More

    ಭೂಗತ ಪಾತಕಿಯರಿಗೆ ಅಂಚೆ ಇಲಾಖೆಯಿಂದ ಗೌರವ! ಎಡವಟ್ಟು ಮಾಡಿದ ಅಧಿಕಾರಿ ಸಸ್ಪೆಂಡ್​

    ಲಖನೌ: ಅಂಚೆ ಇಲಾಖೆ ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವುದು ವಾಡಿಕೆ. ವಿಶೇಷ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಗಳನ್ನು ಹೊರ ತರುವ ಸಂಪ್ರದಾಯವನ್ನು ಇಲಾಖೆ ಇಟ್ಟುಕೊಂಡಿದೆ.

    ಆದರೆ ಇದೀಗ ಉತ್ತರ ಪ್ರದೇಶದ ಅಂಚೆ ಇಲಾಖೆಯಿಂದ ಭಾರಿ ಅನಾಹುತವೇ ನಡೆದುಹೋಗಿದೆ. ಸಂಸ್ಥೆಗಳು, ವ್ಯಕ್ತಿಗಳ ವಿಶೇಷ ಸಾಧನೆ ಗುರುತಿಸಿ ಸಾಂಕೇತಿಕವಾಗಿ ಅಂಚೆಚೀಟಿ ಪ್ರಕಟಿಸಲಾಗುತ್ತದೆ. ಆದರೆ ಉತ್ತರ ಪ್ರದೇಶದ ಸರ್ಕಾರ ಹೊರತಂದಿರುವ ಅಂಚೆಚೀಟಿಯಲ್ಲಿ ಇಬ್ಬರು ಗ್ಯಾಂಗ್‌ಸ್ಟರ್‌ಗಳ ಚಿತ್ರವಿದೆ!

    ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಂಚೆ ಇಲಾಖೆ ಪ್ರಕಟಿಸಿದ ಐದು ರೂ.ನ ಅಂಚೆಚೀಟಿಯಲ್ಲಿ ಗ್ಯಾಂಗ್‌ಸ್ಟರ್‌ಗಳಾದ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಅವರ ಚಿತ್ರವಿದ್ದು, ಸರ್ಕಾರವೀಗ ಪೇಚಿಗೆ ಸಿಲುಕಿದೆ. ಅಜಾಗರೂಕತೆಯಿಂದ ಇವರ ಫೋಟೋ ಪ್ರಕಟಿಸಿರುವ ಅಂಚೆ ಇಲಾಖೆ ಅಧಿಕಾರಿಯನ್ನು ಸರ್ಕಾರ ಅಮಾನತುಗೊಳಿಸಿದೆ.

    ಭೂಗತ ಪಾತಕಿಯರಿಗೆ ಅಂಚೆ ಇಲಾಖೆಯಿಂದ ಗೌರವ! ಎಡವಟ್ಟು ಮಾಡಿದ ಅಧಿಕಾರಿ ಸಸ್ಪೆಂಡ್​

    ಈ ಗ್ಯಾಂಗ್​ಸ್ಟರ್​ಗಳ ಫೋಟೋ ಅಂಚೆ ಚೀಟಿಯಲ್ಲಿ ಬಂದದ್ದು ಹೇಗೆ ಎಂಬ ಕುರಿತು ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ನಡೆದ ತಪ್ಪುಗಳ ಬಗ್ಗೆ ಪೋಸ್ಟ್ ಮಾಸ್ಟರ್ ಜನರಲ್ ವಿ.ಕೆ.ವರ್ಮಾ ಒಪ್ಪಿಕೊಂಡಿದ್ದು, ಅದು ಗುಮಾಸ್ತರ ಕಡೆಯಿಂದ ಆದ ತಪ್ಪು ಎಂದು ಸ್ಪಷ್ಟನೆ ನೀಡಿದ್ದಾರೆ. “ಇದು ಹೇಗೆ ಸಂಭವಿಸಿತು ಮತ್ತು ಗುಮಾಸ್ತರಿಗೆ ಪಾತಕಿಗಳನ್ನು ಗುರುತಿಸಲು ಯಾಕೆ ಸಾಧ್ಯವಾಗಲಿಲ್ಲ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

    ಮಾಧ್ಯಮದೊಂದಿಗೆ ನಂಟು ಇರುವ ಯಾರೋ ಒಬ್ಬರು ಮುನ್ನ ಬಜರಂಗಿ (ಪ್ರೇಮ್ ಪ್ರಕಾಶ್) ಮತ್ತು ಛೋಟಾ ರಾಜನ್ (ಎಸ್ ರಾಜೇಂದ್ರ) ಹೆಸರಿನಲ್ಲಿ ಫಾರ್ಮ್‌ಗಳನ್ನು ಭರ್ತಿ ಮಾಡಿದ್ದರು. ಅವರ ಫೋಟೊಗಳನ್ನು ನೀಡಿದ ವ್ಯಕ್ತಿ, ತನ್ನ ಗುರುತಿನ ಚೀಟಿಯನ್ನು ತೋರಿಸಿದ್ದರು. ಅದರ ಬಗ್ಗೆ ಅಂಚೆ ನೌಕರ ಪ್ರಶ್ನಿಸಿದಾಗ, ತಮಗೆ ಅವರಿಬ್ಬರೂ ಪರಿಚಿತರು ಎಂದರು. ಅದರಿಂದ ತೃಪ್ತರಾದ ಪೋಸ್ಟ್‌ಮ್ಯಾನ್ ವಿಚಾರಣೆ ನಡೆಸದೆ ಅದನ್ನು ಮುದ್ರಣಕ್ಕೆ ಕಳುಹಿಸಿದ್ದರು ಎಂದು ವರ್ಮಾ ತಿಳಿಸಿದ್ದಾರೆ. ಕ್ಲರ್ಕ್‌ನನ್ನು ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತು ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

    ಮೈ ಸ್ಟ್ಯಾಂಪ್ ಯೋಜನೆಯಡಿ ಬಿಡುಗಡೆ:
    ಅಂಚೆ ಇಲಾಖೆಯ ಮೈ ಸ್ಟ್ಯಾಂಪ್ ಎಂಬ ಯೋಜನೆಯಡಿ 300 ರೂ. ಪಾವತಿಸಿ ಸಾಧಕರ ಫೋಟೋ ನೀಡಿ ಸ್ಟ್ಯಾಂಪ್ ಪ್ರಕಟಿಸುವ ಯೋಜನೆ ಇದೆ. ಸಂಬಂಧಪಟ್ಟ ಕುಟುಂಬದವರು ವ್ಯಕ್ತಿಯ ಸೂಕ್ತ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ. ಆದರೆ ಕಿಡಿಗೇಡಿಗಳು ಛೋಟಾ ರಾಜನ್ ಹಾಗೂ ಮುನ್ನಾ ಭಜರಂಗಿ ಚಿತ್ರವನ್ನು ನೀಡಿದ್ದಾರೆ.

    ಇವರಿಬ್ಬರೂ ತಮ್ಮ ಸಂಬಂಧಿಕರು ಎಂದು ಹೇಳಿ ಇವರ ಫೋಟೋ ನೀಡಿದ್ದಾರೆ. ಆದರೆ ಅಂಚೆ ಗುಮಾಸ್ತರು ಅದಕ್ಕೆ ಅತ್ಯಗತ್ಯವಾಗಿರುವ ಅವರ ಗುರುತಿನ ಪತ್ರಗಳನ್ನು ಕೇಳದೆ ತಲಾ 12 ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ!

    ‘ಮೈ ಸ್ಟ್ಯಾಂಪ್’ ಯೋಜನೆಯಡಿ ವ್ಯಕ್ತಿಯು ತನ್ನ ಚಿತ್ರ ಅಂಚೆ ಚೀಟಿಯಲ್ಲಿ ಬರಬೇಕು ಎಂದಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಆ ವ್ಯಕ್ತಿ ಖುದ್ದು ಅಂಚೆ ಕಚೇರಿಗೆ ಬಂದು ದಾಖಲೆಗಳನ್ನು ಸಲ್ಲಿಸಬೇಕು. ಆ ವ್ಯಕ್ತಿಯ ಫೋಟೊವನ್ನು ವೆಬ್‌ಕ್ಯಾಮ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವಷ್ಟೇ ಅಂಚೆ ಚೀಟಿಯನ್ನು ವಿತರಿಸಲಾಗುತ್ತದೆ. ಆದರೆ ಈ ಎಲ್ಲಾ ಪ್ರಕ್ರಿಯೆ ಮಾಡದೇ ಬಿಡುಗಡೆ ಮಾಡಲಾಗಿದೆ!

    ಭೂಗತ ಪಾತಕಿ ಛೋಟಾ ರಾಜನ್ ಪ್ರಸ್ತುತ ಮುಂಬೈ ಜೈಲಿನಲ್ಲಿದ್ದು, 20 ವರ್ಷಗಳಲ್ಲಿ ಕನಿಷ್ಠ 40 ಕೊಲೆ ಮಾಡಿರುವ ಆರೋಪ ಹೊತ್ತ ಮುನ್ನಾ ಭಜರಂಗಿಯನ್ನು ಜುಲೈ 9, 2018 ರಂದು ಪಶ್ಚಿಮ ಉತ್ತರಪ್ರದೇಶದ ಬಾಗ್ಪತ್ ಜೈಲಿನಲ್ಲಿ ಹತ್ಯೆ ಮಾಡಲಾಗಿತ್ತು.

    VIDEO: ಬಾಯ್​ಫ್ರೆಂಡ್​ ಜತೆ ಆನಂದದಲ್ಲಿ ಮೈಮರೆತಳು- ಹಿಂದೆ ಬೆಂಕಿ ಇದದ್ದೇ ತಿಳಿಯಲಿಲ್ಲ!

    ಮದುವೆಗೆ ಕೆಲವೇ ದಿನವಿದ್ದು, ಈಗ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದಾಳೆ- ತಲೆ ಕೆಟ್ಟುಹೋಗಿದೆ…

    ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ವಿಡಿಯೋ ಮಾರಾಟ- ಜಾಲದ ಹಿಂದೆ ಇಂಜಿನಿಯರ್​ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts