More

    ಹವಾಮಾನದಲ್ಲಿ ಏರುಪೇರು: ಕಡಲುಕೋಳಿಗಳಲ್ಲಿ ಹೆಚ್ಚುತ್ತಿವೆ ಡಿವೋರ್ಸ್‌! ಪಕ್ಷಿತಜ್ಞರಿಂದ ಅಚ್ಚರಿಯ ಸಂಶೋಧನಾ ವರದಿ…

    ಲಂಡನ್‌: ವಿಚ್ಛೇದನ ಎಂದರೆ ಮನುಷ್ಯರಲ್ಲಿ ಮಾತ್ರವೇ ಅಂದುಕೊಂಡಿದ್ದರೆ, ಅದು ತಪ್ಪು ಎನ್ನುವುದು ಇದೀಗ ಸಾಬೀತಾಗಿದೆ. ಲಂಡನ್‌ನ ತಜ್ಞರು ನಡೆಸಿರುವ ಸಂಶೋಧನೆಯಿಂದ ಅಚ್ಚರಿಯ ವರದಿಯೊಂದು ಬಹಿರಂಗಗೊಂಡಿದ್ದು, ಅದರಲ್ಲಿ ಪಕ್ಷಿಗಳ ವಿಚ್ಛೇದನದ ಕುರಿತು ವಿವರಣೆ ನೀಡಲಾಗಿದೆ.

    ‘ಪ್ರೊಸೀಡಿಂಗ್ಸ್‌ ಆಫ್‌ ರಾಯಲ್‌ ಸೊಸೈಟಿ’ ಈ ಅಧ್ಯಯನ ವರದಿಯನ್ನು ಬಹಿರಂಗಪಡಿಸಿದೆ. ಹವಾಮಾನ ವೈಪರೀತ್ಯವು ಪಕ್ಷಿಗಳ ಸಂಬಂಧದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂಬ ಬಗ್ಗೆ ಈ ವರದಿಯಲ್ಲಿ ವಿವರಿಸಲಾಗಿದೆ. ಬೇಸಿಗೆ, ಮಳೆ ಹಾಗೂ ಚಳಿಗಾಲದಲ್ಲಿ ಇದೀಗ ವಿಪರೀತ ವ್ಯತ್ಯಾಸ ಉಂಟಾಗುತ್ತಿದೆ. ಇದು ಹಲವು ದೇಶಗಳಲ್ಲಿ ಭಾರಿ ಏರುಪೇರು ಉಂಟುಮಾಡುತ್ತಿದೆ. ಯಾವ್ಯಾವ ಕಾಲಕ್ಕೆ ಏನೇನಾಗಬೇಕೋ ಅವು ಆಗದೇ ಹವಾಮಾನದಲ್ಲಿ ವೈಪರೀತ್ಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇದು ಕೆಲವೊಂದು ವರ್ಗದ ಪಕ್ಷಿಗಳ ಸಂತಾನೋತ್ಪತ್ತಿ ಮೇಲೆ ಭಾರಿ ಪರಿಣಾಮ ಬೀರಿದೆ. ಆದ್ದರಿಂದ ಜೋಡಿ ಹಕ್ಕಿಗಳು ಪರಸ್ಪರ ಬೇರೆಯಾಗಿ ಒಂಟಿಯಾಗಿ ಇರುತ್ತಿವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

    ಅದರಲ್ಲಿಯೂ ಹೆಚ್ಚಾಗಿ ಸಂಶೋಧಕರು ಈಗ ನಡೆಸಿರುವುದು ದಕ್ಷಿಣ ಅಟ್ಲಾಂಟಿಕ್‌ ಫಾಕ್‌ಲ್ಯಾಂಡ್‌ ದ್ವೀಪದ ಕಪ್ಪು-ಕಂದು ಕಡಲುಕೋಳಿಗಳ (Black-Browed Albatrosses) ಮೇಲಿನ ಅಧ್ಯಯನ. ಸದಾ ಜೋಡಿಯಾಗಿರುವ ಇರುವ ಈ ಪಕ್ಷಿಗಳು ಹವಾಮಾನ ವೈಪರೀತ್ಯದಿಂದಾಗಿ ಪ್ರತ್ಯೇಕವಾಗಿರುತ್ತಿತ್ತು. ಸಂತಾನೋತ್ಪತ್ತಿಯಲ್ಲಿ ಆಸಕ್ತಿ ಹೊಂದುತ್ತಿಲ್ಲ. ಈ ಪಕ್ಷಿಗಳೀಗ ವಿಚ್ಛೇದನ ಪಡೆದುಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

    ಈ ಕಡಲುಕೋಳಿಗಳು ಇತರ ಪಕ್ಷಿಗಳಂತಲ್ಲ. ಇವು ದೀರ್ಘಕಾಲ ಏಕ ಸಂಗಾತಿಯನ್ನು ಹೊಂದಿರುತ್ತವೆ. ಒಂದೇ ಗಂಡು-ಹೆಣ್ಣು ಬಹುದೀರ್ಘದವರೆಗೆ ಒಟ್ಟಿಗೇ ನೆಲೆಸುತ್ತವೆ. ಜೋಡಿ ಸತ್ತರೆ ಮಾತ್ರ ಗಂಡು ಅಥವಾ ಹೆಣ್ಣು ಇನ್ನೊಂದು ಸಂಬಂಧ ಹೊಂದುತ್ತವೆ. ಒಂದು ರೀತಿಯಲ್ಲಿ ಮನುಷ್ಯರಂತೆ ಇವುಗಳ ಜೀವನ. ಆದರೆ ಇದೀಗ ಮನುಷ್ಯರಂತೆಯೇ ಈ ಹಕ್ಕಿಗಳು ಕೂಡ ಡಿವೋರ್ಸ್‌ ಪಡೆಯತೊಡಗಿವೆ. ತಮ್ಮ ದೀರ್ಘಕಾಲದ ಸಂಗಾತಿಯನ್ನು ತೊರೆದು ಸಂತಾನೋತ್ಪತ್ತಿಗೆ ಬೇರೆ ಪ್ರದೇಶಗಳನ್ನು ಅರಸಿ ಅಲ್ಲಿರುವ ಹಕ್ಕಿಗಳನ್ನು ಕೂಡಿಕೊಳ್ಳಲು ಮುಂದಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ.

    2003ರಿಂದ ಫಾಕ್‌ಲ್ಯಾಂಡ್‌ ದ್ವೀಪದಲ್ಲಿ ವಾಸವಾಗಿರುವ ಸುಮಾರು 15,500 ಜೋಡಿ ಕಡಲುಕೋಳಿಗಳ ಸಂತಾನೋತ್ಪತ್ತಿ ನಡುವಳಿಕೆಯನ್ನು ಸಂಗ್ರಹಿಸಿ ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ.

    ಕರೊನಾ ರೂಪಾಂತರಿಯಿಂದ ರಾಜ್ಯದಲ್ಲಿ ಸದ್ಯ ಲಾಕ್‌ಡೌನ್‌ ಆಗತ್ತಾ? ಸಚಿವ‌ ಸುಧಾಕರ್ ಏನು ಹೇಳಿದ್ದಾರೆ ನೋಡಿ…

    ಅತ್ತೆ-ಸೊಸೆ ಹೊಂದಿಕೊಳ್ಳದಿದ್ದರೆ ಪತ್ನಿಗೆ ಡಿವೋರ್ಸ್‌ ನೀಡಬಹುದೆ? ಕೋರ್ಟ್‌ ನನ್ನ ಅರ್ಜಿ ಮಾನ್ಯ ಮಾಡತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts