More

    ಸ್ವಿಗ್ಗಿ, ಡೋಂಜೋದಲ್ಲಿ ಡ್ರಗ್ಸ್‌ ಸಪ್ಲೈ, ಪುಸ್ತಕದೊಳಗೂ ಮಾದಕ ದ್ರವ್ಯ- ಬೆಚ್ಚಿಬಿದ್ದ ಬೆಂಗಳೂರು

    ಬೆಂಗಳೂರು: ಸದ್ಯ ಎಲ್ಲೆಲ್ಲೂ ಡ್ರಗ್ಸ್‌ ಜಾಲದ್ದೇ ಮಾತುಕತೆ. ಸೆಲೆಬ್ರಿಟಿಗಳು, ಸಿನಿತಾರೆಯರು, ಸಿರಿವಂತರ ಮಕ್ಕಳಷ್ಟೇ ಅಲ್ಲದೇ ಈ ಜಾಲಕ್ಕೆ ಬಿದ್ದಿರುವ ಮಕ್ಕಳು ಅದೆಷ್ಟೋ ಮಂದಿ. ಬಹಳ ಗುಟ್ಟಾಗಿ ನಡೆಯುತ್ತಿದ್ದ ಈ ಡ್ರಗ್ಸ್‌ ದಂಧೆಯ ಬಗ್ಗೆ ಇದೀಗ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಆದರೆ ಶಾಕಿಂಗ್‌ ಎನ್ನುವಂಥ ವಿಷಯವೊಂದನ್ನು ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಹೊರಕ್ಕೆ ಬಂದಿದೆ. ಅದೇನೆಂದರೆ ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟ ಜಾಲ ಪತ್ತೆ ಮಾಡಲಾಗಿದ್ದು, ಸ್ವಿಗ್ಗಿ, ಡೋಂಜೋದಂಥ ಆನ್‌ಲೈನ್‌ ಫುಡ್‌ ಡೆಲಿವರಿಯಲ್ಲಿ ಇವುಗಳ ಪೂರೈಕೆಯಾಗುತ್ತಿರುವ ವಿಷಯ ತಿಳಿದುಬಂದಿದೆ, ಮಾತ್ರವಲ್ಲದೇ ಪುಸ್ತಕದ ಒಳಗೆ ಡ್ರಗ್ಸ್‌ ಇಟ್ಟು ಪೂರೈಕೆ ಮಾಡಲಾಗುತ್ತಿದೆ!

    ಕಳೆದ ಸೆಪ್ಟೆಂಬರ್ 21ರಂದು ಡ್ರಗ್ಸ್‌ ಪೂರೈಕೆಗೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದರು. ಅವರ ಬಾಯಿ ಬಿಡಿಸಿದಾಗ ಭಯಾನಕ ಸತ್ಯಗಳು ಹೊರಬಂದಿದ್ದು, ಇದೀಗ ಮತ್ತಿಬ್ಬರು ಬಂಧನಕ್ಕೆ ಒಳಗಾಗಿದ್ದಾರೆ. ಇವರಿಂದ ಇನ್ನಷ್ಟು ವಿಷಯಗಳು ತಿಳಿದುಬಂದಿವೆ.

    ಈ ಜಾಲ ಬೆಂಗಳೂರು ಮತ್ತು ದೆಹಲಿಯಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸು್ತಿವೆ. ದೆಹಲಿಯಿಂದ ಪಾರ್ಸಲ್ ತರಿಸಿ ಬೇಕಾದವರಿಗೆ ಹಂಚಿಕೆ ಮಾಡಲಾಗುತ್ತಿದೆ. ವಕೀಲರು ಹಾಗೂ ವೈದ್ಯರ ಹೆಸರಿನಲ್ಲಿ ಈ ಮೊದಲು ಸ್ಪೀಡ್‌ ಪೋಸ್ಟ್‌ನಲ್ಲಿ ಡ್ರಗ್ಸ್‌ ಸಪ್ಲೈ ಆಗುತ್ತಿತ್ತು. ಅಂದರೆ ಯಾರಿಗೆ ಡ್ರಗ್ಸ್‌ ಬೇಕೋ ಅವರ ಹೆಸರನ್ನು ಹಾಕಿ ನಂತರ ವಕೀಲರು, ವೈದ್ಯರು ಎಂಬುದಾಗಿ ಉಲ್ಲೇಖಿಸಲಾಗುತ್ತಿತ್ತು.

    ಇದೀಗ ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಡ್ರಗ್ಸ್‌ ಪೆಡ್ಲರ್‌ಗಳು ಯಾರಿಗೂ ಅನುಮಾನ‌ಬಾರದಂತೆ ಸ್ವಿಗ್ಗಿ ಬಾಯ್‌ಗಳ ಮಾದರಿ ಶರ್ಟ್ ಹಾಕಿ ಡಿಲೆವೆರಿ ಮಾಡಿಸುತ್ತಿದ್ದಾರೆ. ಅದು ಸಾಧ್ಯವಾಗದೇ ಇದ್ದರೆ ಖುದ್ದು ಸ್ವಿಗ್ಗಿ ಅಥವಾ ಡೋಂಜೋ ಮೂಲಕ ಡೆಲವರಿ ಮಾಡಲಾಗುತ್ತಿದೆ. ಹೈಡಿಂಗ್ ಆ್ಯಪ್‌ಗಳ ಮೂಲಕ ಬಳಕೆದಾರರನ್ನು ಸಂಪರ್ಕ ಮಾಡಲಾಗುತ್ತಿದೆ. ನಂತರ ಚಿಕ್ಕ ಚಿಕ್ಕ ಗಿಫ್ಟ್ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಅನುಮಾನ ಬಾರದಂತೆ ಪುಸ್ತಕವನ್ನು ಇಟ್ಟು ಅದರ ಒಳಗೆ ಡ್ರಗ್ಸ್‌ ಪೂರೈಕೆ ಮಾಡಲಾಗುತ್ತಿದೆ.

    ಈಗ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಡಾಕ್೯ವೆಬ್‌ನಲ್ಲಿ ಬುಕ್ ಮಾಡಿ ವಿದೇಶದಿಂದ ಖರೀದಿ ಮಾಡುತ್ತಿದ್ದರು. ಆನಂತರ ಬೆಂಗಳೂರಿಗೆ ವಕೀಲರು, ವೈದ್ಯರ ವಿಳಾಸದಲ್ಲಿ ನಕಲಿ ಹೆಸರಿನಲ್ಲಿ ಬೆಂಗಳೂರಿಗೆ ರವಾನೆ ಮಾಡುತ್ತಿದ್ದರು. ಆನಂತರ ಗಿಸ್ಟ್ ಬಾಕ್ಸ್‌ಗಳಲ್ಲಿ ಸ್ವಿಗ್ಗಿ, ಡೋಂಜೊ ಸೋಗಿನಲ್ಲಿ ರವಾನೆ ಮಾಡುತ್ತಿರುವ ವಿಷಯ ತಿಳಿದುಬಂದಿದೆ.

    ಸ್ನಾನನೂ ಮಾಡ್ತಿಲ್ಲ, ಶೌಚಕ್ಕೂ ಹೋಗ್ತಿಲ್ಲ- ಅಧಿಕಾರಿಗಳಿಗೆ ತಲೆನೋವು ತಂದ ಶಾರುಖ್‌ ಪುತ್ರ

    70ನೇ ವಯಸ್ಸಲ್ಲಿ ಮಗುವನ್ನು ಹೆತ್ತಳಾ ಈ ತಾಯಿ! ಮುದ್ದು ಕಂದನ ಕಂಡು ಕುಣಿದುಕುಪ್ಪಳಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts