More

    ರಾಮನಿಗಾಗಿ ಒಂದೂಕಾಲು ಲಕ್ಷ ಮಣ್ಣಿನ ಹಣತೆ: ಖುಷಿಯಲ್ಲಿ ಕುಂಬಾರರು

    ಲಖನೌ: ಇನ್ನೇನು ಮೂರೇ ದಿನ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಅಯೋಧ್ಯೆಯ ರಾಮಮಂದಿರ. ಇದೇ 5ರಂದು ನಡೆಯಲಿರುವ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಕೂಡ ಭರದಿಂದ ಸಾಗಿವೆ.

    ರಾಮನಿಗಾಗಿಯೇ 1.25 ಲಕ್ಷದ ಮಣ್ಣಿನ ಹಣತೆಗಳನ್ನು ತಯಾರು ಮಾಡಲಾಗುತ್ತಿದೆ. ಸುಮಾರು 40 ಕುಟುಂಬಗಳು ಇರುವ ಗ್ರಾಮವೊಂದರಲ್ಲಿ ಈ ಮಣ್ಣಿನ ಹಣತೆಗಳ ತಯಾರಿಗೆ ಆರ್ಡರ್‌ ಮಾಡಲಾಗಿದ್ದು, ಅವರು ಭರದಿಂದ ಸಿದ್ಧತೆ ನಡೆಸುತ್ತಿದ್ದಾರೆ.

    ಈ ಕುರಿತು ಮಾತನಾಡಿರುವ ತಯಾರಕರು, ಇದು ನಮ್ಮ ಜೀವನದಲ್ಲಿ ಸಿಕ್ಕ ಬಹುದೊಡ್ಡ ಭಾಗ್ಯ. ರಾಮಮಂದಿರದಂಥ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ನಾವು ಭಾಗಿಯಾಗುತ್ತಿರುವುದು ತುಂಬಾ ಸಂತೋಷ ತಂದಿದೆ. ಇನ್ನೇನು ಕೆಲವೇ ದಿನಗಳು ಇರುವ ಹಿನ್ನೆಲೆಯಲ್ಲಿ ನಮ್ಮ ಗ್ರಾಮದ ಸಂಪೂರ್ಣ ಕುಟುಂಬಗಳು ಇದಕ್ಕಾಗಿ ಸಿದ್ಧತೆ ನಡೆಸಿದ್ದೇವೆ ಎಂದಿದ್ದಾರೆ.

    ಈ ಕರೊನಾ ಕಾಟದಿಂದಾಗಿ ಕೆಲಸವಿಲ್ಲದೇ ತೊಂದರೆಗೀಡಾಗಿದ್ದ ಕುಂಬಾರರು ತಮಗೆ ಇಷ್ಟು ದೊಡ್ಡ ಆರ್ಡರ್‌ ಬಂದಿರುವುದಕ್ಕೆ ತುಂಬಾ ಖುಷಿಯಾಗಿದ್ದಾರೆ.

    ಇದನ್ನೂ ಓದಿ: ಶ್ರೀರಾಮನೇ ಇಲ್ಲ ಅಂದೋರು ಪೂಜೆಗೆ ಕರೆದಿಲ್ಲ ಅನ್ನೋದು ಸರಿನಾ?- ಬಿಜೆಪಿ ಟಾಂಗ್‌

    ಈ ನಡುವೆಯೇ ಅತ್ತ ಅಮೆರಿದಕ ನ್ಯೂಯಾರ್ಕ್‌ನಲ್ಲಿಯೂ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಭರದ ಸಿದ್ಧತೆ ನಡೆದಿದೆ.
    ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನ್ಯೂಯಾರ್ಕ್‌ನಲ್ಲಿರುವ ಟೈಮ್ಸ್ ಸ್ಕ್ವಾರ್ ಸಾಕ್ಷಿಯಾಗಲಿದ್ದು, ಅಲ್ಲಿ ಜೋರಾಗಿ ತಯಾರಿ ನಡೆದಿದೆ. ಏಕೆಂದರೆ ಅಂದು ಅಲ್ಲಿ ಅಯೋಧ್ಯೆಯಲ್ಲಿ ತಲೆಯೆತ್ತಲಿರುವ ರಾಮ ಮಂದಿರದ 3ಡಿ ಚಿತ್ರಗಳು ಅನಾವರಣಗೊಳ್ಳಲಿದೆ. ಜತೆಗೆ, ರಾಮನ ಭಾವಚಿತ್ರಗಳನ್ನು ಅಮೆರಿಕದ ಅಪ್ರತಿಮ ಸಾಂಪ್ರದಾಯಿಕ ಟೈಮ್ಸ್ ಸ್ಕ್ವಾರ್ ನಲ್ಲಿ ಫಲಕಗಳ ಮೂಲಕ ನೇತುಹಾಕಲು ತಯಾರಿ ನಡೆಸಲಾಗುತ್ತಿದೆ.

    ಆಗಸ್ಟ್ 5ರ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಶ್ರೀಮರಾಮ ಚಿತ್ರ ಹಾಗೂ ರಾಮ ಮಂದಿರದ 3D ಮಾದರಿಯನ್ನು ಬೃಹತ್ ಎಲ್‌ಇಡಿ ಪರದೆ ಮೇಲೆ ಬಿತ್ತರಿಸಲಾಗುವುದು ಎಂದು ಅಮೆರಿಕನ್ ಇಂಡಿಯಾ ಸಾವರ್ಜನಿಕ ವ್ಯವಹಾರಗಳ ಸಮಿತಿ ಅಧ್ಯಕ್ಷ ಜಗದೀಶ್ ಸೆವ್ಹಾನಿ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಅಮೆರಿಕದಲ್ಲಿರುವ ಭಾರತೀಯರು ಟೈಮ್ಸ್ ಸ್ಕ್ವಾರ್ ನಲ್ಲಿ ವೀಕ್ಷಿಸಬಹುದಾಗಿದೆ. (ಏಜೆನ್ಸೀಸ್‌)

    29 ವರ್ಷಗಳ ಹಿಂದಿನ ‘ಪ್ರತಿಜ್ಞೆ’ ಪೂರೈಸಿದ ಪ್ರಧಾನಿ ಮೋದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts