More

    ಚಿಂತೆಗೀಡಾಗಿದ್ದ ಆರೋಪಿ ಡಿಕೆಶಿ ಸಂಬಂಧಿಕರಿಗೆ ಹೈಕೋರ್ಟ್‌ನಿಂದ ಸಿಕ್ತು ತಾತ್ಕಾಲಿಕ ರಿಲೀಫ್‌!

    ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸಿಲುಕಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಸಂಬಂಧಿಕರು ಸ್ವಲ್ಪ ನಿರಾಳರಾಗುವಂಥ ಆದೇಶವೊಂದನ್ನು ದೆಹಲಿ ಹೈಕೋರ್ಟ್‌ ನೀಡಿದೆ.

    ಅದೇನೆಂದರೆ, ಕರೊನಾ ವೈರಸ್‌ ಇರುವ ಹಿನ್ನೆಲೆಯಲ್ಲಿ, ಇವರೆಲ್ಲರ ಹೇಳಿಕೆಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಪಡೆದುಕೊಳ್ಳುವಂತೆ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಿದೆ.

    ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಅವರ ಸಂಬಂಧಿಕರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಸಾಕ್ಷಿಗಳಾಗಿ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಲಾಲುಗೆ ಸಿಕ್ತು ಬೇಲ್‌: ಆದರೆ ‘ಖಜಾನೆ’ಯಿಂದಾಗಿ ಸಿಕ್ತಿಲ್ಲ ಬಿಡುಗಡೆ- ಜೈಲೇ ಗತಿ!

    ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಕರೊನಾ ಸೋಂಕಿನ ಭೀತಿ ಇರುವ ಹಿನ್ನೆಲೆಯಲ್ಲಿ ಖುದ್ದಾಗಿ ಹೋಗಿ ಹೇಳಿಕೆ ನೀಡುವುದರಿಂದ ವಿನಾಯಿತಿ ನೀಡುವಂತೆ ಅವರು ಕೋರಿದ್ದರು.

    ಈ ಅರ್ಜಿಯನ್ನು ನ್ಯಾಯಮೂರ್ತಿ ಯೋಗೇಶ್ ಖನ್ನಾ ನೇತೃತ್ವದ ಪೀಠ ಮಾನ್ಯ ಮಾಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರೆ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

    ಈ ಎಲ್ಲಾ ಸಾಕ್ಷಿದಾರರಿಂದ ಈ ಮೊದಲು ಅಧಿಕಾರಿಗಳು ದಾಖಲೆಗಳನ್ನು ಕೇಳಿದ್ದರು. ಆದರೆ ಅದರಲ್ಲಿ ಕೆಲವೊಂದು ಗೊಂದಲ ಇದ್ದ ಹಿನ್ನೆಲೆಯಲ್ಲಿ ಖುದ್ದು ಹಾಜರಿಗೆ ಆದೇಶಿಸಿದ್ದರು.

    ಆದಾಯಕ್ಕೂ ಮೀರಿದ ಡಬಲ್​ ಆಸ್ತಿ ಹೊಂದಿರುವ ಆರೋಪವನ್ನು ಡಿಕೆಶಿವಕುಮಾರ್‌ ಎದುರಿಸುತ್ತಿದ್ದಾರೆ.

    ಲಾಲುಗೆ ಸಿಕ್ತು ಬೇಲ್‌: ಆದರೆ ‘ಖಜಾನೆ’ಯಿಂದಾಗಿ ಸಿಕ್ತಿಲ್ಲ ಬಿಡುಗಡೆ- ಜೈಲೇ ಗತಿ!

    ಕರೊನಾ ನಿಯಮ ಪಾಲಿಸಿದರೂ 10 ಅರ್ಚಕರಿಗೆ ಸೋಂಕು: ಪದ್ಮನಾಭಸ್ವಾಮಿ ದೇಗುಲ ಬಂದ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts