More

    ರೇಪ್‌ ಕೇಸ್‌ನಲ್ಲಿ ಮಕ್ಕಳ ಕಾಯ್ದೆ ಉಲ್ಲಂಘಿಸಿ ಇಕ್ಕಟ್ಟಿಗೆ ಸಿಲುಕಿದ ರಾಹುಲ್‌: ನೋಟಿಸ್‌ ಜಾರಿ

    ನವದೆಹಲಿ: ಇಡೀ ದೇಶವನ್ನೇ ತಲ್ಲಣಗೊಳಿಸಿರುವ ನೈರುತ್ಯ ದೆಹಲಿಯ ಬಾಲಕಿಯ ರೇಪ್‌, ಮರ್ಡರ್ ಕೇಸ್‌ಗೆ ಸಂಬಂಧಿಸಿದಂತೆ ಸಂಸದ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದಕ್ಕೆ ಕಾರಣ, ಬಾಲಕಿಯ ಕುಟುಂಬದ ಚಿತ್ರವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವುದು.

    ಪೋಕ್ಸೊ ಕಾಯ್ದೆ ಅನ್ವಯ ಅತ್ಯಾಚಾರಕ್ಕೆ ಒಳಗಾಗುವ ಬಾಲಕಿ ಅಥವಾ ಅವರ ಕುಟುಂಬದವರ ಫೋಟೋಗಳನ್ನು ಹಂಚಿಕೊಳ್ಳುವುದು ಅಪರಾಧ. ಆದರೆ ಬಾಲಕಿಯ ಮನೆಗೆ ತಾವು ಹೋಗಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡುವ ಮೂಲಕ ರಾಹುಲ್‌ ಗಾಂಧಿ ಈ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಟ್ವಿಟರ್‌ಗೆ ನೋಟಿಸ್ ನೀಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಹೇಳಿದೆ.

    ಜತೆಗೆ ಈ ಟ್ವೀಟ್‌ನ್ನು ತೆಗೆದು ಹಾಕುವಂತೆ ಟ್ವಿಟರ್‌ಗೆ ಆಯೋಗ ಹೇಳಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕರು ಆಕೆಯನ್ನು ಸುಟ್ಟುಹಾಕಿದ್ದಾರೆ. ಈ ಕುಟುಂಬದವರಿಗೆ ಸಾಂತ್ವನ ಹೇಳಲು ರಾಹುಲ್‌ ಗಾಂಧಿ ಅವರ ಮನೆಗೆ ಹೋಗಿದ್ದರು. ಈ ವೇಳೆ ಬಾಲಕಿಯ ಕುಟುಂಬದ ಜೊತೆ ಇರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿ, ‘ಬಾಲಕಿಗೆ ನ್ಯಾಯ ಸಿಗುವವರೆಗೂ ಹಿಂದೆ ಸರಿಯುವುದಿಲ್ಲ’ ಎಂದು ಬರೆದುಕೊಂಡಿದ್ದರು. ಆದರೆ ಇದು ಕಾನೂನು ಉಲ್ಲಂಘನೆಯಾಗಿದೆ.

    ಅವರು ಟ್ವಿಟರ್‌ನಲ್ಲಿ ಇದನ್ನು ಶೇರ್‌ ಮಾಡಿದ ಬೆನ್ನಲ್ಲೇ ಇದನ್ನು ಖಂಡಿಸಿದ್ದ ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ, ‘ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವುದು ಅಪರಾಧವಾಗಿದೆ. ಆದರೆ, ರಾಹುಲ್ ಗಾಂಧಿ ಇದನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು.

    ತನಿಖೆಗೆ ಕರೆದೊಯ್ಯುವ ನೆಪದಲ್ಲಿ ಪಿಎಸ್‌ಐ ಮೇಲೆ ರೇಪ್‌ಗೆ ಯತ್ನಿಸಿದ ಸಬ್‌ ಇನ್ಸ್‌ಪೆಕ್ಟರ್‌!

    ಯಶವಂತಪುರ- ಶಿವಮೊಗ್ಗ ನಡುವೆ ನೂತನ ರೈಲು: ಎಲ್ಲೆಲ್ಲಿ, ಎಷ್ಟು ಹೊತ್ತಿಗೆ ನಿಲುಗಡೆ? ಇಲ್ಲಿದೆ ಡಿಟೇಲ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts