More

    ಕೆಂಪುಕೋಟೆ ಘಟನೆಯಲ್ಲಿ ಸಿಕ್ಕಿಬಿದ್ದದ್ದೇ ದೀಪ್‌ ಸಿಧು ಸಾವಿಗೆ ಕಾರಣವಾಯ್ತಾ? ಬೀದಿದೀಪ ಇಲ್ಲದ ಕಡೆ ಅಪಘಾತ! ಪೊಲೀಸರು ಹೇಳಿದ್ದೇನು?

    ನವದೆಹಲಿ: 2021ರ ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ರೈತರ ಹಿಂಸಾಚಾರ ಪ್ರಕರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪ್ರಮುಖ ಆರೋಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಪಂಜಾಬಿ ನಟ ದೀಪ್ ಸಿಧು ಮಂಗಳವಾರ ನಡೆದ ಅಪಘಾತದಲ್ಲಿ ಮೃತಪಟ್ಟ ನಂತರ ಈ ಸಾವಿನ ಬಗ್ಗೆ ಹಲವಾರು ರೀತಿಯ ಮಾತುಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

    ದೀಪ್‌ ಸಿಧು ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅವರು ನಿಜಾಂಶವನ್ನು ಬಾಯಿಬಿಡಬಹುದು ಎನ್ನುವ ಕಾರಣಕ್ಕೆ ಅಪಘಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಏಕೆಂದರೆ ಕೆಂಪುಕೋಟೆಯಲ್ಲಿ ರೈತರ ಹಿಂಸಾಚಾರದ ಬಳಿಕ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದರು. ದೀಪ್​ ಸಿಧು ಮತ್ತು ಇತರೆ ಮೂವರು ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಣೆ ಮಾಡಿದ್ದರು. ಇದಾದ ಬಳಿಕ ಸಿಧುವನ್ನು ದೆಹಲಿ ಪೊಲೀಸರು 2021ರ ಫೆ. 9ರಂದು ಬಂಧಿಸಿದ್ದರು. ದೀಪ್‌ ಸಿಧು ವಿಚಾರಣೆ ನಡೆದರೆ ಗಲಭೆ ಹಿಂದಿರುವ ಹಲವಾರು ಕಾಣದ ಕೈಗಳ ವಿಷಯ ಬೆಳಕಿಗೆ ಬರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಕೊಲೆ ಮಾಡಿಸಲಾಗಿದೆ ಎಂಬುದು ಹಲವರ ಆರೋಪ.

    ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಅಪಘಾತ ಸಂಭವಿಸಿದ ಸ್ಥಳದಲ್ಲಿ ಬೀದಿದೀಪಗಳು ಇರಲಿಲ್ಲ. ಸಿಸಿಟಿವಿ ಫುಟೇಜ್‌ಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದರೂ ಈ ಸ್ಥಳದಲ್ಲಿ ಬೀದಿದೀಪ ಇರಲಿಲ್ಲ ಎಂಬುದಾಗಿ ಪೊಲೀಸರೇ ಹೇಳಿದ್ದಾರೆ. ಆದ್ದರಿಂದ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ.

    ಆದರೆ ಹೀಗೆ ವೈರಲ್ ಆಗುತ್ತಿರುವ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ ದೆಹಲಿಯ ಪೊಲೀಸರು. ದೆಹಲಿಯನ್ನು ಬೈಪಾಸ್ ಮಾಡುವ ಕುಂಡ್ಲಿ-ಮನೇಸರ್​-ಪಲವಲ್​ (ಕೆಎಂಪಿ) ಹೆದ್ದಾರಿಯನಲ್ಲಿ ಅಪಘಾತ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಲಭ್ಯವಾಗಿದ್ದು, ಅದರಲ್ಲಿ ಮಹೀಂದ್ರಾ ಸ್ಕಾರ್ಪಿಯೋ ವಾಹನ ಟ್ರೈಲರ್​ ಟ್ರಕ್​ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಎಸ್​ಯುವಿ ವಾಹನದ ಚಾಲಕನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿರುವುದು ಕಂಡುಬಂದಿದೆ ಎಂದಿರುವ ಪೊಲೀಸರು ದೀಪ್‌ ಸಿಧು ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಇದರಿಂದ ಅಪಘಾತ ಸಂಭವಿಸಲು ಮದ್ಯಸೇವನೆಯೂ ಕಾರಣ ಆಗಿರಬಹುದು ಎಂದಿದ್ದಾರೆ. ಸದ್ಯ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಟ್ರಕ್‌ ಡ್ರೈವರ್‌ ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ ಎಂದಿದ್ದಾರೆ.

    ಸಿಧು ಅವರು ದೆಹಲಿಯಿಂದ ಪಂಜಾಬ್​ನ ಭಟಿಂಡಾಗೆ ತೆರಳುತ್ತಿದ್ದರು. ಮಂಗಳವಾರ (ಫೆ. 15) ರಾತ್ರಿ 9.30ರ ಸುಮಾರಿಗೆ ಸಿಧು ಅವರಿದ್ದ ಎಸ್​ಯುವಿ ಕಾರು ಟ್ರಕ್​ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ತಕ್ಷಣ ಸಿಧು ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಸಾವಿಗೀಡಾಗಿರುವುದಾಗಿ ವೈದ್ಯರು ಘೋಷಣೆ ಮಾಡಿದರು.

    2021ರ ಜ. 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 86 ಮಂದಿ ಗಾಯಗೊಂಡಿದ್ದರು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್​ ರ್ಯಾಲಿಗೆ ನಾಲ್ಕು ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು. ಅದಕ್ಕಾಗಿ ಕೆಲವೊಂದು ಷರತ್ತುಗಳನ್ನೂ ವಿಧಿಸಲಾಗಿತ್ತು. ಎಲ್ಲಾ ಷರತ್ತುಗಳನ್ನು ರೈತರು ಒಪ್ಪಿಕೊಂಡಿದ್ದರು. ಆದರೆ, ಉದ್ದೇಶಪೂರ್ವಕವಾಗಿಯೇ ಹಿಂಸಾಚಾರವು ನಡೆದಿತ್ತು. ಈ ವೇಳೆ ಕಂಡಕಂಡಲ್ಲಿ ಪೊಲೀಸರ ಮೇಲೂ ಹಲ್ಲೆ ನಡೆದಿತ್ತು. ಹಿಂಸಾಚಾರದ ಹಿಂದೆ ದೀಪ್​ ಸಿಧು ಕೈವಾಡ ಹಿನ್ನೆಲೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿತ್ತು. ನಂತರ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೀಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದ್ದರಿಂದ ಹಲವಾರು ಆರೋಪಗಳು ಕೇಳಿಬರುತ್ತಿದ್ದು, ಸದ್ಯದ ಸ್ಥಿತಿಯವರೆಗೂ ಇವುಗಳಲ್ಲಿ ಹುರುಳಿಲ್ಲ ಎಂದಿದ್ದಾರೆ ಪೊಲೀಸರು. ಅಪಘಾತದ ಮಾಹಿತಿ ಇನ್ನಷ್ಟು ಕಲೆ ಹಾಕಲಾಗುತ್ತಿದೆ.

    VIDEO: ನಗ್ನವಾಗಿ ಮಲಗಿ, ಅಂದ ಹೆಚ್ಚಿಸಿಕೊಳ್ಳಿ ಎಂದ ವಿಶ್ವದ ಹಾಟೆಸ್ಟ್‌ ಅಜ್ಜಿ- ಗುಟ್ಟು ಹೇಳಿದ ನಾಲ್ಕು ಮಕ್ಕಳ ಅಮ್ಮ!

    ಪಕ್ಕದ್ಮನೆ ಆಂಟಿ ಜತೆ ಕಾಮದಾಟ: ಪತ್ನಿಯಿಂದಾಗಿ ಕೆಲಸ ಕಳೆದುಕೊಂಡ ಕಾನ್ಸ್‌ಟೆಬಲ್ ನೆರವಿಗೆ ಬಂದ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts