More

    ಮನೆಗೆಲಸದವರು ಬೇಕಾಗಿದ್ದಾರೆ… ಸಂಬಳ ₹18.5 ಲಕ್ಷ, ಊಟ, ವಸತಿ ಫ್ರೀ…

    ಲಂಡನ್: ಮನೆಯಲ್ಲಿ ಕೆಲಸ ಮಾಡಲು ಕೆಲಸದವರು ಬೇಕಾಗಿದ್ದಾರೆ. ವಾರಕ್ಕೆ ಐದು ದಿನ ಮಾತ್ರ ಕೆಲಸ, ವಾರದ ರಜೆಗಳ ಜತೆಗೆ 33 ದಿನಗಳ ಇತರ ರಜೆಯ ಸೌಲಭ್ಯಗಳೂ ಇರಲಿವೆ… ಸಂಬಳ 18.5 ಲಕ್ಷ ರೂಪಾಯಿಗಳು…

    ಇದೇನು ಕನಸು ಎಂದುಕೊಂಡ್ರಾ? ಇದು ನಿಜವಾಗಿಯೂ ನೀಡಿರುವ ಜಾಹೀರಾತು. ಈ ಜಾಹೀರಾತನ್ನು ನೀಡಿರುವವರು ಬ್ರಿಟನ್‌ನ ರಾಜಮನೆತನದ ಕುಟುಂಬ!

    ವಿಂಡ್ಸರ್ ಕ್ಯಾಸ್ಟಲ್ ಅರಮನೆಗೆ ಮನೆಗೆಲಸದವರೊಬ್ಬರ ಕೆಲಸಕ್ಕೆ ಸೂಕ್ತ ಕೆಲಸಗಾರರನ್ನು ರಾಜಮನೆತನ ಹುಡುಕುತ್ತಿದೆ. 19,140.09 ಡಾಲರ್​ ಅಂದರೆ ಇಂದಿನ ಭಾರತದ ರೂಪಾಯಿಯಲ್ಲಿ 18,40,577 ರೂಪಾಯಿ ಆರಂಭಿಕ ವೇತನವನ್ನು ನೀಡುವುದಾಗಿ ರಾಯಲ್ ಹೌಸ್‌ಹೋಲ್ಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

    ಈ ನೇಮಕಾತಿ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, ಲೆವೆಲ್ 2 ಅಪ್ರೆಂಟೈಸ್‌ಶಿಪ್ ಎಂದು ಕೆಲಸದ ಹುದ್ದೆಯನ್ನು ನಮೂದಿಸಲಾಗಿದೆ.’ಈ ಉದ್ಯೋಗವು ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಲು ಅವಕಾಶ ನೀಡಲಿದೆ. ಅದ್ಭುತ ಸ್ಥಳದಲ್ಲಿ ಅಮೋಘ ಸೇವೆಯನ್ನು ಇದು ಬಯಸುತ್ತದೆ. ರಾಯಲ್ ಹೌಸ್‌ಹೋಲ್ಡ್‌ನಲ್ಲಿ ಅಪ್ರೆಂಟೈಸ್‌ಶಿಪ್ ಮಾಡುವುದು ವಿಭಿನ್ನವಾಗಿರಲಿದೆ’ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: ಕಾಲೇಜು ಎದುರೇ ಯುವತಿ ಶೂಟೌಟ್​: ಮತಾಂತರಕ್ಕೆ ಒಪ್ಪದ್ದಕ್ಕೆ ನಡೆದ ಕೊಲೆ?

    ಅಂದಹಾಗೆ, ಕೆಲಸ ಹೇಗೆ ಮಾಡಬೇಕು, ಯಾವೆಲ್ಲಾ ಕೆಲಸಗಳು ಇರಲಿವೆ ಎಂಬ ಬಗ್ಗೆ ಆಯ್ಕೆಯಾದವರಿಗೆ 13 ತಿಂಗಳು ಸೂಕ್ತ ತರಬೇತಿ ಕೂಡ ನೀಡಲಾಗುತ್ತದೆ. ಇದರಲ್ಲಿ ಸೈ ಎನಿಸಿಕೊಂಡರೆ ಅವರಿಗೆ ಉದ್ಯೋಗ ನೀಡಲಾಗುತ್ತದೆ. ಎರಡು ದಿನಗಳು ರಜೆ ಇರಲಿದ್ದು, ವಾಸದ ಸೌಲಭ್ಯ ಹಾಗೂ ಊಟದ ವ್ಯವಸ್ಥೆಯೂ ಇರಲಿದೆ. ಅಭ್ಯರ್ಥಿಯ ಪ್ರಯಾಣ ಭತ್ಯೆ ಸೇರಿದಂತೆ ಇತರೆ ಒಟ್ಟಾರೆ ವೆಚ್ಚಗಳನ್ನು ಸಹ ಅರಮನೆಯೇ ಭರಿಸುತ್ತದೆ.

    ಮನೆಗೆಲಸದವರು ಬೇಕಾಗಿದ್ದಾರೆ... ಸಂಬಳ ₹18.5 ಲಕ್ಷ, ಊಟ, ವಸತಿ ಫ್ರೀ...ಅರ್ಜಿದಾರರು ಇಂಗ್ಲಿಷ್ ಹಾಗೂ ಗಣಿತದಲ್ಲಿ ಪದವಿ ಪಡೆದಿರಬೇಕು. ಆದರೆ ಆಯ್ಕೆಯಾಗುವ ಅಭ್ಯರ್ಥಿಗೆ ಈ ಅರ್ಹತೆ ಇಲ್ಲದೆ ಇದ್ದರೂ, ಆ ವಿದ್ಯಾರ್ಹತೆ ಪಡೆದುಕೊಳ್ಳಲು ರಾಜಮನೆತನದ ಕಾರ್ಯಕ್ರಮ ನೆರವು ನೀಡಲಿದೆ. ಅರಮನೆಯ ಒಳಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಮುಖ ಜವಾಬ್ದಾರಿ. ಮನೆಗೆಲಸದ ವೃತ್ತಿಪರರ ತಂಡದಲ್ಲಿ ಸೇರಿಕೊಂಡು ಅರಮನೆಯ ಸ್ವಚ್ಛತೆ ನೋಡಿಕೊಳ್ಳಬೇಕು. 13 ತಿಂಗಳ ತರಬೇತಿ ಬಳಿಕ ಕಾಯಂ ಉದ್ಯೋಗಿಯಾಗುತ್ತಾನೆ. ನಿವೃತ್ತರಾದ ಬಳಿಕ ಪಿಂಚಣಿ ಕೂಡ ಸಿಗಲಿದೆ.

    ಆಯ್ಕೆಯಾದ ಅಭ್ಯರ್ಥಿಯು ಈ ಒಂದು ವರ್ಷದಲ್ಲಿ ಬಕಿಂಗ್‌ಹ್ಯಾಮ್ ಪ್ಲೇಸ್ ಸೇರಿದಂತೆ ಇತರೆ ರಾಜಮನೆತನದ ನಿವಾಸಗಳಲ್ಲಿಯೂ ಕೆಲಸ ಮಾಡಬೇಕಾಗುತ್ತದೆ. ವಾರದ ರಜೆಗಳ ಜತೆಗೆ 33 ದಿನಗಳ ಇತರೆ ರಜೆಯ ಸೌಲಭ್ಯ ಸಹ ಇರಲಿದೆ.

    ಅಯ್ಯೋ… ವಿಡಿಯೋದಲ್ಲಿ ಇರುವುದು ನಾನಲ್ಲ: ಕೊಡಗು ಜಿಲ್ಲಾಧಿಕಾರಿ ಅನೀಸ್​

    ಒನ್​ವೇ ಲವ್​? ನಟಿಯ ಮೇಲೆ ನಿರ್ಮಾಪಕನಿಂದ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts