More

    ಕೋವಿಡ್‌ ಟೆಸ್ಟ್‌ಗೆ ಹೆದರಿ ರೈಲ್ವೆ ಸ್ಟೇಷನ್‌ ಗೋಡೆ ಹಾರಿ ಪರಾರಿ!

    ಯಾದಗಿರಿ: ಕೆಲವು ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕರ್ನಾಟಕದಲ್ಲಿ ಕೋವಿಡ್‌ ಟೆಸ್ಟ್‌ ಕಡ್ಡಾಯ ಮಾಡಲಾಗಿದೆ. ಇದೇ ಕಾರಣಕ್ಕೆ ರೈಲು ನಿಲ್ದಾಣಗಳಲ್ಲಿ ಎಂಟ್ರಿ ಕೊಡುತ್ತಿದ್ದಂತೆಯೇ ಪರೀಕ್ಷೆ ಮಾಡಲಾಗುತ್ತಿದೆ.

    ಇದೇ ರೀತಿ ಮಹಾರಾಷ್ಟ್ರದಿಂದ ಆಗಮಿಸಿದ ಪ್ರಯಾಣಿಕರೂ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಪರೀಕ್ಷೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಕೆಲವು ಪ್ರಯಾಣಿಕರು ಗೋಡೆ ಹಾರಿ ಎಸ್ಕೇಪ್‌ ಆಗಿರುವ ಘಟನೆ ನಡೆದಿದೆ.
    ರೈಲ್ವೆ ನಿಲ್ದಾಣದ ಹಿಂಭಾಗದ ತಡೆಗೊಡೆ ಹಾರಿ ತಪ್ಪಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಇವರಿಗೆ ಕೋವಿಡ್ ಟೆಸ್ಟಿಂಗ್ ಎಂದರೆ ಭಯ. ಒಂದು ವೇಳೆ ಈ ಪರೀಕ್ಷೆಯಲ್ಲಿ ತಮಗೆ ಪಾಸಿಟಿವ್‌ ಎಂದು ತೋರಿಸಿಬಿಟ್ಟರೆ ಮುಂದೆ ಕ್ವಾರಂಟೈನ್‌, ಅದೂ ಇದೂ ನಿಯಮ ಪಾಲನೆ ಮಾಡಬೇಕಾಗುತ್ತದೆ ಎಂಬ ಭಯ ಒಂದೆಡೆಯಾದರೆ, ಕೆಲವರಿಗೆ ಟೆಸ್ಟಿಂಗ್‌ ಮಷಿನ್‌ ಮೇಲೆ ನಂಬಿಕೆ ಇಲ್ಲದ್ದೂ ಕಾರಣವಾಗಿದೆ. ತಮಗೆ ನೆಗೆಟಿವ್‌ ಇದ್ದರೂ ಪಾಸಿಟಿವ್‌ ಎಂದು ತೋರಿಸಿದರೆ ಗತಿಯೇನು ಎನ್ನುವುದು ಈ ಪ್ರಯಾಣಿಕರ ಅಳಲು

    ಇದೇ ಕಾರಣಕ್ಕೆ ಟೆಸ್ಟಿಂಗ್‌ ಉಸಾಬರಿಯೇ ಬೇಡ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ. ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಗಾಡಿ ಮೂಲಕ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ಜಿಲ್ಲಾಡಳಿತ ಕಣ್ಗಾವಲು ಇಟ್ಟಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಜತೆಗೆ ಡೆಲ್ಟಾ ಪ್ಲಸ್ ಕೇಸ್ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಟ್ಟಿನಿಟ್ಟಿನ ಕ್ರಮ ಅನುಸರಿಸಲಾಗಿದೆ.

    ಮಹಾರಾಷ್ಟ್ರದಿಂದ ಬರುವ ಜನರ ಆರ್ ಟಿ -ಪಿಸಿಆರ್ ನೆಗೆಟಿವ್ ಪರೀಕ್ಷೆ ವರದಿ ಕಡ್ಡಾಯ ಮಾಡಲಾಗಿದೆ. 72 ಗಂಟೆ ಒಳಗೆ ನೀಡಿದ್ದ ವರದಿ ಇದ್ದವರಿಗೆ ಹಾಗೂ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿದ್ದವರಿಗೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಈ ವರದಿ ತರದೇ ಇರುವವರು ಹಾಗೂ ಲಸಿಕೆ ಪ್ರಮಾಣ ಪತ್ರ ಇಲ್ಲದೇ ಇರುವವರಿಗೆ ಟೆಸ್ಟಿಂಗ್‌ ಮಾಡಲಾಗುತ್ತಿದೆ. ಆದರೂ ಪೊಲೀಸರ ಕಣ್ಣುತಪ್ಪಿಸಿ ಇವರು ಪರಾರಿಯಾಗುತ್ತಿದ್ದಾರೆ.

    ಮೂಡಬಿದ್ರೆಯಲ್ಲಿ ಬೆಚ್ಚಿಬೀಳಿಸೋ ಘಟನೆ: ಲಸಿಕೆ ಕೊಡಿಸೋ ನೆಪದಲ್ಲಿ ರಾತ್ರೋರಾತ್ರಿ ಮಹಿಳೆಯರ ಸಾಗಾಟ!

    ಕೋವಿಡ್‌ ಟೆಸ್ಟ್‌ ಮಾಡ್ತಿದ್ದಂತೆಯೇ ಗೋಡೆ ಹಾರಿ ಎಸ್ಕೇಪ್‌: ಮಹಿಳೆಯರೂ ಹಿಂದೆ ಬಿದ್ದಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts