More

    ಗ್ಯಾಂಗ್​ರೇಪಿಸ್ಟ್​ಗಳಿಗೆ ಗಲ್ಲುಶಿಕ್ಷೆಯಾಗುವ ಕಾನೂನಾಗಲಿ-ಮನುಸ್ಮೃತಿ ಉಲ್ಲೇಖಿಸಿದ ಹೈಕೋರ್ಟ್​

    ಬೆಂಗಳೂರು: ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಕಾನೂನು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಬೇಕು ಎಂದು ಕರ್ನಾಟಕದ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

    ಗ್ಯಾಂಗ್​ರೇಪ್​ ಎನ್ನುವುದು ಕೊಲೆಗಿಂತಲೂ ಭೀಕರವಾದದ್ದು. ಇಂಥ ಕೃತ್ಯ ಎಸಗುವವರಿಗೆ ಗಲ್ಲುಶಿಕ್ಷೆ ನೀಡುವ ಕಾನೂನು ಜಾರಿಯಾಗಬೇಕಿದೆ. ಸ್ವಾತಂತ್ರ್ಯದ ಏಳು ದಶಕಗಳ ನಂತರವೂ ಭಾರತವು ಮಹಿಳಾ ಸಬಲೀಕರಣವನ್ನು ಸಾಧಿಸಿದೆ ಎಂದು ಹೇಳಲಾಗುತ್ತಿದ್ದರೂ, ಈಗಿನ ಸ್ಥಿತಿ ನೋಡಿದರೆ ಈ ಮಾತು ಹೆಮ್ಮೆ ಪಡುವಂತೆ ಕಾಣುತ್ತಿಲ್ಲ. ಮಹಿಳೆ ರಾತ್ರಿಯಲ್ಲಿ ರಸ್ತೆಗಳಲ್ಲಿ ಮುಕ್ತವಾಗಿ ನಡೆಯುವ ದಿನ ನಮಗೆ ಸ್ವಾತಂತ್ರ್ಯ ಬಂದಿದೆ ಎಂದು ಹೆಮ್ಮೆ ಪಡಬೇಕು ಎಂದು ಗಾಂಧೀಜಿ ಹೇಳಿದ್ದರು. ಆದರೆ ಇಂದು ಆಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದರೆ, ಸ್ವಾತಂತ್ರ್ಯ ಬಂದಂತೆ ಕಾಣುತ್ತಿಲ್ಲ ಎಂದು ಕೋರ್ಟ್​ ತೀವ್ರ ನೋವು ವ್ಯಕ್ತಪಡಿಸಿದೆ.

    ದೇಶಾದ್ಯಂತ ಸದ್ದು ಮಾಡಿದ್ದ ನಗರದ ಜ್ಞಾನಭಾರತಿ ಆವರಣದಲ್ಲಿ 2012ರಲ್ಲಿ ನಡೆದಿದ್ದ ಕಾನೂನು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಏಳು ಮಂದಿ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸುವ ಮೂಲಕ ಕೋರ್ಟ್​ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

    ಈ ಪ್ರಕರಣದಲ್ಲಿ 160 ಪುಟಗಳ ತೀರ್ಪು ನೀಡಿರುವ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಪೀಠ, ಮನುಸ್ಮೃತಿ ಮತ್ತು ವೇದಗಳಲ್ಲಿ ಇರುವ ಕೆಲವು ಶ್ಲೋಕಗಳನ್ನೂ ಹೇಳಿದೆ. ಮಹಿಳೆಯರನ್ನು ಗೌರವಿಸದೇ ಹೋದಲ್ಲಿ ಎಲ್ಲಾ ಆಚರಣೆಗಳೂ ವ್ಯರ್ಥ. ಮಹಿಳೆ ಸಂತಸದಿಂದ ಇರದ ಕುಟುಂಬ ಬಹುಬೇಗ ನಾಶವಾಗುತ್ತದೆ. ಮಹಿಳೆ ಸಂತಸದಿಂದ ಇದ್ದರೆ ಕುಟುಂಬ ಸದಾ ಏಳಿಗೆ ಕಾಣಿಸುತ್ತದೆ ಎಂಬ ಮನುಸ್ಮೃತಿಯಲ್ಲಿನ ಅಂಶಗಳನ್ನು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಇದನ್ನೂ ಓದಿ: VIDEO: ವಿಶ್ವದ ಅತಿದೊಡ್ಡ ಕಾರಂಜಿ ಉದ್ಘಾಟಿಸಿದ ದುಬೈ- ಗಿನ್ನೆಸ್​ ಬುಕ್​ ಪ್ರವೇಶ

    ವಿಚಿತ್ರ ಎಂದರೆ, ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳನ್ನು ಇಂದಿನ ಸಮಾಜ ವಿಚಿತ್ರವಾಗಿ ನೋಡುತ್ತದೆ. ಆದರೆ ಮನುಸ್ಮೃತಿ ಮತ್ತು ವೇದಗಳನ್ನು ಗಮನಿಸಿದಾಗ, ಆಗ ಈ ರೀತಿಯ ವಿಚಿತ್ರ ಸ್ವಭಾವ ಸಮಾಜದಲ್ಲಿ ಇಲ್ಲದ್ದನ್ನು ಕಾಣಬಹುದು. ಅತ್ಯಾಚಾರ ನಡೆದ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುತ್ತಿದ್ದುದು ಇದರಿಂದ ತಿಳಿದುಬರುತ್ತದೆ. ಆದರೆ ಈಗಿನ ಸಮಾಜ ಮಾತ್ರ ಹೆಣ್ಣುಮಕ್ಕಳನ್ನು ಕಡೆಗಣಿಸುವುದನ್ನು ಕಂಡರೆ ಆಶ್ಚರ್ಯವಾಗುತ್ತದೆ ಎಂದು ಪೀಠ ಹೇಳಿದೆ.

    1860ರಲ್ಲಿ ಜಾರಿಗೆ ಬಂದಿರುವ ಭಾರತೀಯ ದಂಡ ಸಂಹಿತೆಯಲ್ಲಿನ (ಐಪಿಸಿ) ಕಾಯ್ದೆಗಳ ಹೊರತಾಗಿಯೂ, ಸ್ವಾತಂತ್ರ್ಯದ 74 ವರ್ಷಗಳ ನಂತರವೂ, ಮಹಿಳೆ ಸುರಕ್ಷಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಐಪಿಸಿಯ 370ಡಿ ಕಲಮನ್ನು ತಿದ್ದುಪಡಿ ಮಾಡುವ ಮೂಲಕ ಅತ್ಯಾಚಾರಿಗೆ ಗಲ್ಲುಶಿಕ್ಷೆ ನೀಡುವಂತೆ ಕಾನೂನು ಜಾರಿಯಾಗಬೇಕಿದೆ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ.

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಹಳೆ ಪರೀಕ್ಷಾ ಭವನದ ಬಳಿ ರಾತ್ರಿ ಶ್ರೀಗಂಧ ಕಳವಿಗೆ ಬಂದ ಎಂಟು ಮಂದಿ, ಯುವತಿಯ ಗೆಳೆಯ ನಿರ್ಮಲ್ ಮೇಲೆ ಹಲ್ಲೆ ನಡೆಸಿದ್ದರು. ನಂತರ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಈ ಸಂಬಂಧ ಜ್ಞಾನಭಾರತಿ ಠಾಣೆಗೆ ಯುವತಿ ದೂರು ನೀಡಿದ್ದಳು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಡಿಜಿಪಿ ಸಿದ್ದರಾಮಪ್ಪ ಅವರು ವಿಶೇಷ ತಂಡವನ್ನು ರಚಿಸಿ ಆರೋಪಿಗಳ ರೇಖಾಚಿತ್ರವನ್ನು ಸಿದ್ಧಪಡಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    ರಾಮು, ಶಿವಣ್ಣ, ಮದ್ದೂರ, ಎಲಾಯ್ಯ ಅಲಿಯಾಸ್ ಎಲಿಯಾ, ಎರಯ್ಯ ಅಲಿಯಾಸ್ ಈರಾ, ರಾಜಾ, ಎಲ್ಲರೂ ರಾಮನಗರಂ ಜಿಲ್ಲೆಯ ಮೆಟಾರಿಡೋಡಿ ಗ್ರಾಮದವರು ಮತ್ತು ಹಬ್ಬಾಲಾ ಗ್ರಾಮದ ಹೆಬ್ಬಾಳ ಗ್ರಾಮದ ದೊಡ್ಡಾ ಎರಾಯಾ ಅಲಿಯಾಸ್ ದೋಡೀರ ಅವರಿಗೆ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್​ ವಜಾ ಮಾಡಿದೆ. ಜೀವಾವಧಿ ಶಿಕ್ಷೆ ಕಾಯಂ ಮಾಡಿದೆ.

    ಚಿನ್ನ ತಂದರಷ್ಟೇ ಸೀಮಂತ: ಲಕ್ಷ ಲಕ್ಷ ಕೊಟ್ಟರೂ ಮುಗಿಯದ ಧನದಾಹ- ಟೆಕ್ಕಿ‌ ಆತ್ಮಹತ್ಯೆ!

    ಸಿಎಂ ಪಟ್ಟ ಹೋದ್ಮೇಲೆ ಹುಚ್ಚನಂತೆ ಅಲೀತಿದ್ದಾರೆ… ಅವ್ರ ತಾಯಿ, ಸಹೋದರಿ ಐಟಂಗಳಿರಬೇಕು..

    ಉಪ ಚುನಾವಣೆ ಎಫೆಕ್ಟ್​! ಕಾಂಗ್ರೆಸ್ ಪ್ರಧಾನ ಕಚೇರಿ ಮೇಲೆ ಐಟಿ ದಾಳಿ: ₹ 8.5 ಲಕ್ಷ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts