More

    ಭಾರತದ ರೈತರ ಪ್ರತಿಭಟನೆ ಮಧ್ಯೆ ಪ್ರವೇಶಿಸಿದ ಕೆನಡಾ ಪ್ರಧಾನಿ

    ಒಂಟಾರಿಯೊ: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡಿಯೋ ಹೇಳಿದ್ದಾರೆ.

    ಪ್ರತಿಭಟಿಸುವ ಹಕ್ಕನ್ನು ಜನರಿಗೆ ನೀಡಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಯಬೇಕು. ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅವರಿಗೆ ಅವಕಾಶ ನೀಡಬೇಕು ಎಂದು ಟ್ರುಡಿಯೋ ಹೇಳಿದ್ದಾರೆ.

    ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸೇರಿದಂತೆ ಕೆಲವರು ನೀಡಿರುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಗಮನಿಸಿರುವ ಕೆನಡಾ ಪ್ರಧಾನಿ, ಇಲ್ಲಿ ರೈತರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿದುಕೊಂಡು ಈ ಮಾತನ್ನು ಹೇಳಿದ್ದಾರೆ.

    ಕೆನಡಾದ ರಕ್ಷಣಾ ಸಚಿವ ಹರ್ಜಿತ್ ಸಿಂಗ್ ಸಜ್ಜನ್ ಕೂಡ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು ಹಾಗೂ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿಯಬೇಕೆಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಪ್ರಧಾನಿಯೂ ಹೇಳಿಕೆ ನೀಡಿದ್ದಾರೆ.

    ಈ ಮೂಲಕ ಭಾರತದಲ್ಲಿನ ರೈತರ ಪ್ರತಿಭಟನೆಗಳ ಕುರಿತು ಹೇಳಿಕೆ ನೀಡಿದ ಮೊದಲ ಅಂತಾರಾಷ್ಟ್ರೀಯ ನಾಯಕ ಎನಿಸಿಕೊಂಡಿದ್ದಾರೆ.

    ಗುರು ನಾನಕ್ ಜಯಂತಿಯಂದು ಕೆನಡಾ ನಾಗರಿಕರಿಗೆ ಮುಖ್ಯವಾಗಿ ಸಿಖ್ ಪಂಥೀಯರಿಗೆ ಶುಭಾಶಯ ಕೋರಿದ ಅವರು ನಂತರ ಭಾರತದ ವಿಷಯವಾಗಿ ಮಾತನಾಡಿದ್ದಾರೆ. ಈ ಕುರಿತು ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ರೈತರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ನೀಡಬೇಕು. ಕೆನಡಾ ಪ್ರತಿಭಟಿಸುವ ಹಕ್ಕನ್ನು ಸಮರ್ಥಿಸುತ್ತದೆ’ ಎಂದು ಹೇಳಿದ್ದಾರೆ.

    `ರೈತರ ಪ್ರತಿಭಟನೆಗಳು ನಡೆಯುತ್ತಿರುವ ಭಾರತದ ಕುರಿತಾದ ಸುದ್ದಿಗಳ ಬಗ್ಗೆ ಉಲ್ಲೇಖಿಸದೆ ನನ್ನ ಮಾತುಗಳನ್ನು ಆರಂಭಿಸುವುದು ಸರಿಯಾಗದು. ಪರಿಸ್ಥಿತಿ ಕಳವಳಕಾರಿಯಾಗಿದೆ. ನಾವೆಲ್ಲರೂ ನಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದೇವೆ. ಶಾಂತಿಯುತ ಪ್ರತಿಭಟನಾಕಾರರ ಹಕ್ಕುಗಳನ್ನು ಕೆನಡಾ ಯಾವತ್ತೂ ಸಮರ್ಥಿಸುತ್ತದೆ ಎಂದು ನಿಮಗೆ ನೆನಪಿಸಲು ಇಚ್ಛಿಸುತ್ತೇನೆ. ಭಾರತೀಯ ಪ್ರಾಧಿಕಾರಗಳಿಗೆ ತಿಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿದ್ದೇವೆ. ನಾವೆಲ್ಲರೂ ಜತೆಯಲ್ಲಿರಬೇಕಾದ ಕ್ಷಣವಿದು,” ಎಂದು ಪ್ರಧಾನಿ ಹೇಳಿದ್ದಾರೆ.

    ಕೆನಡಾ ಪ್ರಧಾನಿ ಹಾಗೂ ರಕ್ಷಣಾ ಸಚಿವರ ಹೇಳಿಕೆಗಳಿಗೆ ಭಾರತ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ?

    ಅಮ್ಮಾ ಗ್ಯಾಂಗ್​ರೇಪ್​ ಆಯ್ತು ಎಂದ್ಳು 14ರ ಬಾಲೆ: ಸತ್ಯ ಗೊತ್ತಾಗಿ ಮೂರ್ಛೆಹೋದ ಪಾಲಕರು!

    ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts