More

    ಸೌದಿಯಿಂದ ಭಾರತಕ್ಕೆ ಅಬ್ಬಾ ಎನ್ನುವಷ್ಟು ಭರ್ಜರಿ ಗಿಫ್ಟ್​​… ನಲುಗಿ ಹೋದ ಪಾಕಿಸ್ತಾನ!

    ದುಬೈ: ಭಾರತದ ವಿರುದ್ಧ ದ್ವೇಷ ಕಟ್ಟಿಕೊಂಡಿರುವ ತಪ್ಪಿಗೆ ಪಾಕಿಸ್ತಾನ ಇದೀಗ ನಲುಗಿ ಹೋಗಿದೆ. ಮುಸ್ಲಿಂ ರಾಷ್ಟ್ರವೇ ಆಗಿರುವ ಸೌದಿಯಿಂದಲೂ ಛೀಮಾರಿ ಹಾಕಿಸಿಕೊಳ್ಳುವ ಮೂಲಕ ಪಾಕಿಸ್ತಾನವೀಗ ತಬ್ಬಿಬ್ಬಾಗುವ ಸ್ಥಿತಿ ಉಂಟಾಗಿದೆ.

    ಇದರ ಬೆನ್ನಲ್ಲೇ ಸೌದಿ ಅರೇಬಿಯಾ ಭಾರತಕ್ಕೆ ಭರ್ಜರಿ ಗಿಫ್ಟ್​ ನೀಡಿದೆ. ಭಾರತಕ್ಕೆ 75 ಶತಕೋಟಿ ಡಾಲರ್ ಬಂಡವಾಳ ಹೂಡಲು ಸೌದಿ ಮುಂದೆ ಬಂದಿದೆ. ತಾನು ಈ ಹಿಂದೆ ಪಾಕಿಸ್ತಾನಕ್ಕೆ ನೀಡಿದ್ದ ಒಂದು ಶತಕೋಟಿ ಡಾಲರ್ ಸಾಲವನ್ನು ವಾಪಸ್​ ಪಡೆಯುವ ಮೂಲಕ ಪಾಕಿಸ್ತಾನಕ್ಕೆ ಭಾರಿ ಹೊಡೆತ ನೀಡಿದ್ದ ಸೌದಿ, ಇದೀಗ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಜತೆಗೆ, ಏಷ್ಯಾದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹ ಸಂಸ್ಥೆಗಳಲ್ಲಿ ಸೌದಿ ಅರೇಬಿಯಾ 15 ಶತಕೋಟಿ ಡಾಲರ್ ಬಂಡವಾಳ ಹೂಡಲು ಮುಂದಾಗಿದೆ.

    ಇದನ್ನೂ ಓದಿ:  ದಮ್ಮಯ್ಯ ಅಂತೀವಿ, ಕೈಬಿಡಬೇಡ್ರಪ್ಪೋ… ಗೋಳೋ ಎಂದು ಕಣ್ಣೀರು ಸುರಿಸ್ತಿದೆ ಪಾಕಿಸ್ತಾನ!

    ಇಷ್ಟೇ ಅಲ್ಲದೇ, ಭಾರತದ ತೈಲ ಸಂಸ್ಕರಣಾ ಘಟಕಗಳಲ್ಲಿ ಪಾಕಿಸ್ತಾನಕ್ಕೆ ನೀಡಲು ನಿರ್ಧರಿಸಿದ್ದ 60 ಶತಕೋಟಿ ಡಾಲರ್ ಬಂಡವಾಳವನ್ನು ಭಾರತದಲ್ಲಿ ಹೂಡಲು ಸೌದಿ ತೀರ್ಮಾನಿಸಿದೆ.

    ಕಾಶ್ಮೀರ ಹಾಗೂ ಕಿಲ್ಗಿಟ್-ಬಲ್ಟಿಸ್ತಾನ್ (ಜಿಬಿ) ತನಗೆ ಸೇರಿದ್ದೆಂದು ಹೇಳಿಕೊಂಡು ತಿರುಗುತ್ತಿದ್ದ ಪಾಕಿಸ್ತಾನಕ್ಕೆ ಭಾರಿ ಮುಖಭಂಗ ಆಗುವ ರೀತಿಯಲ್ಲಿ, ಪಾಕಿಸ್ತಾನ ಭೂಪಟದಿಂದ ಈ ಎರಡು ಪ್ರಾಂತ್ಯಗಳನ್ನು ಕಿತ್ತೆಸೆಯಲು ಭಾರತಕ್ಕೆ ಸೌದಿ ಬೆಂಬಲವಾಗಿ ನಿಂತಿರುವುದು ಈಗ ಹಳೆಯ ವಿಷಯ. ಕಳೆದ ಆಗಸ್ಟ್ 5ರಂದು ಈ ಪ್ರಾಂತ್ಯ ತನ್ನದೆಂದು ಘೋಷಿಸಿಕೊಂಡು ವಿಶ್ವಸಂಸ್ಥೆಯಲ್ಲಿ ವಿನಾಕಾರಣ ವಿವಾದ ಸೃಷ್ಟಿಸಿದ್ದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇದರಿಂದಾಗಿ ಬಾರಿ ಮುಖಭಂಗವಾಗಿತ್ತು.

    ಪಾಕಿಸ್ತಾನ ನ.15ರಂದು ಗಿಲ್ಗಿಟ್-ಬಲ್ಟಿಸ್ತಾನ್ ಪ್ರಾಂತೀಯ ಚುನಾವಣೆ ನಡೆಸಲು ಸಜ್ಜಾಗಿರುವ ಸಂದರ್ಭದಲ್ಲೇ ಪಾಕಿಸ್ತಾನದ ಭೂಪಟದಿಂದ ಈ ಪ್ರಾಂತ್ಯಗಳನ್ನು ಸೌದಿ ಅರೇಬಿಯಾ ತೆಗೆದು ಹಾಕಿರುವುದು ಭಾರೀ ಮಹತ್ವದ ಬೆಳವಣಿಗೆಯಾಗಿದೆ.

    ನವೆಂಬರ್ 21 ಮತ್ತು 22ರಂದು ನಡೆಯುವ ಜಿ-20 ಶೃಂಗಸಭೆಯ ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಲಿದೆ. ಈ ಸಂದರ್ಭದಲ್ಲಿ 20 ರಿಯಲ್ ಮೌಲ್ಯದ ಬ್ಯಾಂಕ್ ಸ್ಮರಣಿಕೆ ನೋಟುಗಳನ್ನು  ಬಿಡುಗಡೆ ಮಾಡಲಿದೆ.

    ಕಾಲೇಜು ಎದುರೇ ಯುವತಿ ಶೂಟೌಟ್​: ಮತಾಂತರಕ್ಕೆ ಒಪ್ಪದ್ದಕ್ಕೆ ನಡೆದ ಕೊಲೆ?

    ಕೋವಿಡ್​ಮುಕ್ತ ಈ ಗ್ರಾಮದಲ್ಲಿ 87 ರೂಪಾಯಿಗೆ ಸಿಗುತ್ತೆ ಮನೆ!

    ಮನೆಗೆಲಸದವರು ಬೇಕಾಗಿದ್ದಾರೆ… ಸಂಬಳ ₹18.5 ಲಕ್ಷ, ಊಟ, ವಸತಿ ಫ್ರೀ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts