More

    11 ಸಾವಿರ ಮಂದಿ ಸಾವಿಗೆ ಕಾರಣಳಾಗಿದ್ದ ಹಿಟ್ಲರ್‌ ಕಾರ್ಯದರ್ಶಿ- ವಿಚಾರಣೆ ವೇಳೆ ಎಸ್ಕೇಪ್‌ ಆದ 96ರ ವೃದ್ಧೆ!

    ಬರ್ಲಿನ್: ಇತಿಹಾಸ ಕಂಡ ಕ್ರೂರ ವ್ಯಕ್ತಿ ಎಂದರೆ ಆತ ಹಿಟ್ಲರ್‌ ಎಂದೇ ಹೇಳಲಾಗಿತ್ತದೆ. ಎರಡನೆಯ ಮಹಾಯುದ್ಧದ ವೇಳೆ ಯಹೂದಿಗಳ ಮಾರಣಹೋಮ ಮಾಡಿದ್ದು ಇತಿಹಾಸ ಅತ್ಯಂತ ಕ್ರೂರ ಘಟನೆ. ಅದರಲ್ಲಿಯೂ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹಿಟ್ಲರನ ನಾಜಿ ಶಿಬಿರಗಳೆನ್ನುವ ನರಕದ ಬಗ್ಗೆ ಕೇಳಿದರೆ ಮೈ ಝುಂ ಎನ್ನುತ್ತದೆ. ಈ ಸಂದರ್ಭದಲ್ಲಿ ಶಿಬಿರಗಳಲ್ಲಿ ಯುದ್ಧ ಕೈದಿಗಳು, ರಾಜಕೀಯ ಕೈದಿಗಳು ಮತ್ತು ನಾಗರಿಕರನ್ನು ತುಂಬಲಾಗುತ್ತಿತ್ತು. ಅವರಿಗೆ ಅತ್ಯಂತ ಕ್ರೂರ ರೀತಿಯಲ್ಲಿ ಹಿಂಸೆ ಕೊಡಲಾಗಿತ್ತು.

    ಈ ಸಂದರ್ಭದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು. ಈ ಭಯಾನಕ ಶಿಬಿರವೊಂದರ ಕಮಾಂಡರ್ ಒಬ್ಬನ ಕಾರ್ಯದರ್ಶಿ ಆಗಿದ್ದ ಜರ್ಮನ್ ಮಹಿಳೆ ಇಮ್‌ಗಾರ್ಡ್ ಫುಷ್ನರ್‌. 1943-45ರ ಅವಧಿಯಲ್ಲಿ ಈಕೆ ಹಿಟ್ಲರ್‌ನ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಹಿಟ್ಲರ್‌ನ ಭಯಾನಕ ಕೃತ್ಯದ ಹಿಂದೆ ಈಕೆಯ ಪಾಲೂ ಇತ್ತು. ಇವಳು ಆಪ್ತ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸುಮಾರು 11 ಸಾವಿರ ಮಂದಿಯ ಮಾರಣಹೋಮ ನಡೆದಿತ್ತು.

    ಆಗ ಈಕೆಗಿನ್ನೂ 20ರ ಆಸುಪಾಸು. ಈಗ ಇವಳಿಗೆ 96 ವರ್ಷ ವಯಸ್ಸು. ಆದರೆ ಇಂದಿಗೂ ಈ ಪ್ರಕರಣದ ತನಿಖೆ ನಡೆಯುತ್ತಲೇ ಇದೆ. ಇದೀಗ ಇಮ್‌ಗಾರ್ಡ್‌ಳನ್ನು ವಿಚಾರಣೆಗೆ ಹಾಜರುಪಡಿಸುವಂತೆ ಆದೇಶವಾಗಿದೆ. ಇವಳ ವಯಸ್ಸಿನ ಮಿತಿಯನ್ನೂ ಕಡೆಗಣಿಸಿ ವಿಚಾರಣೆ ನಡೆಸಲಾಗುತ್ತಿದೆ.

    ಅನೇಕ ವರ್ಷ ವಿಚಾರಣೆ ಎದುರಿಸಿರುವ ಇಮ್‌ಗಾರ್ಡ್, ಈಗ ಮತ್ತೆ ವಿಚಾರಣೆಗೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಎಸ್ಕೇಪ್‌ ಆಗಿದ್ದಾಳೆ. ತನಿಖಾಧಿಕಾರಿಗಳು ಭೇಟಿ ನೀಡಿದಾಗ ಇವಳು ನಾಪತ್ತೆಯಾಗಿರುವ ವಿಷಯ ತಿಳಿದಿದೆ. ಈ ಇಳಿವಯಸ್ಸಿನಲ್ಲಿ ಎಲ್ಲಿ ಹೋಗಿದ್ದಾಳೆ, ಹೇಗೆ ಹೋಗಿದ್ದಾಳೆ ಎಂಬ ಬಗ್ಗೆ ತನಿಖಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸದ್ಯ ಎಲ್ಲಾ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗುತ್ತಿದೆ.

    ಗಂಡ ಖುಷಿಯಾಗಿದ್ರೆ ಡೌಟ್‌ ಬರತ್ತೆ ಮೇಡಂ… ನನ್ನನ್ನೂ ಸುಮ್‌ಸುಮ್ನೆ ಹೊಗಳ್ತಾ ಇರ್ತಾರೆ… ಏನಾದ್ರೂ…?

    ಸೀರೆಯುಟ್ಟ ಪತ್ರಕರ್ತೆಯಿಂದ ರೆಸ್ಟೋರೆಂಟ್‌ ಕ್ಲೋಸ್‌: ಎಡವಟ್ಟು ಮಾಡಿದ ಓನರ್‌ಗೆ ಗ್ರಹಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts