80 ವರ್ಷದ ವೃದ್ಧನಿಗೆ ಬಂತು 80 ಕೋಟಿ ರೂಪಾಯಿ ವಿದ್ಯುತ್‌ಬಿಲ್‌- ಮುಂದೇನಾಯ್ತು ನೋಡಿ…

blank

ಮುಂಬೈ: ಪ್ರತಿ ತಿಂಗಳು ಬರುವ ಕರೆಂಟ್‌ ಬಿಲ್‌ನಲ್ಲಿ ಸ್ವಲ್ಪ ಬೆಲೆ ಹೆಚ್ಚಾದರೂ ಏನೋ ಕಸಿವಿಸಿ ಶುರುವಾಗುತ್ತದೆ. ಒಂದು ವೇಳೆ ಸಾವಿರ ರೂಪಾಯಿ ಒಳಗೆ ಬರಬೇಕಿರುವ ಕರೆಂಟ್‌ ಬಿಲ್‌ ಕೋಟಿಯಲ್ಲಿ ಬಂದರೆ? ಅದು ಒಂದಲ್ಲಾ… ಎರಡಲ್ಲಾ… 80 ಕೋಟಿ ರೂಪಾಯಿ ಬಂದರೆ?

ಹಾರ್ಟ್‌ ವೀಕ್‌ ಇದ್ದವರಿಗೆ ಹೃದಯ ಬಡಿತ ನಿಂತುಹೋದರೂ ಅಚ್ಚರಿಯಿಲ್ಲ. ಅಂಥದ್ದೇ ಒಂದು ಘಟನೆ 80 ವರ್ಷದ ಗಣಪತಿ ನಾಯಕ್ ಎನ್ನುವವರಿಗೂ ಆಗಿದೆ. ಆದರೆ ಪುಣ್ಯಕ್ಕೆ ಅವರ ಹೃದಯ ಬಡಿತ ನಿಲ್ಲಲಿಲ್ಲ, ಬದಲಿಗೆ ಹೃದಯ ಬಡಿತದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿದೆ!

ಮಹಾರಾಷ್ಟ್ರದ ನಲ್‌ಸೊಪರ್‌ ಪಟ್ಟಣದ ನಿವಾಸಿಯಾಗಿರುವ ಗಣಪತಿ ಅವರು ಈ ತಿಂಗಳ ಬಿಲ್‌ ನೋಡಿ ಹೌಹಾರಿ ಹೋಗಿದ್ದಾರೆ. ಅದಕ್ಕೆ ಕಾರಣ, 80 ಕೋಟಿ ರೂಪಾಯಿ ಎಂದು ಬಿಲ್‌ನಲ್ಲಿ ದಾಖಲಾಗಿದೆ. ಇದು ವಿದ್ಯುತ್‌ ಕಂಪೆನಿಯ ಸಿಬ್ಬಂದಿಯ ಎಡವಟ್ಟಿನಿಂದ ಆಗಿದ್ದು ಎಂದು ಅವರಿಗೆ ತಿಳಿದಿದೆ. ಆದರೆ ಅವರು ಅಂದುಕೊಂಡದ್ದು ಏನೆಂದರೆ ಇಡೀ ಊರಿನ ಬಿಲ್‌ ಸೇರಿಸಿ ತಪ್ಪಾಗಿ ತಮ್ಮ ವಿಳಾಸಕ್ಕೆ ಕಳುಹಿಸಲಾಗಿದೆ ಎಂದು.

ಅದಕ್ಕಾಗಿ ಗಣಪತಿಯವರು ಮತ್ತೊಮ್ಮೆ ಬಿಲ್‌ ಸರಿಯಾಗಿ ಪರಿಶೀಲನೆ ಮಾಡಿದಾಗ ಹೃದಯ ಬಡಿತ ಹೆಚ್ಚಾಗಿದೆ. ಏಕೆಂದರೆ ಅದರಲ್ಲಿ ಸ್ಪಷ್ಟವಾಗಿ ಇವರ ಮನೆಯ ನಂಬರ್‌ ಮಾತ್ರ ಇದ್ದು, ಇದು ಇವರೊಬ್ಬರ ಮನೆಯ ವಿದ್ಯುತ್‌ ಬಿಲ್‌ ಆಗಿತ್ತು.

ಅದನ್ನು ನೋಡಿ ಟೆನ್ಷನ್‌ ಆಗಿ ಗಣಪತಿಯವರು ಎಚ್ಚರ ತಪ್ಪಿ ಬಿದ್ದುಬಿಟ್ಟಿದ್ದಾರೆ. ನಂತರ ಅವರ ಮೊಮ್ಮಗ ನೀರಜ್‌ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಂತೆ. ಚಿಕಿತ್ಸೆ ಪಡೆದು ಗುಣಮುಖರಾದ ಮೇಲೆ ಅವರು ಹಾಗೂ ಇತರರು ವಿದ್ಯುತ್‌ ನಿಗಮವನ್ನು ಸಂಪರ್ಕಿಸಿದ್ದಾರೆ.

ನಂತರ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಅಧಿಕಾರಿಗಳು ಇವರ ಕ್ಷಮೆ ಕೋರಿದ್ದಾರೆ. ಮೀಟರ್ ರೀಡಿಂಗ್ ತೆಗೆದುಕೊಳ್ಳುವ ಏಜೆನ್ಸಿಯ ಒಂದು ಭಾಗದಲ್ಲಿ ದೋಷ ಕಂಡು ಬಂದಿದೆ. ನಾವು ಗಣಪತಿಯವರ ಕ್ಷಮೆ ಕೋರಿದ್ದೇವೆ ಎಂದು ಅಧಿಕಾರಿ ಸುರೇಂದ್ರ ಮೊರೆನ್‌ ಹೇಳಿದ್ದಾರೆ. ಏಜೆನ್ಸಿ ಆರು ಅಂಕಿಗಳ ಬದಲಿಗೆ ಒಂಬತ್ತು ಅಂಕಿಗಳ ಬಿಲ್‌ ತಯಾರಿಸಿತ್ತು. ಇದರಿಂದ ಆಗಿರುವ ಎಡವಟ್ಟು ಇದು. ಗಣಪತಿಯವರಿಗೆ ಸರಿಯಾದ ಬಿಲ್‌ ನಂತರ ನೀಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ವಿದ್ಯುತ್‌ ನಿಗಮದ ಎಡವಟ್ಟಿನಲ್ಲಿ ಈ ವಯೋವೃದ್ಧರಿಗೇನಾದರೂ ಅಪಾಯವಾಗಿದ್ದರೆ ಯಾರು ಜವಾಬ್ದಾರರಾಗುತ್ತಿದ್ದರು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ಮೊಮ್ಮಗನಿಗೆ ಊಟ ಕೊಡಿಸಿದ ಮೊತ್ತ ₹200; ಪಾರ್ಕಿಂಗ್​ಗೆ ದಂಡ ತೆತ್ತದ್ದು ಒಂದುಮುಕ್ಕಾಲು ಲಕ್ಷ ರೂ!

14 ವರ್ಷದ ಬಾಲಕಿಯನ್ನು ಮದುವೆಯಾದ 50 ವರ್ಷದ ಸಂಸದ: ದಾಖಲಾಯ್ತು ಕೇಸ್​

ಅಯ್ಯೋ ಅವ್ನ ಮದ್ವೆಯಾಗಿದೆ ಅಂತ ಗೊತ್ತಿದ್ರೆ ಅವ್ನ ಜತೆ ಹೀಗೆಲ್ಲಾ ಮಾಡ್ತಾನೇ ಇರ್ಲಿಲ್ಲ: ಕಣ್ಣೀರಿಟ್ಟ ರಾಖಿ ಸಾವಂತ್​

https://www.vijayavani.net/s-nyayadevate-patniya-mobilenalli-priyakarana/

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…