More

    ಡೆಲಿವರಿ ಮಾಡುವಾಗ ಬಟ್ಟೆ ಹೊಟ್ಟೆಯಲ್ಲಿ ಬಿಟ್ಟ ವೈದ್ಯರು: ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆ

    ಹಜಾಹಾನಪುರ (ಉತ್ತರ ಪ್ರದೇಶ): ಸಿಜರಿಯನ್‌ ಡೆಲವರಿ ಮಾಡುವ ಸಂದರ್ಭದಲ್ಲಿ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿಯೇ ಟವಲ್‌ ಬಿಟ್ಟು ಶಸ್ತ್ರಚಿಕಿತ್ಸೆ ನಡೆಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಹಜಾರಾನಪುರದಲ್ಲಿ ನಡೆದಿದೆ.

    ಕಳೆದ ಜನವರಿಯಲ್ಲಿ ಈ ಘಟನೆ ನಡೆದಿದೆ. ಆದರೆ ದಿನದಿಂದ ದಿನಕ್ಕೆ ಮಹಿಳೆಗೆ ಹೊಟ್ಟೆ ನೋವು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ವಿಷಯ ಬಹಿರಂಗಗೊಂಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಈ ಎಡವಟ್ಟು ಮಾಡಿದ್ದು, ಇದೀಗ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    30 ವರ್ಷದ ನೀಲಂ ಅವರು ವೈದ್ಯರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ದುರ್ದೈವಿ. ಸದ್ಯ ಆಕೆಯ ಹೊಟ್ಟೆಯಿಂದ ಬಟ್ಟೆಯನ್ನು ತೆಗೆಯಲಾಗಿದೆ. ಆದರೆ ಪರಿಸ್ಥಿತಿ ಗಂಭೀರವಾಗಿದೆ. ನಗರದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಆಘಾತ ಕೇಂದ್ರದಲ್ಲಿ ಅವರಿಗೆಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮೂವರು ಸದಸ್ಯರ ವಿಚಾರಣಾ ತಂಡವನ್ನು ರಚಿಸಿದ್ದು, ಅದರ ವರದಿಯನ್ನು ಆದಷ್ಟು ಬೇಗ ನೀಡುವಂತೆ ಸೂಚಿಸಿದ್ದಾರೆ.

    ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಾಪುರ ಉತ್ತರ ನಿವಾಸಿ, ನೀಲಂ ಅವರ ಪತಿ ಮನೋಜ್ ಅವರು ದೂರು ನೀಡಿದ್ದಾರೆ. ಜನವರಿ 6 ರಂದು ನೀಲಂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಈ ಸಂದರ್ಭದಲ್ಲಿ ಬಟ್ಟೆ ಹೊಟ್ಟೆಯಲ್ಲಿಯೇ ಉಳಿಸಲಾಗಿದೆ ಎಂದಿದ್ದಾರೆ.

    ದೂರು ಸ್ವೀಕರಿಸಿದ ತಕ್ಷಣ, ಡಾ. ಅರ್ಚನಾ, ಡಾ. ವಿಭೋರ್ ಕುಮಾರ್ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಸಂದೇಶ್ ಕುಮಾರ್ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿದೆ ಎಂದು ಅವರು ಹೇಳಿದರು. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಹೆಣ್ಣು ಮತ್ತೊಂದು ಮದುವೆಯಾದರೂ ಮೊದಲ ಪತಿಯ ಆಸ್ತಿಗೆ ಅರ್ಹಳು

    ಬ್ಲೂ ಫಿಲ್ಮ್ಂನಿಂದ ದಿನಕ್ಕೆ ಎಂಟು ಲಕ್ಷ ರೂ: ವಿದೇಶದೊಂದಿಗೆ ನಂಟು: ಕುಂದ್ರಾ ಕುರಿತ ಸ್ಫೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts