More

    ಬಿಹಾರ ಫೈಟ್​- ನೆಟ್ಟಿಗರ ಮೀಮ್ಸ್​​ ನಿಜವಾಯ್ತು… ಇವಿಎಂನಲ್ಲಿ ದೋಷ ಎಂದ ಕಾಂಗ್ರೆಸ್!​

    ಪಟ್ನಾ : ಎಲ್ಲಾ ಸಮೀಕ್ಷೆಗಳನ್ನು ಮೀರಿ ಬಿಹಾರದಲ್ಲಿ ಎನ್​ಡಿಎ ಮುಂಚೂಣಿಯಲ್ಲಿ ಬರುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮೀಮ್ಸ್​ಗಳು, ಸಂದೇಶಗಳು ಹರಿದಾಡುತ್ತಿವೆ. ರಾಹುಲ್​ ಗಾಂಧಿ ಸೇರಿದಂತೆ ಕಾಂಗ್ರೆಸ್​ ಮುಖಂಡರ ಚಿತ್ರವಿರುವ ಮೀಮ್ಸ್​ಗಳು ಇದಾಗಿವೆ. ಇದರಲ್ಲಿ ಇವಿಎಂ ದೋಷದಿಂದಲೇ ಎನ್​ಡಿಎಗೆ ಬಹುಮತ ಬಂದಿದೆ ಎಂಬ ಸಂದೇಶಗಳಿವೆ.

    ಆದರೆ ನಿಜವಾಗಿಯೂ ಅದೇ ರೀತಿ ಆಗಿಯೇ ಹೋಗಿದೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ, ಡಾ. ಉದಿತ್ ರಾಜ್, ಇವಿಎಂ ಹ್ಯಾಕಿಂಗ್ ಆರೋಪ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಂಗಳ ಮತ್ತು ಚಂದ್ರನಿಗೆ ಹೋಗುವ ದಿಕ್ಕನ್ನೇ ಭೂಮಿಯಿಂದ ನಿಯಂತ್ರಿಸಲು ಸಾಧ್ಯವಿರುವಾಗ ಇವಿಎಂ ಅನ್ನು ಯಾಕೆ ಹ್ಯಾಕ್ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಇವರ ಟ್ವೀಟ್​ಗೆ ಹಲವಾರು ಮಂದಿ ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ಮಾಡಿದ್ದಾರೆ. ಕೆಲವರು ಇದು ನಿಜ ಎಂದು ಹೇಳಿದ್ದರೆ, ಇನ್ನು ಹಲವರು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷ ಗೆದ್ದರೆ ಅಲ್ಲಿ ಮಾತ್ರ ಇವಿಎಂ ಸರಿ ಇರುವುದು ಹೇಗೆ? ಬಿಜೆಪಿ ಗೆದ್ದಾಗಲೆಲ್ಲ ಮಾತ್ರ ಇವಿಎಂ ಸರಿಯಿಲ್ಲದಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಬಿಹಾರದಲ್ಲಿ 243 ಸೀಟ್​​ಗಳಲ್ಲಿ 122 ಸ್ಥಾನಗಳನ್ನ ಗೆಲ್ಲಬೇಕಿದೆ. ಬಿಜೆಪಿಯು ಕಳೆದ ಚುನಾವಣೆಗಿಂತ ಈ ಬಾರಿ 21ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಮಟ್ಟಿಗೆ ಜೆಡಿಯು 20 ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದೆ. ಈವರೆಗಿನ ಸ್ಥಿತಿಯನ್ನು ಅವಲೋಕಿಸುವುದೇ ಆದಲ್ಲಿ, ಎನ್​ಡಿಎ ಕಳೆದ ಚುನಾವಣೆಗಿಂತಲೂ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮೂಲಕ ಸ್ಪಷ್ಟ ಸರಳ ಬಹುಮತ ಪಡೆಯುವ ನಿರೀಕ್ಷೆಯಲ್ಲಿದೆ.

    ಮಹಾಘಟಬಂಧನ್​ನ ಭಾಗವಾದ ಎಡಪಕ್ಷಗಳು 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಸಿಪಿಐ(ಎಂಎಲ್) 14 ಸ್ಥಾನಗಳಲ್ಲಿ, ಸಿಪಿಐ 03 ಮತ್ತು ಸಿಪಿಐ(ಎಂ) 03 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

    ಎಂಜಿಬಿ ಎಂದರೆ ಮಹಾಘಟ್​​ಬಂಧನ ಅಲ್ಲ… ‘ಮರ್​ ಗಯಾ ಭಾಯ್’ ಎಂದ್ರಂತೆ ರಾಹುಲ್​!

    ಮಣಿಪುರದ ಉಪಚುನಾವಣೆ: ಭರ್ಜರಿ ಗೆಲುವಿನೊಂದಿಗೆ ಖಾತೆ ತೆರೆದ ಬಿಜೆಪಿ

    ಗುಜರಾತ್​ನಲ್ಲಿ 100% ಮಧ್ಯಪ್ರದೇಶದಲ್ಲಿ 80% ಅರಳುತಿದೆ ಕಮಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts