More

    ಅಡಕೆ ಮೌಲ್ಯವರ್ಧನೆಗೆ ಬ್ಯಾಂಕ್ ಸಾಲ: ಸೆಲ್ವಮಣಿ ಭರವಸೆ

    ಶಿವಮೊಗ್ಗ: ಅಡಕೆ ಬೆಳೆಗಾರರು ಇಂದು ಉದ್ಯಮಿಗಳಾಗುವತ್ತ ಚಿಂತನೆ ನಡೆಸಬೇಕಿದೆ. ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಮುಂದಾದರೆ ಅದಕ್ಕೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಭರವಸೆ ನೀಡಿದರು.

    ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರ ಮತ್ತಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಡಕೆ ಮೌಲ್ಯವರ್ಧಿತ ಉತ್ಪನ್ನಗಳ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    75 ವರ್ಷಗಳ ಹಿಂದೆಯೇ ಶಿವಮೊಗ್ಗದಲ್ಲಿ ಮ್ಯಾಮ್ಕೋಸ್‌ನಂತಹ ಸಹಕಾರಿ ಸಂಸ್ಥೆಯನ್ನು ಹಿರಿಯರು ಸ್ಥಾಪಿಸಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಅಡಕೆಗೆ ನೂರು ವರ್ಷಗಳಿಗೂ ಅಧಿಕ ಹಿನ್ನೆಲೆ ಇದೆ. ಆದರೆ ಇಂದು ಅಡಕೆ ಬಗ್ಗೆ ಅನೇಕ ಆತಂಕಗಳಿವೆ. ಹೊಸ ರೋಗಗಳು ಅಡಕೆಗೆ ಹಾನಿ ಉಂಟುಮಾಡುತ್ತಿವೆ. ಬೆಳೆಗಾರರು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಮುಂದಾಗಬೇಕು. ಅಡಕೆ ಸಿಪ್ಪೆಗೆ ಬೆಂಕಿ ಹಾಕಿ ಸುಡುವುದಕ್ಕಿಂತಲೂ ಅದರಿಂದ ಗೊಬ್ಬರ ತಯಾರಿಕೆ ಮಾಡಬಹುದು ಎಂದರು.
    ಪ್ರದರ್ಶನ-ಮಾರಾಟ: ಕಾರ್ಯಾಗಾರದ ಹಿನ್ನೆಲೆಯಲ್ಲಿ ಅಡಕೆ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಾಗಾರಕ್ಕೆ ಆಗಮಿಸಿದ್ದ ಗಣ್ಯರು, ಅಡಕೆ ಬೆಳೆಗಾರರು ಅಡಕೆಯ ವಿವಿಧ ಉತ್ಪನಗಳನ್ನು ಕುತೂಹಲದಿಂದ ವೀಕ್ಷಿಸಿದರು. ಅಡಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಬಟ್ಟಲು, ಪೆನ್‌ಸ್ಟಾೃಂಡ್, ದಿನಚರಿಯ ಹೊರಪುಟಗಳು, ಹೆಗ್ಗೋಡಿನ ಚರಕ ಸಂಸ್ಥೆಯವರು ಅಡಕೆ ಚೊಗರಿನ ನೈಸರ್ಗಿಕ ಬಣ್ಣ ಬಳಸಿ ತಯಾರಿಸಿದ ವಿವಿಧ ಖಾದಿ ವಸ್ತ್ರದ ಉತ್ಪನ್ನಗಳು ಗಮನ ಸೆಳೆದವು. ಕ್ಯಾಂಪ್ಕೋ ಸಂಸ್ಥೆಯವರು ಅಡಕೆಯಿಂದ ತಯಾರಿಸಿದ ಚಾಕೋಲೇಟ್, ವಿವಿಧ ಪೇಯಗಳ ಪುಡಿಯನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts