More

    ನೋಡ್ರಪ್ಪಾ ನನಗಿರೋದು ಒಬ್ಳೇ ಹೆಂಡ್ತಿ, ತನಿಖೆ ಆಗ್ಲಿ… ಸತ್ಯ ಹರಿಶ್ಚಂದ್ರ ಚಾಲೆಂಜ್​ ಸ್ವೀಕರಿಸಿದ ಡಿಕೆಶಿ,

    ಬೆಂಗಳೂರು: ಸಿಡಿ ಕೇಸ್​ ಇದೀಗ ಒಬ್ಳೇ ಹೆಂಡ್ತಿ ಚಾಲೆಂಜ್​ವರೆಗೆ ಬಂದು ಮುಟ್ಟಿದೆ. ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿದ್ದ ವಾಕ್ಸರಮಕ್ಕೆ ತಿರುಗೇಟು ನೀಡಿದ್ದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್​, ‘ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ?” ಎಂದು ಸುಧಾಕರ್​ ಕಿಡಿ ಕಾರಿದ್ದರು.

    ಈ ವಿಷಯವನ್ನು ಸದನಲ್ಲಿ ಕೂಡ ಹೇಳಬೇಕು ಅಂದುಕೊಂಡಿದ್ದೆ.. ಮರ್ಯಾದಾ ಪುರುಷರು, ಸತ್ಯಹರಿಶ್ಚಂದ್ರರು ಯಾರ್ಯಾರು ಇದ್ದಾರೆ ಗೊತ್ತಾಗಿಹೋಗಲಿ, ತಾವು ಶ್ರೀರಾಮಚಂದ್ರರು ಎಂದು ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಮಾತನಾಡುತ್ತಿದ್ದಾರಲ್ಲ. ಅವರಿಗೆ ಒಂದು ಸವಾಲ್ ಹಾಕುತ್ತೇನೆ. 225 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂಬುದು ಸಾಬೀತಾಗಿ ಹೋಗಲಿ ಎಂದಿದ್ದರು.

    ಈ ಮಾತಿಗೆ ಒಬ್ಬೊಬ್ಬರೇ ನಾಯಕರು ಇದೀಗ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಇದಕ್ಕೆ ಮಾತನಾಡಿ, ಸಚಿವ ಡಾ.ಕೆ.ಸುಧಾಕರ್ ಹೇಳಿರುವುದು ಬಹಳ ಸಂತೋಷ. ಎಲ್ಲರ ಬಗ್ಗೆಯೂ ತನಿಖೆ ಆಗಲಿ. ನೋಡ್ರಪ್ಪಾ ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದರು.

    ನಿಮ್ಮ ನಿಮ್ಮ ಜೀವನದಲ್ಲಿ ಅನೈತಿಕ ಸಂಬಂಧ ಇಲ್ಲ ಅನ್ನೋದು ಗೊತ್ತಾಗಲಿ, ಯಾರ್ಯಾರ ಜೀವನದಲ್ಲಿ ಏನೇನು ಆಗಿದೆ ಅನ್ನೋದು ಗೊತ್ತಾಗಲಿ ಎಂದಿರುವ ಸುಧಾಕರ್​ ಅವರ ಮಾತು ಒಳ್ಳೆಯದೇ. ಇವರು ಈ ಚಾಲೆಂಜ್​ ಮಾಡಿದ್ದು ಬಹಳ ಸಂತೋಷ. ರಾಜ್ಯಕ್ಕೆ ನುಡಿಮುತ್ತುಗಳನ್ನು ಕೊಟ್ಟಿದ್ದಾರೆ. ಎಲ್ಲರ ತನಿಖೆ ಆಗಿಬಿಡಲಿ ಎಂದರು.

    ಶುರುವಾಯ್ತು ಒಬ್ಳೇ ಹೆಂಡ್ತಿ ಚಾಲೆಂಜ್​! ಸತ್ಯಹರಿಶ್ಚಂದ್ರ ಯಾರಪ್ಪಾ ಸವಾಲ್​ ಹಾಕಿದ ಸಚಿವ..

    ಮಧ್ಯರಾತ್ರಿವರೆಗೂ ಬಿಸಿಬಿಸಿ ಮಾತು: ಕೇರಳ ಲೀಡರುಗಳಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಷಾ;

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts