More

    ಬೆಳ್ಳಂಬೆಳಕ್ಕೆ ಮಾಸ್ಕ್‌ ಘಟಕದಲ್ಲಿ ಅಗ್ನಿ ಸ್ಫೋಟ: ಒಬ್ಬನ ಸಜೀವ ದಹನ

    ನವದೆಹಲಿ : ಮಾಸ್ಕ್ ಉತ್ಪಾದನಾ ಕಾರ್ಖಾನೆಯಲ್ಲಿ ಇಂದು ನಸುಕಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ. ಉಳಿದವರನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲುಮಾಡಲಾಗಿದೆ.

    ನವದೆಹಲಿಯ ಮಾಯಾಪುರಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ನಸುಕಿನ ಸುಮಾರು 3.54ಕ್ಕೆ ಈ ದುರ್ಘಟನೆ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ವಿಷಯ ತಿಳಿದ ತಕ್ಷಣ ದೆಹಲಿ ಅಗ್ನಿಶಾಮಕ ದಳದ 6 ವಾಹನ ತೆರಳಿ ಕಾರ್ಯಾಚರಣೆ ನಡೆಸಿದೆ. ಮೃತರನ್ನು ಜುಗಲ್ ಕಿಶೋರ್ ಎಂದು ಗುರುತಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್ ಗರ್ಗ್ ತಿಳಿಸಿದ್ದಾರೆ. ಅಗ್ನಿ ಅವಘಢ ಸಂಭವಿಸಿರುವ ಬಗ್ಗೆ ಕರೆ ಸ್ವೀಕರಿಸಲಾಗಿದ್ದು, ಆರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅವರು ಹೇಳಿದರು.

    ಉತ್ಪಾದನಾ ಘಟಕದ ಮೂರನೇ ಮಹಡಿಯಲ್ಲಿರುವ ಯಂತ್ರಗಳು ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾದ ನಂತರ ಈ ದುರ್ಘಟನೆ ಸಂಭವಿಸಿರುವುದಾಗಿ ಅವರು ಹೇಳಿದ್ದಾರೆ.

    ಡಿಎಫ್ ಎಸ್ ತಂಡ ಘಟಕದ ಬಾಗಿಲುಗಳು ಮತ್ತು ಗೋಡೆಗಳನ್ನು ಮುರಿದ ನಂತರ ಮೂವರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು. ರಕ್ಷಿಸಲ್ಪಟ್ಟವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದೆ.

    ಕೆಲಸ ಸಿಗುತ್ತಿದ್ದಂತೆಯೇ ಇನ್ನೊಬ್ಬನ ಪ್ರೀತಿಸಿದಳು: ಬೆಂಕಿ ಹಚ್ಚಿ ಸಾಯಿಸಿದ ಮಾಜಿ ಪ್ರೇಮಿ!

    ಲಸಿಕೆಯಲ್ಲಿ ಹಂದಿಮಾಂಸ: ಅಲ್ಲಿಯವರು ಓಕೆ ಎಂದರು, ಇಲ್ಲಿಯವರು ಇದು ‘ಹರಾಂ’ ಎಂದರು

    ಸೌದಿಯಿಂದ ಬಂದ ಭಾವಿಪತಿಗಾಗಿ ಮದುಮಗಳು ರೆಡಿಯಾಗಿ ಕುಳಿತರೆ ವರ ಹೀಗೆ ಮಾಡೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts