More

    ‘ಫೀಲಿಂಗ್​ ಬೊಂಬಾಟ್’ ಎಂದು ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ ಗೂಗಲ್!

    ಬೆಂಗಳೂರು: ಅಂತರ್ಜಾಲ ಜಗತ್ತಿನ ಮುಂಚೂಣಿ ಸಂಸ್ಥೆ ಆಗಿರುವ ಗೂಗಲ್ ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸುವ ಮೂಲಕ ಕನ್ನಡಿಗರ ಸಂಭ್ರಮವನ್ನು ಹೆಚ್ಚಿಸಿದೆ. ಗೂಗಲ್ ತನ್ನ ಸೋಷಿಯಲ್ ಮೀಡಿಯಾ ಮುಖಾಂತರ ಈ ಶುಭಾಶಯವನ್ನು ಕೋರಿದೆ.

    ಪ್ರತಿ ವಿಶೇಷ ದಿನಗಳಲ್ಲಿ ಗೂಗಲ್ ಡೂಡಲ್ ಮೂಲಕ ಶುಭವನ್ನು ಕೋರುವುದು ಸರ್ವೇಸಾಮಾನ್ಯ. ಆದರೆ ಇಂದು ಕನ್ನಡ ರಾಜ್ಯೋತ್ಸವಕ್ಕೆ ಅದು ಶುಭ ಹಾರೈಸುವ ಮೂಲಕ ಗೂಗಲ್ ಬಳಸುವ ಕನ್ನಡಿಗರಲ್ಲಿ ರೋಮಾಂಚನವನ್ನು ಉಂಟು ಮಾಡಿದೆ.

    ಗೂಗಲ್ ತನ್ನ ಗೂಗಲ್ ಇಂಡಿಯಾ ಎಕ್ಸ್ ಹ್ಯಾಂಡಲ್ ಮೂಲಕ ‘feeling ಬೊಂಬಾಟ್, today as we celebrate ಕನ್ನಡ’ ಎಂಬ ಕ್ಯಾಪ್ಷನ್​ನೊಂದಿಗೆ ಎರಡು ಫೋಟೋಗಳನ್ನೂ ಹಂಚಿಕೊಂಡು ಶುಭ ಹಾರೈಸಿದೆ. ಆ ಫೋಟೋಗಳಲ್ಲಿ ಇಂಗ್ಲಿಷ್​-ಕನ್ನಡ ಅನುವಾದದ ಸಾಲುಗಳಿವೆ. ಒಂದರಲ್ಲಿ ‘ನಾನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇನೆ, ಊಟ ಆಯ್ತಾ?’ ಎಂಬುದಿದ್ದರೆ ಇನ್ನೊಂದರಲ್ಲಿ, ‘ನಾನು ನಿನ್ನನ್ನು ಪ್ರೀತಿಸುತ್ತೇನೆ, ನನ್ನ ಸಮುದ್ರ ನೀನು’ ಎಂದು ಇದೆ.

    ಈ ಎಕ್ಸ್​ ಪೋಸ್ಟ್​ಗೆ ಕನ್ನಡಿಗರು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಶುಭಾಶಯ ಪೋಸ್ಟ್ ಆದ ಏಳೇ ಗಂಟೆಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಮಾತ್ರವಲ್ಲ, 4 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 1 ಸಾವಿರಕ್ಕೂ ಅಧಿಕ ಮಂದಿ ರಿಪೋಸ್ಟ್ ಮಾಡಿಕೊಂಡಿದ್ದಾರೆ.

    ಫೇಸ್​​ಬುಕ್​ನಲ್ಲಿ ಕೂಡ ಗೂಗಲ್ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರಿದೆ. ‘Ok Google, play ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ’ ಎಂಬ ಕ್ಯಾಪ್ಷನ್​ನೊಂದಿಗೆ ಅದು ಅವೆರಡು ಕನ್ನಡ ಅನುವಾದದ ಪೋಟೋಗಳನ್ನು ಹಂಚಿಕೊಂಡಿದೆ. ಅದು ಕೂಡ ಈಗಾಗಲೇ 481 ಶೇರ್ ಕಂಡಿದ್ದು, 2 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

    ನಟ ದರ್ಶನ್ ವಿರುದ್ಧ ದೂರು ಕೊಟ್ಟ ಮಹಿಳೆ​: ಹರಿದುಹೋದ ಬಟ್ಟೆ, ಹೊಟ್ಟೆಗೆ ಗಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts