More

    ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಕಪ್ಪು ವರ್ಣೀಯ ಸಲಿಂಗಿ!

    ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ಗೆ ಚುನಾಯಿತರಾದ ಮೊದಲ ಕಪ್ಪುವರ್ಣೀಯ ಸಲಿಂಗಿ ಎಂಬ ಖ್ಯಾತಿ ಗಳಿಸಿದ್ದಾರೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ರಿಚಿ ಟೋರೆಸ್.

    ಈ ಮೂಲಕ ಅಮೆರಿಕ ಚುನಾವಣೆಯಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ತಾವು ಸಲಿಂಗಿ ಎಂದು ಬಹಿರಂಗವಾಗಿ ಹೇಳಿಕೊಂಡ ಯಾವುದೇ ಕಪ್ಪು ವರ್ಣೀಯ ಅಭ್ಯರ್ಥಿ ಕಾಂಗ್ರೆಸ್ ಪ್ರವೇಶಿಸಿರಲಿಲ್ಲ. ಆದರೆ ರಿಚಿ ಅವರು ತಮ್ಮ ಬಗ್ಗೆ ಬಹಿರಂಗವಾಗಿಯೇ ಘೋಷಿಸಿಕೊಂಡಿದ್ದರು. ಈ ಮೂಲಕ ಅಮೆರಿಕದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

    ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವುದು ನಾನೇ: ಇಲ್ಲದಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗುವೆ…

    ರಿಪಬ್ಲಿಕನ್ ಪಕ್ಷದ ಪ್ಯಾಟ್ರಿಕ್ ಡೆಲಿಸಸ್ ಎದುರು ಅವರು ಭರ್ಜರಿ ಗೆಲುವು ಸಾಧಿಸಿರುವ 32 ವರ್ಷ ವಯಸ್ಸಿನ ರಿಚಿ ಅವರು, 2013ರಿಂದ ನ್ಯೂಯಾರ್ಕ್ ನಗರ ಕೌನ್ಸಿಲ್ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ನ್ಯೂಯಾರ್ಕ್‌ನ 15ನೇ ಕಾಂಗ್ರೆಸ್ ಜಿಲ್ಲೆಯಿಂದ ಇದೀಗ ಇವರು ಗೆಲುವು ಸಾಧಿಸಿದ್ದಾರೆ.

    ದಕ್ಷಿಣ ಬ್ರಾಂಕ್ಸ್‌ನಲ್ಲಿ ಇಂದು ಹೊಸ ಯುಗ ಆರಂಭವಾಗಿದೆ ಎಂದು ರಿಚಿ ಟೊರೇಸ್‌ ತಮ್ಮ ಜಯವನ್ನು ಬಣ್ಣಿಸಿದ್ದಾರೆ. ಆಫ್ರಿಕನ್‌ ಹಾಗೂ ಲ್ಯಾಟೀನ್‌ ಮಿಶ್ರಣ ಪ್ರಜೆಯಾಗಿರುವ ರಿಚಿ, ತಮ್ಮನ್ನು ಆಫ್ರೋ-ಲ್ಯಾಟಿನ್ ಎಂದು ಗುರುತಿಸಿಕೊಂಡಿದ್ದಾರೆ.

    ರಿಪಬ್ಲಿಕನ್ ಪಕ್ಷದ ಜೋಸ್ ಸೆರ್ರಾನೊ ವರ್ಷದ ಆರಂಭದಲ್ಲಿ ತಮ್ಮ ನಿವೃತ್ತಿ ಘೋಷಿಸಿದ ಬಳಿಕ ಜೂನ್‌ನಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಅವರು ಸುಮಾರು 12 ಡೆಮಾಕ್ರಟಿಕ್ ಅಭ್ಯರ್ಥಿಗಳನ್ನು ಸೋಲಿಸಿದ್ದರು.

    ಮತ್ತೊಬ್ಬ ಕಪ್ಪು ವರ್ಣೀಯ ಸಲಿಂಗಿ ಮೊಂಡೈರ್ ಜೋನ್ಸ್ ವೆಸ್ಟ್‌ಚೆಸ್ಟರ್ ಕೌಂಟಿಯಿಂದ ಸ್ಪರ್ಧಿಸಿದ್ದು, ಅವರ ಫಲಿತಾಂಶ ಇನ್ನೂ ಹೊರಬಂದಿಲ್ಲ. 33 ವರ್ಷದ ಜೋನ್ಸ್ ರಿಪಬ್ಲಿಕನ್ ಅಭ್ಯರ್ಥಿಗಿಂತ ಮುನ್ನಡೆ ಪಡೆದಿದ್ದರು.

    ಜೂಜಾಟಕ್ಕೆ ಪ್ರೇರಣೆ: ಹೈಕೋರ್ಟ್‌ ನೋಟಿಸ್‌ ಕುಣಿಕೆಯಲ್ಲಿ ಸಿನಿ, ಕ್ರಿಕೆಟ್‌ ತಾರೆಯರು

    ಅಕ್ರಮ ಆಸ್ತಿ ವಿವಾದ: 3 ಕೇಸ್‌ ವಾಪಸ್‌ ಪಡೆದ ವಕೀಲ- ಬಿಎಸ್‌ವೈ ಫುಲ್‌ ಖುಷ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts