More

    VIDEO: ನಾಲ್ಕನೇ ಮಹಡಿಯಿಂದ ಜಾರಿ ಬಿದ್ದರೂ ಬಾಲಕಿ ಬದುಕಿದ್ದೇ ಪವಾಡ- ವಿಡಿಯೋ ವೈರಲ್​

    ಪುಣೆ: ಅದೃಷ್ಟವಿದ್ದರೆ ಹಾಗೂ ಆಯಸ್ಸು ಗಟ್ಟಿಯಿದ್ದರೆ ಎಂಥ ಸಾವನ್ನೂ ಜಯಿಸಬಲ್ಲರು ಎನ್ನುವುದಕ್ಕೆ ಪುಣೆಯಲ್ಲಿ ನಡೆದಿರುವಂಥ ಘಟನೆಯೇ ಸಾಕ್ಷಿ.

    14 ವರ್ಷದ ಬಾಲಕಿಯೊಬ್ಬಳು ನಾಲ್ಕನೇ ಫ್ಲೋರ್​ನಲ್ಲಿ ಆಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದುಬಿಟ್ಟಿದ್ದಾಳೆ. ಇನ್ನೇನು ತನ್ನ ಆಯಸ್ಸು ಮುಗಿಯಿತು ಎಂದು ಅವಳು ಹಾಗೂ ನೋಡಿದವರು ಅಂದುಕೊಳ್ಳುವಷ್ಟರಲ್ಲಿಯೇ ಕೆಳಮಹಡಿಯ ಗ್ರಿಲ್​ಗೆ ಸಿಲುಕಿಕೊಂಡಿದ್ದಾಳೆ. ನಂತರ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ.

    ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸ್​ ಮತ್ತು ಅಗ್ನಿಶಾಮಕ ದಳಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮೊದಲಿಗೆ ಕೆಳಮಹಡಿಯಲ್ಲಿ ಸುರಕ್ಷತೆಗಾಗಿ ನೆಟ್​ ಅಳವಡಿಸಿ ನಂತರ ಮೇಲಕ್ಕೆ ಹತ್ತಿ ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಹಗ್ಗವನ್ನು ಕೊಂಡೊಯ್ದಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಅದನ್ನು ಬಾಲಕಿಗೆ ನೀಡಿ ಅದರ ಸಹಾಯದಿಂದ ಆಕೆಯನ್ನು ಕೆಳಕ್ಕೆ ಇಳಿಸಿದ್ದಾರೆ.
    ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸ್ಥಳೀಯರು ಇದರ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ನೀವೂ ನೋಡಿ ಈ ಮೈ ಝುಂ ಎನಿಸುವ ವಿಡಿಯೋ: (ಕೃಪೆ- ಪುಣೆಕಾರ್​ ನ್ಯೂಸ್​)

    ದಿಢೀರ್​ ನಾಪತ್ತೆಯಾದ 6ನೇ ಕ್ಲಾಸ್​ ಬಾಲಕಿ: ಆಕೆಯ ಮೊಬೈಲ್​ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…

    ಪ್ರಿಯಕರನ ಜತೆ ಏಕಾಂತದಲ್ಲಿರುವಾಗ ನುಗ್ಗಿದ ಗಂಡ! ರಕ್ಷಣೆ ಕೋರಿ ಹೈಕೋರ್ಟ್‌ ಮೊರೆ ಹೋದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts