More

    ಅಯ್ಯೋ ಶಿವನೆ.. ಲಾಕ್‌ಡೌನ್‌ ಅಂತೆ… ಮುಗೀತು ನಮ್‌ ಕಥೆ ಎಂದು ಎದ್ದು ಬಿದ್ದು ಓಡೋಡಿ ಬಂದರು ಇಲ್ಲಿಗೆ…. !

    ನವದೆಹಲಿ: ಲಾಕ್‌ಡೌನ್‌ನ ಕಹಿ ಅನುಭವ ಬಹುತೇಕ ಮಂದಿಗೆ ಕಳೆದ ಬಾರಿ ಆಗಿಹೋಗಿದೆ. ಆಹಾರ ಪದಾರ್ಥಗಳು ಸಿಗದಿದ್ದರೆ ಹೇಗಪ್ಪಾ ಬದುಕುವುದು ಎಂದು ಅನೇಕ ಮಂದಿ ಯೋಚನೆ ಮಾಡುತ್ತಿದ್ದರೆ, ಅದಿಲ್ಲದಿದ್ದರೂ ಪರವಾಗಿಲ್ಲ, ಕಿಕ್ಕೇರಿಸುವ ಗುಂಡು ಇಲ್ಲದಿದ್ದರೆ ಏನು ಮಾಡುವುದು ಎಂಬುದು ಇನ್ನು ಹಲವರ ಯೋಚನೆ ಆಗಿತ್ತು.

    ಕಳೆದ ವರ್ಷ ಲಾಕ್‌ಡೌನ್‌ ನಂತರ ಮದ್ಯದಂಗಡಿಗಳನ್ನು ತೆರೆಯುವ ಸುದ್ದಿಯಾಗುತ್ತಿದ್ದಂತೆಯೇ ನಡುರಾತ್ರಿಯಿಂದಲೇ ಹೆಣ್ಣುಮಕ್ಕಳೂ ಸೇರಿದಂತೆ ಮದ್ಯದಂಗಡಿಗಳ ಮುಂದೆ ಕ್ಯೂನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದನ್ನೇ ಕಲ್ಪಿಸಿಕೊಂಡು ಈಗ ಜನರು ಹೈಅಲರ್ಟ್‌ ಆಗಿಬಿಟ್ಟಿದ್ದಾರೆ!

    ಹೇಗೆ ಅಂತೀರಾ? ದೆಹಲಿಯಲ್ಲಿ ಲಾಕ್‌ಡೌನ್‌ ಘೋಷಣೆಯಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಕಾರ್ಯ ನಿರ್ವಹಿಸುವುದಿಲ್ಲ. ರಾತ್ರಿಯಿಂದ ಲಾಕ್‌ಡೌನ್‌ ಎಂದು ನಿನ್ನೆ ದೆಹಲಿ ಸರ್ಕಾರ ಘೋಷಿಸುತ್ತಿದ್ದಂತೆಯೇ ಮದ್ಯಪ್ರಿಯರಿಗೆ ಸುಸ್ತೋ ಸುಸ್ತು. ತಡಮಾಡದೇ ಎದ್ದೆನೋ ಬಿದ್ದೆನೋ ಎಂದು ಸಿಕ್ಕಸಿಕ್ಕ ಮದ್ಯದಂಗಡಿಗಳ ಮುಂದೆ ನಿಂತು ತಿಂಗಳು, ಎರಡು ತಿಂಗಳಿಗಾಗುವಷ್ಟು ಮದ್ಯವನ್ನು ಖರೀದಿ ಮಾಡಿಕೊಂಡು ಹೋಗಿದ್ದಾರೆ.

    ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಲಾಕ್‍ಡೌನ್ ಜಾರಿಯಲ್ಲಿ ಇರಲಿದೆ. ಲಾಕ್‍ಡೌನ್ ಆದೇಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಉದ್ದುದ್ದದ ಕ್ಯೂ ನಿಂತಿರೋದು ಕಂಡುಬಂದಿದೆ.

    ಮೃತ ಪತಿಯ ಹಣ ನಾಮಿನಿಯಾಗಿರುವ ಅವರಮ್ಮನಿಗೆ ಹೋಗಿದೆ- ಅದರಲ್ಲಿ ನನಗೆ ಪಾಲು ಇಲ್ಲವೆ?

    ಅದು ಪ್ರೀತಿಯಲ್ಲಮ್ಮಾ… ಕಾಮ… ಏಳು ವರ್ಷ ದೇಹ ಒಪ್ಪಿಸುವಾಗ ಎಲ್ಲೋಗಿತ್ತು ನಿನ್ನ ಬುದ್ಧಿ?

    ‘ಇಂಜೆಕ್ಷನ್​ ತಗೊಂಡ್ರೆ ಕರೊನಾ ಹೋಗಲ್ಲ ಸ್ವಾಮಿ… ಇದನ್ನೊಮ್ಮೆ ಏರಿಸಿ ನೋಡಿ…. ಆಮೇಲೆ ಹೇಳಿ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts