More

    ಪಟಾಕಿ ಅಂಗಡಿಗೆ ಬೆಂಕಿ: ದೀಪಾವಳಿ ಹಬ್ಬದ ಖರೀದಿಗೆ ಹೋದ ಐವರ ಸಜೀವ ದಹನ!

    ಚೆನ್ನೈ: ದೀಪಾವಳಿ ಹಬ್ಬ ಎಂದರೆ ಎಲ್ಲೆಡೆ ಪಟಾಕಿಗಳ ಸಂಭ್ರಮ. ಪಟಾಕಿ ಹೊಡೆದು ದೀಪಾವಳಿಯನ್ನು ಸಂಭ್ರಮಿಸುವ ಸಲುವಾಗಿ ಪಟಾಕಿ ಖರೀದಿಗೆ ಹೋದ ಐವರು ಪಟಾಕಿ ಅಂಗಡಿಯಲ್ಲಿಯೇ ಸಜೀವವಾಗಿ ದಹಿಸಿಹೋದ ದಾರುಣ ಘಟನೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ಶಂಕರಪುರದಲ್ಲಿ ನಡೆದಿದೆ.

    ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಕೆಲವರ ಸ್ಥಿತಿ ಚಿಂತಾಜನವಾಗಿದೆ. ಪಟಾಕಿ ಖರೀದಿಗೆ ಈ ಅಂಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದ್ದಕ್ಕಿದ್ದಂತೆಯೇ ಬೆಂಕಿ ಸ್ಫೋಟಗೊಂಡಿದೆ. ಏನಾಯಿತು ಎಂದು ನೋಡುವಷ್ಟರಲ್ಲಿಯೇ ಬೆಂಕಿ ಕೆನ್ನಾಲಿಗೆ ಚಾಚಿ ಅಕ್ಕಪಕ್ಕದ ಅಂಗಡಿಗೂ ಹೊತ್ತಿಕೊಂಡಿದೆ. ಅಂಗಡಿಯಲ್ಲಿ ಇರಿಸಿದ್ದ ಸಿಲಿಂಡರ್ ಕೂಡ ಸ್ಫೋಟಗೊಂಡಿದ್ದರಿಂದ ಹೆಚ್ಚಿನ ಅನಾಹುತವಾಗಿದೆ.

    ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಬಂದರೂ ಐವರು ಅದಾಗಲೇ ಮೃತಪಟ್ಟಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿ, ಕೆಲವರನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts