More

    ಅತಿವೃಷ್ಟಿ ಕುರಿತು ಪ್ರತಿಪಕ್ಷಗಳಿಂದ ಮನೆಯಲ್ಲೇ ಕುಳಿತು ಟೀಕೆ: ಬಿಎಸ್‌ವೈ ಗರಂ

    ಶಿವಮೊಗ್ಗ: ಅತಿವೃಷ್ಟಿ ಕುರಿತು ಪ್ರತಿಪಕ್ಷಗಳು ಮನೆಯಲ್ಲೇ ಕುಳಿತು ಟೀಕೆ ಮಾಡುತ್ತಿವೆ. ಆದರೆ, ಸಚಿವರು ಹಾಗೂ ಬಿಜೆಪಿ ಶಾಸಕರು ಪ್ರವಾಸ ಕೈಗೊಂಡು ಸಂಕಷ್ಟಕ್ಕೆ ಒಳಗಾದವರನ್ನು ಸಂತೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅತಿವೃಷ್ಟಿಗೆ ಸರ್ಕಾರವಾಗಲಿ ಅಥವಾ ಸಚಿವರಾಗಲಿ ಪ್ರವಾಸ ಕೈಗೊಂಡಿಲ್ಲ ಎಂಬ ವಿಪಕ್ಷಗಳ ಹೇಳಿಕೆಯಲ್ಲಿ ಸತ್ಯವಲ್ಲ ಎಂದರು.

    ರಾಜ್ಯದಲ್ಲಿ ಸತತ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ರೈತರ ಬೆಳೆ ಹಾನಿಯಾಗಿದೆ. 500ರಿಂದ 600 ಕೋಟಿ ರೂ. ಪರಿಹಾರ ಘೋಷಿಸಲಾಗಿದೆ. ಇಷ್ಟಾದರೂ ರೈತರು ಸಂಕಷ್ಟದಲ್ಲಿರುವುದು ಗಮನದಲ್ಲಿದೆ. ಶೀಘ್ರವೇ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ಬಿಎಸ್​ವೈ ಹೇಳಿದರು.

    ಎಂಎಲ್‌ಸಿ ಚುನಾವಣೆ ಸಂಬಂಧ ಪಕ್ಷದ ಅಭ್ಯರ್ಥಿಗಳ ಪರ ಬುಧವಾರದಿಂದ ಪ್ರಚಾರ ಆರಂಭಿಸಲಾಗಿದೆ. ಶಿಕಾರಿಪುರ, ಶಿರಾಳಕೊಪ್ಪ ಸೇರಿದಂತೆ ಮೂರ್ನಾಲ್ಕು ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರ ಮಾಡಲಾಗುವುದು. ವಿಧಾನ ಪರಿಷತ್‌ನಲ್ಲಿ ಈ ಬಾರಿ 15 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಪುನರುಚ್ಛರಿಸಿದರು.

    ರಾಜ್ಯದಲ್ಲಿ ಬುಧವಾರ ನಡೆದ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಸಹಜ ಪ್ರಕ್ರಿಯೆ. ಎಸಿಬಿ ತನ್ನ ಕೆಸಲವನ್ನು ಮಾಡಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ದುಬಾರಿ ಟೊಮ್ಯಾಟೊಗೆ ಗೌರಿಬಿದನೂರಲ್ಲಿ ಇಬ್ಬರು ಬಲಿ! ತೋಟದಲ್ಲೇ ನಡೀತು ಘೋರ ಕೃತ್ಯ, ಇಲ್ಲಿ ಯಾರದ್ದು ತಪ್ಪು?

    ಟೆಕ್ಕಿ ಜತೆ ರಿಸೆಪ್ಷನ್​ ಮಾಡ್ಕೊಂಡ ಚನ್ನಪಟ್ಟಣ ವಧು: ಮಧ್ಯರಾತ್ರಿ ಆಕೆ ಮಾಡಿದ ಕೆಲ್ಸಕ್ಕೆ ಮದ್ವೆಯೇ ಮುರಿದು ಬಿತ್ತು

    ಅಪ್ಪು ಅಗಲಿಕೆ ನೋವು ಇನ್ನೂ ಮಾಸಿಲ್ಲ… ಈಗಲೇ ಇದೆಲ್ಲಾ ಬೇಕಿತ್ತಾ? ಸುಮಲತಾ ಅಂಬರೀಷ್​ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts