More

    VIDEO: ಬ್ರೇಕಿಂಗ್‌ ನ್ಯೂಸ್‌ ಕೊಡಲು ಪ್ರಾಣ ಪಣಕ್ಕಿಟ್ಟ ಪತ್ರಕರ್ತನ ಸಾವು- ಇನ್ನೋರ್ವ ವರದಿಗಾರನ ಸ್ಥಿತಿ ಚಿಂತಾಜನಕ

    ಭುವನೇಶ್ವರ: ಕಟಕ್ ಜಿಲ್ಲೆಯ ಮುಂಡಲಿ ಸೇತುವೆಯ ಬಳಿ ಮಹಾನದಿಯ ನಡುವೆ ಸಿಲುಕಿಕೊಂಡಿದ್ದ ಆನೆಯನ್ನು ರಕ್ಷಿಸಲು ಹೋಗಿ ಪತ್ರಕರ್ತನೊಬ್ಬ ಮೃತಪಟ್ಟಿದ್ದು, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
    ಒಡಿಶಾ ಟೆಲಿವಿಷನ್‌ ಲಿಮಿಟೆಡ್‌ ಚಾನೆಲ್‌ನ ಹಿರಿಯ ವರದಿಗಾರ ಅರಿಂದಾಮ್‌ ದಾಸ್‌ (39) ಮೃತಪಟ್ಟಿದ್ದರೆ, ಇನ್ನೋರ್ವ ಪತ್ರಕರ್ತ ಪ್ರವತ್ ಸಿನ್ಹಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಿಂದಾಮ್‌ ದಾಸ್‌ ಪತ್ನಿ ಮತ್ತು ಎರಡು ವರ್ಷದ ಮಗನನ್ನು ಅಗಲಿದ್ದಾರೆ.

    ಇವರು ಆನೆ ರಕ್ಷಣೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಓಡ್ರಾಫ್ ದೋಣಿಯಲ್ಲಿದ್ದರು. ರಕ್ಷಣಾ ಕಾರ್ಯಚರಣೆಯ ಕ್ಷಣ ಕ್ಷಣದ ಮಾಹಿತಿ ನೀಡುವ ಸಂಬಂಧ ಇವರು ದೋಣಿಯಲ್ಲಿ ಸಾಗುತ್ತಿದ್ದರು. ಹಿರಾಕುಡ್ ಅಣೆಕಟ್ಟಿನಿಂದ ನಿರಂತರ ಮಳೆ ಮತ್ತು ನೀರನ್ನು ಬಿಡುಗಡೆ ಮಾಡಿದ ನಂತರ, ಮಹಾನದಿ ಉಕ್ಕಿ ಹರಿಯುತ್ತಿದ್ದು ಅದರ ನಡುವೆ ಇವರು ವರದಿ ಮಾಡಲು ಸಾಗಿದ್ದರು. ದೋಣಿ ಮುಗುಚಿದ್ದರಿಂದ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಕೆಲವು ರಕ್ಷಣಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಆನೆಗೆ ಸಹಾಯ ಮಾಡಲು ನದಿಗಿಳಿದ ರಕ್ಷಣಾ ತಂಡದ ದೋಣಿ, ನದಿಯಲ್ಲಿ ಭಾರೀ ಹರಿವಿನಿಂದಾಗಿ ಮಗಚಿಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

    ಈ ಆನೆಗಳು ಮಹಾನದಿ ನದಿಯನ್ನು ಚಂಡಕ ಕಡೆಯಿಂದ ಬಂಕಿಗೆ ದಾಟಲು ಪ್ರಯತ್ನಿಸುತ್ತಿತ್ತು. ನೀರಿನ ಪ್ರವಾಹದಿಂದಾಗಿ ಸುಮಾರು 10 ಆನೆಗಳು ಸಿಲುಕಿಕೊಂಡಿದ್ದವು. ಕೆಲ ಆನೆಗಳು ನದಿ ದಾಟಿದವು. ಆದರೆ ಈ ಒಂಟಿ ಆನೆ ಸೇತುವೆಯ ಹತ್ತಿರ ಸಿಲುಕಿಕೊಂಡಿತ್ತು. ನೀರಿನ ಹರಿವು ತುಂಬಾ ಜೋರಾಗಿ ಇತ್ತು. ಒಡಿಶಾದ 80 ಅರಣ್ಯ ಅಧಿಕಾರಿಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆಯ ಸದಸ್ಯರು ಆನೆಯನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದ್ದರು. ಇದರಲ್ಲಿ ಪತ್ರಕರ್ತರು ಕೂಡ ಭಾಗಿಯಾಗಿದ್ದರು.

    ಆನೆ ನೀರಿನಲ್ಲಿ ಕೊಚ್ಚಿ ಹೋಗದಂತೆ ಅದರ ಸುತ್ತಲೂ ಬಲೆ ಹಾಕಲಾಗಿತ್ತು. ಅದಕ್ಕೆ ತಿನ್ನುವುದಕ್ಕಾಗಿ ಮರದ ಕೊಂಬೆಗಳನ್ನು ಎಸೆಯಲಾಗುತ್ತಿತ್ತು. ಇಷ್ಟು ಮಾಡಿ ರಕ್ಷಣಾ ಕಾರ್ಯಚರಣೆ ಮಾಡುವ ವೇಳೆ ದುರಂತ ಸಂಭವಿಸಿದೆ.

    ಮಹಿಳೆಯರ ಬಟ್ಟೆ ತೊಳೆದು, ಇಸ್ತ್ರಿ ಮಾಡಿದರಷ್ಟೇ ಜಾಮೀನು: ರೇಪ್‌ ಆರೋಪಿಗೆ ಕೋರ್ಟ್‌ ಷರತ್ತು!

    ಸ್ನಾನ ಅಂದ್ರೆ ಹೆಂಡ್ತಿಗೆ ಆಗಲ್ಲ, ಅವಳ ಜತೆ ಮಲಗಲಾರೆ- ತಲಾಖ್‌ ಬೇಕು: ಕೋರ್ಟ್‌ನಲ್ಲಿ ಪತಿ ಅಳಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts