ಇಂಜಿನಿಯರಿಂಗ್​ ಪರೀಕ್ಷೆಯಲ್ಲೂ ಇದೆಂಥ ಗೋಲ್​ಮಾಲ್? ರಷ್ಯನ್​ ಹ್ಯಾಕರ್ಸ್​ ನೆರವು ಪಡೆದಿದ್ದ 820 ವಿದ್ಯಾರ್ಥಿಗಳು!

ನವದೆಹಲಿ: ಪಿಎಸ್​ಐ, ಕೆಪಿಸಿಸಿ ಪರೀಕ್ಷೆಗಳಲ್ಲಿನ ಅಕ್ರಮಗಳ ಬಗ್ಗೆ ಇನ್ನೂ ತನಿಖೆ ಮುಂದುವರೆದಿರುವ ನಡುವೆಯೇ ಇದೀಗ ಆತಂಕಕಾರಿ ಎನ್ನುವಂಥ ಇನ್ನೊಂದು ವಿಷಯ ಹೊರಕ್ಕೆ ಬಂದಿದೆ. ಅದೇನೆಂದರೆ, ಜೆಇಇ ಮುಖ್ಯ ಪರೀಕ್ಷೆಯಲ್ಲಿಯೂ ಭಾರಿ ಪ್ರಮಾಣದ ಅಕ್ರಮ ನಡೆದಿರುವುದು! ಐಐಟಿಗಳಂತಹ ಭಾರತದ ಉನ್ನತ ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವ ಸಲುವಾಗಿ ಜೆಇಇ (Joint Entrance Examination) ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿಯೂ ಅಕ್ರಮ ನಡೆದಿದ್ದು, ರಷ್ಯಾ ಹ್ಯಾಕರ್ಸ್​ಗಳು 820ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಂಚನೆ ಮಾಡುವಲ್ಲಿ ನೆರವಾಗಿದ್ದಾರೆ ಎಂಬ ಅಂಶವನ್ನು ಸಿಬಿಐ ಹೇಳಿದೆ. ಸೈಬರ್​ … Continue reading ಇಂಜಿನಿಯರಿಂಗ್​ ಪರೀಕ್ಷೆಯಲ್ಲೂ ಇದೆಂಥ ಗೋಲ್​ಮಾಲ್? ರಷ್ಯನ್​ ಹ್ಯಾಕರ್ಸ್​ ನೆರವು ಪಡೆದಿದ್ದ 820 ವಿದ್ಯಾರ್ಥಿಗಳು!