More

    ಪ್ರವಾಹದ ವೇಳೆ ಸೆಲ್ಫಿ ಆಸೆನಾ? ಹಾಗಿದ್ರೆ ಆರು ತಿಂಗಳು ಜೈಲಿಗೆ ಹೋಗಲು ರೆಡಿಯಾಗಿ!

    ಬೆಂಗಳೂರು: ಪ್ರವಾಹದಿಂದಾಗಿ ಅನೇಕ ಜಿಲ್ಲೆಗಳು ನಲುಗಿ ಹೋಗಿರುವ ನಡುವೆಯೇ ಕೆಲವರಿಗೆ ಅದರಲ್ಲಿಯೂ ಹೆಚ್ಚಾಗಿ ಯುವತಿಯರಿಗೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ ಶುರುವಾಗಿದೆ.

    ಇದಾಗಲೇ ಸೆಲ್ಫಿ ವ್ಯಾಮೋಹಕ್ಕೆ ಬಿದ್ದು ಎಷ್ಟೋ ಮಂದಿ ಜೀವ ಕಳೆದುಕೊಂಡಿದ್ದರೂ ಬುದ್ಧಿ ಇಲ್ಲದ ಜನರು, ಪ್ರವಾಹದ ಸಂದರ್ಭದಲ್ಲಿಯೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾಹಸ ಮಾಡುವವರಿದ್ದಾರೆ.

    ಇದು ಕೆಲವು ಕಡೆಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ, ಜಪಲಾತಗಳ ಬಳಿ, ಪ್ರವಾಹದಿಂದ ನೀರು ಧುಮ್ಮಿಕ್ಕುತ್ತಿರುವ ಸ್ಥಳಗಳ ಕಡೆಗಳಲ್ಲಿ ಇಂಥ ಹುಚ್ಚಾಟ ಪ್ರದರ್ಶಿಸುವವರಿಗೆ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ ಆರು ಟಿಎಂಸಿ ನೀರು; ನಾಲ್ಕು ತಾಲೂಕುಗಳಲ್ಲಿ ಪ್ರವಾಹ ಭೀತಿ

    ಮಳೆಯ ಅಬ್ಬರದಿಂದಾಗಿ ಜಲಪಾತಗಳು ಭೋರ್ಗರೆಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಿರುವ ಸಂದರ್ಭದಲ್ಲಿಯೇ ಧುಮುಕುತ್ತಿರುವ ಜನಪಾತ ಸೇರಿದಂತೆ ಪ್ರವಾಹದ ಅಪಾಯವನ್ನು ಲೆಕ್ಕಿಸದೇ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಅಂಥವರಿಗೆ ಆರು ತಿಂಗಳು ಶಿಕ್ಷೆ ನೀಡಲಾಗುವುದು ಎಂಬ ಎಚ್ಚರಿಕಾ ಫಲಕವನ್ನು ಎಲ್ಲೆಡೆ ಅಳವಡಿಸುವಂತೆ ಸಚಿವ ಆರ್‌ ಅಶೋಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಹಾಸನಕ್ಕೆ ಭೇಟಿ ಕೊಟ್ಟಿದ್ದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಈ ಕುರಿತು ಮಾತನಾಡಿ, ಫಲಕ ಅಳವಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

    ಒಂದು ವೇಳೆ ಈ ಎಚ್ಚರಿಕೆ ಫಲಕವನ್ನು ಮೀರಿ ಸೆಲ್ಫಿ ತೆಗೆದುಕೊಂಡರೆ ಅಂಥವರನ್ನು ಬಂಧಿಸಬೇಕು ಎಂದು ಅವರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts