದ ನಂಬರ್​ಗಳೆಲ್ಲವೂ ಇವರ ಬಾಯಲ್ಲೇ ಇದೆ. ಎಲ್ಲಾ ಪೋಲೀಸ್‌ ಠಾಣೆಯ, ಸರ್ಕಾರಿ ಕಚೇರಿಗಳ, ರಾಜಕೀಯ ನಾಯಕರ, ಸಹಾಯವಾಣಿ ಸಂಖ್ಯೆಗಳು ಇವರ ನಾಲಿಗೆಯ ತುದಿಯಲ್ಲಿವೆ. ಮಿರ್ಜಾಪುರ ಜಿಲ್ಲೆ ಮಾತ್ರವಲ್ಲ. ಅಕ್ಕಪಕ್ಕದ ಜಿಲ್ಲೆಯ ನಂಬರ್‌ಗಳೂ ಇವರಿಗೆ ಗೊತ್ತು. ಆದ್ದರಿಂದಲೇ ಇವರನ್ನು ಫೋನ್​ ನಂಬರ್​ಗಳ ನಡೆದಾಡುವ ವಿಶ್ವಕೋಶ ಎಂದು ಕರೆಯಲಾಗುತ್ತದೆ.

    ಮಿರ್ಜಾಪುರ ಜಿಲ್ಲೆಯ ಚುನಾರ್ ತೆಹ್ಸಿಲ್‌ನ ಪರಶುರಾಂಪುರ ಗ್ರಾಮದದವರಾಗಿರುವ ಈ ವೃದ್ಧೆಯ ಹೆಸರು ಸೀತಾಪತಿ ಪಟೇಲ್‌. ಆದರೆ ಸೀತಾಪತಿ ಎಂದರೆ ಕೆಲವರಿಗೆ ತಿಳಿಯಲಿಕ್ಕಿಲ್ಲ, ಆದರೆ ಗೂಗಲ್​ ದಾದಿ ಎಂದರೆ ಸಾಕು, ಯಾರು ಬೇಕಾದರೂ ಇವರ ಮನೆಗೆ ನೇರವಾಗಿ ಕರೆದುಕೊಂಡು ಹೋಗುತ್ತಾರೆ.

    ಕೃಷಿ ಕೆಲಸ ಮಾಡಿಕೊಂಡಿರುವ ಈ ಅಜ್ಜಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಮನೆ ಕೆಲಸ, ಜಾನುವಾರು ಪೋಷಣೆ, ಕೃಷಿ ಚಟುವಟಿಕೆ… ಹೀಗೆ ಸದಾ ಬಿಜಿಯಾಗಿದ್ದಾರೆ ಸೀತಾಪತಿ. ಓದಿರುವುದು ಎಷ್ಟು ಎಂದು ಕೇಳಿದರೆ, ಶಾಲೆಗೆ ಹೋಗಿಲ್ಲ ಎಂದು ಬಾಯ್ತುಂಬ ನಗುತ್ತಾರೆ.

    ಅಂದಹಾಗೆ ಈ ಅಜ್ಜಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣ, ಇವರು ರಚಿಸಿರುವ ಹಾಡು. ಹೌದು. ಸಮಾಜ ಸೇವೆಯಲ್ಲಿಯೂ ತೊಡಗಿರುವ ಗೂಗಲ್‌ ದಾದಿ, ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಹಾಡೊಂದನ್ನು ರಚಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಟೂಲ್​ಕಿಟ್​ ಹಗರಣ ಬಯಲಾಗ್ತಿದ್ದಂತೆ ಕೋರ್ಟ್​ಗೆ ಧಾವಿಸಿದ್ದ ದಿಶಾ- ನ್ಯಾಯಾಲಯ ಹೇಳಿದ್ದೇನು?

    ‘ನಾನು ಸಾಯುತ್ತಿದ್ದೇನೆ, ಕ್ಷಮಿಸಿ… ಸಿದ್ದರಾಮಯ್ಯ ಸರ್‌, ಯಶ್‌ ಅಣ್ಣ ಪ್ಲೀಸ್‌ ನನ್ನ ಈ ಅಂತಿಮ ಇಚ್ಛೆ ಈಡೇರಿಸಿ…’

    ನಡುರಸ್ತೆಯಲ್ಲಿಯೇ ವಕೀಲ ದಂಪತಿಯ ಬರ್ಬರ ಹತ್ಯೆ: ವಿಡಿಯೋದಲ್ಲಿ ಭಯಾನಕ ದೃಶ್ಯ ದಾಖಲು

    ಈಕೆಗೆ ನೇಣು ಹಾಕಲು ಸಿದ್ಧವಾಗಿದೆ ಮಥುರಾ ಜೈಲು- ಸ್ವಾತಂತ್ರ್ಯಾನಂತರದ ಮೊದಲ ಗಲ್ಲುಶಿಕ್ಷೆಗೊಳಗಾಗುವ ಹೆಣ್ಣೀಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts