More

    ಶುರುವಾಯ್ತು ರಸಗೊಬ್ಬರ ಫೈಟ್​: ಸಿದ್ದರಾಮಯ್ಯ ಟ್ವೀಟ್​ಗೆ ಸಚಿವರು ಗರಂ ಗರಂ…

    ಬೆಂಗಳೂರು: ಹಳೆಯ ದಾಸ್ತಾನು ರಸಗೊಬ್ಬರ ಹಳೇ ದರದಲ್ಲಿ ಮಾರಾಟ ಮಾಡುವ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ರೈತರ ದಿಕ್ಕು ತಪ್ಪಿಸುತ್ತಿದ್ದಾರೆಯೆ ?

    ಹಾಗಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ಟೀಕಾ ಪ್ರಹಾರ ಮಾಡಿದ್ದಾರೆ. ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಸೂಚನೆಗೆ ವಿರುದ್ಧವಾಗಿ ಕೃಷಿ ಇಲಾಖೆ ಆದೇಶ ಹೊರಡಿಸಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಹಳೆಯ ರಸಗೊಬ್ಬರ ದಾಸ್ತಾನನ್ನು ಹಳೆಯ ದರದಲ್ಲೇ ಮಾರಾಟ ಮಾಡಬೇಕೆಂದು ರಸಗೊಬ್ಬರ ಮಾರಾಟಗಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ಸಹ ಮಾಡಲಾಗುತ್ತಿದೆ. ಕೇಂದ್ರದ ಸೂಚನೆ‌ಗೆ ವಿರುದ್ಧವಾಗಿ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ದಾಸ್ತಾನು ಅಂಕಿ-ಅಂಶ
    ಎಪ್ರಿಲ್ ತಿಂಗಳಲ್ಲಿ ಡಿ.ಎ.ಪಿ. ರಸಗೊಬ್ಬರಕ್ಕೆ ಬೇಡಿಕೆ 77920 ಮೆ.ಟನ್ ಇದ್ದು, ಈಗಾಗಲೇ 125860 ಮೆ.ಟನ್ ದಾಸ್ತಾನಿರುತ್ತದೆ.

    ಮುಂಗಾರು ಹಂಗಾಮಿನ (ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ) ಕಾಂಪ್ಲೆಕ್ಸ್ (NPK fertilizer) ರಸಗೊಬ್ಬರಗಳ ಒಟ್ಟು ಬೇಡಿಕೆ 10.03 ಲಕ್ಷ ಮೆ.ಟನ್ ಇದ್ದು ಏಪ್ರಿಲ್ ತಿಂಗಳ ಬೇಡಿಕೆ 1.68 ಲಕ್ಷ ಮೆ.ಟನ್ ಇರುತ್ತದೆ. ಈಗಾಗಲೇ 5.19 ಲಕ್ಷ ಮೆ.ಟನ್ ದಾಸ್ತಾನಿದೆ ಎಂದು ಬಿ.ಸಿ.ಪಾಟೀಲ್ ಮಾಹಿತಿ ನೀಡಿದ್ದಾರೆ.

    ಸರ್ಪದೋಷ ಪರಿಹಾರಕ್ಕಾಗಿ ಹೆತ್ತ ಹಸುಗೂಸಿನ ಗಂಟಲು ಸೀಳಿದ ಮಹಿಳೆ ಸಂತೋಷದಿಂದ ಕುಣಿದಾಡಿದಳು!

    ಹನಿಮೂನ್​ನಲ್ಲಿರೋ ಅರೆಬರೆ​ ಡ್ರೆಸ್​ ವಿಡಿಯೋ ಶೇರ್​ ಮಾಡಿ ಎನ್​ಜಾಯ್​ ಮಾಡಿ ಎಂದ ನಟಿ- ನೆಟ್ಟಿಗರು ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts