More

  ರಾವಣನ ಬದಲು ಇಡಿ, ಸಿಬಿಐ ಪ್ರತಿಕೃತಿ ದಹಿಸಿದ ಕಾಂಗ್ರೆಸ್​: ಕೇಂದ್ರದ ವಿರುದ್ಧ ಕೈ ನಾಯಕರ ಕಿಡಿ

  ಭುಜ್ ​(ಗುಜರಾತ್)​: ಎಲ್ಲೆಡೆ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ರಾವಣನ ಪ್ರತಿಕೃತಿಯನ್ನು ದಹಿಸುವ ಮೂಲಕ ದುಷ್ಟ ಶಕ್ತಿಗಳ ಸಂಹಾರ ಮಾಡಲಾಗಿದೆ. ಆದರೆ ಅಚ್ಚರಿಯ ಘಟನೆಯೊಂದು ಗುಜರಾತ್​ನಲ್ಲಿ ನಡೆದಿದೆ.

  ಇಲ್ಲಿ ಕಾಂಗ್ರೆಸ್ಸಿಗರು ರಾವಣನ ಪ್ರತಿಕೃತಿಯ ಬದಲು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಹಣದುಬ್ಬರದ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದಾರೆ. ಗುಜರಾತ್​ನ ಭುಜ್​ನಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರ ಸಂವಿಧಾನಾತ್ಮಕ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ರಾಜಕೀಯ ವಿರೋಧಿ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.

  ಬೆಲೆ ಏರಿಕೆ, ಹಣದುಬ್ಬರ, ಕಳಪೆ ಆರೋಗ್ಯ ಸೌಲಭ್ಯಗಳು, ದುಬಾರಿ ಶಿಕ್ಷಣ ಮತ್ತು ಜಿಎಸ್‌ಟಿಯಂತಹ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರದ ವಿರುದ್ಧ ಹರಿಹಾಯ್ದ ಕೈ ಕಾರ್ಯಕರ್ತರು ಇಡಿ. ಸಿಬಿಐ ಪ್ರತಿಕೃತಿ ದಹಿಸಿದರು. ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್​ ಗಾಂಧಿ ಸೇರಿದಂತೆ ಕೆಲ ಮುಖಂಡರಿಗೆ ಇಡಿ. ಸಮನ್ಸ್​ ಜಾರಿ ಮಾಡಿ ವಿಚಾರಣೆ ನಡೆಸುತ್ತಿರುವುದು ಹಾಗೂ ಸಿಬಿಐ ಕಾಂಗ್ರೆಸ್​ ಮುಖಂಡರ ಮನೆ-ಕಚೇರಿಗಳ ಮೇಲೆ ದಾಳಿ ನಡೆಸಿರುವುದಕ್ಕೆ ಈ ಆಕ್ರೋಶ ವ್ಯಕ್ತವಾಗಿದೆ. (ಏಜೆನ್ಸೀಸ್​)

  PSI ನೇಮಕಾತಿ ಹಗರಣ: ಪೌಲ್​ ಹರಕೆಯ ಕುರಿ- ಕಿಂಗ್​ಪಿನ್​ ಮಾಜಿ ಸಿಎಂ ಪುತ್ರ ಯಾರು? ದಿನೇಶ್​ ಗುಂಡೂರಾವ್​ ಟ್ವೀಟ್

  ಇಂಜಿನಿಯರಿಂಗ್​ ಪರೀಕ್ಷೆಯಲ್ಲೂ ಇದೆಂಥ ಗೋಲ್​ಮಾಲ್? ರಷ್ಯನ್​ ಹ್ಯಾಕರ್ಸ್​ ನೆರವು ಪಡೆದಿದ್ದ 820 ವಿದ್ಯಾರ್ಥಿಗಳು!

  VIDEO: ದೇಶದ ಗಮನ ಸೆಳೆದ ಬೆಂಗಳೂರಿನ ಗಲ್ಲಿ ಕ್ರಿಕೆಟ್​: ವ್ಹಾರೆವ್ಹಾ ಎಂದ ಪ್ರಧಾನಿ ಮೋದಿ! ಏನು ವಿಶೇಷ ಅಂತೀರಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts