More

    ಭಾರಿ ಮಳೆ; ಸಿಡಿಲು ಬಡಿದು 20 ಮಂದಿ ಸಾವು

    ಗುಜರಾತ್​​: ಗುಜರಾತಿನಾದ್ಯಂತ ವಾರಾಂತ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸಿಡಿಲು ಬಡಿದು 20 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯವು ಅಕಾಲಿಕ ಮಳೆಯಿಂದ ತತ್ತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ಪ್ರಕಾರ, ಗುಜರಾತ್‌ನ ವಿವಿಧ ಜಿಲ್ಲೆಗಳಿಂದ ಒಟ್ಟು ಭಾರಿ ಮಳೆಯಿಂದಾಗಿ 20 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರದಂದು ರಾಜ್ಯದಲ್ಲಿ ಸುರಿದ ತೀವ್ರ ಅಕಾಲಿಕ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಸಾವುಗಳು ಸಂಭವಿಸಿವೆ. ದಾಹೋಡ್‌ನಲ್ಲಿ ನಾಲ್ವರು, ಭರೂಚ್‌ನಲ್ಲಿ ಮೂವರು, ತಾಪಿಯಲ್ಲಿ ಇಬ್ಬರು ಮತ್ತು ಅಹಮದಾಬಾದ್, ಅಮ್ರೇಲಿ, ಬನಸ್ಕಾಂತ, ಬೊಟಾಡ್, ಖೇಡಾ, ಮೆಹ್ಸಾನಾ, ಪಂಚಮಹಲ್, ಸಬರ್ಕಾಂತ, ಸೂರತ್, ಸುರೇಂದ್ರನಗರ, ಮತ್ತು ದೇವಭೂಮಿ ದ್ವಾರಕಾ ನಿವಾಸಿಗಳು ಮಳೆಗೆ ಬಲಿಯಾಗಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ, “ಗುಜರಾತ್‌ನ ವಿವಿಧ ನಗರಗಳಲ್ಲಿ ಪ್ರತಿಕೂಲ ಹವಾಮಾನ ಮತ್ತು ಸಿಡಿಲುಗಳಿಂದಾಗಿ ಅನೇಕ ಜನರು ಸಾವನ್ನಪ್ಪಿದ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ತುಂಬಲಾರದ ನಷ್ಟಕ್ಕೆ ನಾನು ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಸ್ಥಳೀಯ ಆಡಳಿತ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಗುಜರಾತ್‌ನ 251 ತಾಲೂಕುಗಳಲ್ಲಿ 220 ತಾಲೂಕುಗಳಲ್ಲಿ ಬೆಳಗ್ಗೆ 6 ರಿಂದ 10 ಗಂಟೆಗಳಲ್ಲಿ 50 ಮಿಮೀ ವರೆಗೆ ಮಳೆಯಾಗಿದೆ. ಇನ್ನು ಈ ಅಕಾಲಿಕ ಮಳೆ ಈಶಾನ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ಚಂಡಮಾರುತ ಉಂಟಾದ ಪರಿಣಾಮದಿಂದ ಇದಕ್ಕೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts