More

    ಪಂಚ ರಾಜ್ಯಗಳ ಚುನಾವಣೆಗೆ ಇವರೇ ಉಸ್ತುವಾರಿಗಳು: ಶೋಭಾಗೂ ಸ್ಥಾನ- ಇಲ್ಲಿದೆ ಸಂಪೂರ್ಣ ವಿವರ

    ನವದೆಹಲಿ: 2022ರಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯಲಿದೆ. ಪಂಜಾಬ್, ಉತ್ತರಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ್‌ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಸರ್ವ ಪಕ್ಷಗಳು ಭರದ ಸಿದ್ಧತೆ ನಡೆಸಿವೆ.

    ಈ ನಡುವೆಯೇ ಭಾರತೀಯ ಜನತಾ ಪಕ್ಷ ಐದು ರಾಜ್ಯಗಳ ಉಸ್ತುವಾರಿಗಳ ಹೆಸರನ್ನು ಪ್ರಕಟ ಮಾಡಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಬಹು ಪ್ರಮುಖ ಕಣ ಎಣಿಸಿರುವ ಉತ್ತರ ಪ್ರದೇಶದ ಉಸ್ತುವಾರಿಯನ್ನು ವಹಿಸಿ ಕೊಡುವ ಜತೆಗೆ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಉಳಿದಂತೆ ಎಂಟು ಮಂದಿ ಕೇಂದ್ರ ಸಚಿವರಿಗೆ ಉತ್ತರ ಪ್ರದೇಶದ ಜವಾಬ್ದಾರಿಯನ್ನು ನೀಡಲಾಗಿದೆ.

    ಈ ಉಸ್ತುವಾರಿಯಲ್ಲಿ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ಸ್ಥಾನ ನೀಡಲಾಗಿದೆ. ಉಳಿದಂತೆ ಸಚಿವರಾದ ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಸರೋಜ್ ಪಾಂಡೆ, ಕ್ಯಾಪ್ಟನ್ ಅಭಿಮನ್ಯು, ಅನ್ನಪೂರ್ಣ ದೇವಿ ಮತ್ತು ವಿವೇಕ್ ಠಾಕೂರ್ ಅವರಿಗೆ ಸಹ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.

    ಪಂಜಾಬ್‌ನ ಜವಾಬ್ದಾರಿಯನ್ನು ಸಚಿವ ಗಜೇಂದ್ರ ಸಿಂಗ್ ಶೆಖಾವತ್ ನೇತೃತ್ವದಲ್ಲಿ ಹರ್ದೀಪ್ ಪುರಿ, ಮೀನಾಕ್ಷಿ ಲೇಖಿ, ವಿನೋದ್ ಚಾವ್ಡಾ ಅವರಿಗೆ ನೀಡಲಾಗಿದೆ. ಸಚಿವ ಪ್ರಹ್ಲಾದ್ ಜೋಶಿ ಉತ್ತರಾಖಂಡದ ಮುಖ್ಯ ಉಸ್ತುವಾರಿ ವಹಿಸಲಿದ್ದು ಅವರ ಜತೆಗೆ, ಲಾಕೆಟ್ ಚಟರ್ಜಿ ಮತ್ತು ಸರ್ದಾರ್ ಆರ್‌.ಪಿ. ಸಿಂಗ್ ಇರಲಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೋವಾ ಉಸ್ತುವಾರಿ ವಹಿಸಿಕೊಂಡಿದ್ದು, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮಣಿಪುರದ ಉಸ್ತುವಾರಿ ಹೊರಲಿದ್ದಾರೆ.

    VIDEO: ಬೆಳ್ಳಂಬೆಳಗ್ಗೆ ಜನರನ್ನು ಬೇಸ್ತುಬೀಳಿಸಿದ ಕಾಂಡೋಮ್‌- ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ…

    ಬ್ರಾಹ್ಮಣರನ್ನು ಬಹಿಷ್ಕರಿಸಿ ಎಂದ ಸಿಎಂ ತಂದೆ ಅರೆಸ್ಟ್‌: ಅಪ್ಪನನ್ನು ಬಂಧಿಸಿದ್ದು ಸರಿ ಎಂದ ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts