More

    ಮುಟ್ಟಿನ ಐದು ದಿನ ಆಚೆ-ಈಚೆ ಕರೊನಾ ಲಸಿಕೆ ಪಡೆಯಬಾರದು ಎನ್ನುವ ಸುದ್ದಿ ನಿಜನಾ?

    ನವದೆಹಲಿ: ಋತುಸ್ರಾವವಾಗುವ ಆಗುವ ಐದು ದಿನಗಳು ಮೊದಲು ಹಾಗೂ ಋತುಸ್ರಾವವಾದ ಐದು ದಿನಗಳ ನಂತರ ಕರೊನಾ ಲಸಿಕೆಯನ್ನು ಪಡೆಯಬಾರದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಮುಟ್ಟಿನ ಆಚೀಚೆ ಐದು ದಿನಗಳ ಅವಧಿಯಲ್ಲಿ ರೋಗನಿರೋಧಕ ಶಕ್ತಿ ತುಂಬಾ ಕಡಿಮೆ ಇರುವ ಕಾರಣ ಲಸಿಕೆ ಹಾಕಿಸಿಕೊಂಡರೆ ಅಪಾಯ ಎಂದು ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ನಿಮಗೂ ಕಾಣಿಸಿರಬೇಕಲ್ಲವೆ? ಹಾಗಿದ್ದರೆ ಅದು ನಿಜವೆ?

    ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಅಸಲಿಯಲ್ಲ, ಬದಲಿಗೆ ನಕಲಿ ಎಂದು ಪ್ರೆಸ್‌ ಬ್ಯೂರೋ ಆಫ್‌ ಇಂಡಿಯಾ (ಪಿಬಿಐ) ಹೇಳಿದೆ. ತಜ್ಞರ ವರದಿಯನ್ನು ಆಧರಿಸಿ ನಡೆಸಿದ ಫ್ಯಾಕ್ಟ್‌ಚೆಕ್‌ನಲ್ಲಿ ಈ ಅಂಶ ಬಹಿರಂಗೊಂಡಿದ್ದು, ಈ ವದಂತಿಗೆ ಕಿವಿಗೊಡಬೇಡಿ ಎಂದು ಹೇಳಲಾಗಿದೆ.

    ಮೇ 1 ರ ನಂತರ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಹಾಕಬೇಕು. ನೋಂದಣಿ ಏಪ್ರಿಲ್ 28 ರಿಂದ ಆರಂಭವಾಗಲಿದೆ. ಇಂಥ ಸಂದರ್ಭದಲ್ಲಿ ಮುಟ್ಟಿನ ಆಚೀಚೆ ದಿನಗಳ ಕುರಿತಂತೆ ಸುದ್ದಿಗಳು ಹರಿದಾಡುತ್ತಿದ್ದು ಇವುಗಳನ್ನು ನಂಬಬಾರದು ಎಂದು ಪಿಬಿಐ ಹೇಳಿದೆ.

    ಗರ್ಭ ಧರಿಸುವ ಪ್ಲ್ಯಾನ್‌ ಇದ್ದವರು ಲಸಿಕೆ ಪಡೆಯುವುದಾದರೆ ಎರಡು ತಿಂಗಳು ಗರ್ಭಧಾರಣೆಯನ್ನು ಮುಂದೂಡಿ ಎಂದು ಇದಾಗಲೇ ಹಲವಾರು ವೈದ್ಯರು ತಿಳಿಸಿರುವುದು ಇಲ್ಲಿ ಉಲ್ಲೇಖಾರ್ಹ.

    ಒಂದೆಡೆ ನನ್ನ ಹುಡುಗ… ಇನ್ನೊಂದೆಡೆ ಪ್ರೀತಿಯ ಬಲೆಗೆ ಬಿದ್ದ ಅಮ್ಮ… ಡೋಲಾಯಮಾನವಾದ ಬದುಕಿಗೆ ದಾರಿ ತೋರಿ…

    ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ, ಕನ್ನಡಿಗ ಮೋಹನ ಶಾಂತನಗೌಡರ್‌ ಇನ್ನಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts