More

    ಕರೊನಾದಿಂದ ಮರುಜೀವ: ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟ ದಾನ ಮಾಡಿದ ಕೇರಳದ ಉದ್ಯಮಿ

    ಶಬರಿಮಲೆ: ಆಂಧ್ರಪ್ರದೇಶದ ಉದ್ಯಮಿಯೊಬ್ಬರು ಶಬರಿಮನೆಯ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟವನ್ನು ನೀಡಿದ್ದಾರೆ. ಕರ್ನೂಲ್‌ನ ಉದ್ಯಮಿ ಮರಂ ವೆಂಕಟಸುಬ್ಬಯ್ಯ ಎಂಬುವವರು ಈ ಕಿರೀಟ ನೀಡಿದ್ದಾರೆ.

    ಇದಕ್ಕೆ ಕಾರಣ, ಅವರು ಕೋವಿಡ್‌ನಿಂದ ಬದುಕುಳಿದಿರುವುದಕ್ಕೆ. ಇತ್ತೀಚೆಗೆ ವೆಂಕಟಸುಬ್ಬಯ್ಯ ಅವರಿಗೆ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. 15 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಸಾವು-ಬದುಕಿನ ನಡುವೆ ಹೋರಾಡಿ ಬದುಕುಳಿದಿದ್ದರು.

    ಇವರು ಕಳೆದ 30 ವರ್ಷಗಳಿಂದ ಶಬರಿಗಿರಿಗೆ ಭೇಟಿ ನೀಡುತ್ತಿದ್ದಾರೆ. ಕೋವಿಡ್‌ಗೆ ಗುರಿಯಾದಾಗ ಮನಸ್ಸಿನಲ್ಲಿಯೇ ಅಯ್ಯಪ್ಪನ ಧ್ಯಾನ ಮಾಡುತ್ತಿದ್ದರು. ಆದ್ದರಿಂದ ತಮ್ಮನ್ನು ಅಯ್ಯಪ್ಪ ಸ್ವಾಮಿ ಕಾಪಾಡಿರುವುದಾಗಿ ಹೇಳಿದ ಮರಂ ವೆಂಕಟಸುಬ್ಬಯ್ಯ ವಜ್ರಗಳಿಂದ ಕೂಡಿದ ಕಿರೀಟವನ್ನು ಹಸ್ತಾಂತರಿಸಿದ್ದಾರೆ.

    ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಗುಣಮುಖರಾದ ಬಳಿಕ ಶಬರಿಮಲೆ ದೇವಸ್ಥಾನಕ್ಕೆ ಬಂದು ವಜ್ರದ ಕಿರೀಟವನ್ನು ಕಾಣಿಕೆಯಾಗಿ ನೀಡುವಂತೆ ಹರಕೆ ಹೊತ್ತಿದ್ದೆ. ಅಯ್ಯಪ್ಪನ ಆಶೀರ್ವಾದಿಂದಲೇ ನಾನು ಮತ್ತೆ ಬದುಕಿದ್ದೇನೆ. ಕೇರಳ ಹೈಕೋರ್ಟ್‌ ವಕೀಲರಾದ ನನ್ನ ಸ್ನೇಹಿತ ಲೈಜು ರಾಮ್ ಅವರ ಸಹಾಯ ಪಡೆದು ದೇವರಿಗೆ ಅರ್ಪಿಸಿರುವುದಾಗಿ ವೆಂಕಟಸುಬ್ಬಯ್ಯ ತಿಳಿಸಿದ್ದಾರೆ.

    VIDEO: ಸ್ನಾನ ಮಾಡುತ್ತಿರುವ ವ್ಯಕ್ತಿಯ ಬಳಿ ದಿಢೀರ್‌ ಹೋದ ಶಾಸಕ ಕೇಳಿದರೊಂದು ಪ್ರಶ್ನೆ! ವಿಡಿಯೋ ವೈರಲ್‌

    ನಿದ್ದೆಗೆ ಜಾರಿದ ಟ್ರಕ್‌ ಚಾಲಕ- ನಾಲ್ವರ ದುರ್ಮರಣ: ರಸ್ತೆಯಲ್ಲಿ ಬಿದ್ದ ಮೀನು ಹೆಕ್ಕಲು ನೂಕುನುಗ್ಗಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts