More

    ಯಶವಂತಪುರ- ಶಿವಮೊಗ್ಗ ನಡುವೆ ನೂತನ ರೈಲು: ಎಲ್ಲೆಲ್ಲಿ, ಎಷ್ಟು ಹೊತ್ತಿಗೆ ನಿಲುಗಡೆ? ಇಲ್ಲಿದೆ ಡಿಟೇಲ್ಸ್‌

    ಬೆಂಗಳೂರು: ಬೆಂಗಳೂರಿನ ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ಆಗಸ್ಟ್​ 10ರಿಂದ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಹೊಸದೊಂದು ರೈಲು ಸಂಚಾರ ಆರಂಭಿಸಲಿದೆ.

    ನಿತ್ಯವೂ ಈ ರೈಲು ಯಶವಂತಪುರ-ಶಿವಮೊಗ್ಗ ನಡುವೆ ಸಂಚಾರ ನಡೆಸಲಿದ್ದು, ಈ ಕುರಿತು ರೈಲ್ವೆ ಇಲಾಖೆ ಟ್ವೀಟ್​ ಮೂಲಕ ಮಾಹಿತಿ ನೀಡಿದೆ. ರೈಲಿನ ಸಂಖ್ಯೆ 07357/07358. ಇದು ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಪ್ರತಿನಿತ್ಯ ಸಂಚಾರ ನಡೆಸಲಿದ್ದು, ಆಗಸ್ಟ್ 10 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಇಲಾಖೆ ಹೇಳಿದೆ.

    ಎಲ್ಲೆಲ್ಲಿ ನಿಲುಗಡೆ: ಯಶವಂತಪುರದಿಂದ ಹೊರಡುವ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ನಿಲ್ದಾಣಗಳಲ್ಲಿ ನಿಲ್ಲಲಿದೆ. ನಂತರ ಶಿವಮೊಗ್ಗ ಟೌನ್​ ತಲುಪಲಿದೆ. ಶಿವಮೊಗ್ಗದಿಂದ ಮರಳಿ ಯಶವಂತಪುರಕ್ಕೆ ಬರುವಾಗಲೂ ಇದೇ ಸ್ಥಳಗಳಲ್ಲಿ ನಿಲುಗಡೆ ಇದೆ.

    ಯಶವಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 9.15ಕ್ಕೆ ರೈಲು ಹೊರಡಲಿದ್ದು, ಮಧ್ಯಾಹ್ನ 2.30ಕ್ಕೆ ಶಿವಮೊಗ್ಗ ಟೌನ್​ ನಿಲ್ದಾಣವನ್ನು ತಲುಪಲಿದೆ. ಪುನಃ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 9.00ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

    ಯಾವ ಸ್ಟೇಷನ್‌ನಲ್ಲಿ ಎಷ್ಟು ಹೊತ್ತು ನಿಲ್ಲಲಿದೆ? ಇಲ್ಲಿ ವಿವರ ಇದೆ ನೋಡಿ:

    ಯಶವಂತಪುರ- ಶಿವಮೊಗ್ಗ ನಡುವೆ ನೂತನ ರೈಲು: ಎಲ್ಲೆಲ್ಲಿ, ಎಷ್ಟು ಹೊತ್ತಿಗೆ ನಿಲುಗಡೆ? ಇಲ್ಲಿದೆ ಡಿಟೇಲ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts