More

    ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲಿಯೂ ಸಿಗಲಿದೆ ಕೋವಿಡ್‌ ಪ್ರಮಾಣಪತ್ರ- ಅದಕ್ಕಾಗಿ ಮಾಡಬೇಕಾದದ್ದು ಇಷ್ಟು…

    ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಲಸಿಕೆಯ ಪ್ರಮಾಣವನ್ನು ಸರ್ಕಾರ ಹೆಚ್ಚು ಮಾಡುತ್ತಲೇ ಇದ್ದು, ಹಲವಾರು ಯೋಜನೆಗಳಿಗೆ ಈ ಲಸಿಕೆ ಪ್ರಮಾಣ ಪತ್ರ ತೋರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಜತೆಗೆ ಹೊರ ರಾಜ್ಯ, ಹೊರ ದೇಶಗಳ ಸಂಚಾರಕ್ಕೂ ಇದನ್ನು ಕಡ್ಡಾಯಗೊಳಿಸಲಾಗಿದೆ.

    ಕರೊನಾ ಲಸಿಕೆ ಹಾಕಿಸಿಕೊಂಡ ತಕ್ಷಣ ಅದರ ಸಂದೇಶಗಳು ಬರುತ್ತವೆ. ಒಂದು ವೇಳೆ ಈ ಸಂದೇಶ ಡಿಲೀಟ್‌ ಆದರೆ ಅದನ್ನು ಸುಲಭದಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಇಲ್ಲವೇ ಕೋವಿನ್ ಪೋರ್ಟಲ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಸೌಲಭ್ಯ ಆರಂಭದಿಂದಲೂ ಇದೆ. ಆದರೆ ಇದೀಗ ಲಸಿಕೆ ಪ್ರಮಾಣ ಪತ್ರವನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದೆ.

    ಅದೇನೆಂದರೆ ವಾಟ್ಸ್‌ಆ್ಯಪ್‌ನಲ್ಲಿಯೂ ಲಸಿಕೆಯ ಪ್ರಮಾಣಪತ್ರವನ್ನು ಇನ್ನುಮುಂದೆ ಪಡೆದುಕೊಳ್ಳಬಹುದಾಗಿದೆ. ರೈಲು ಅಥವಾ ವಿಮಾನದಲ್ಲಿ ಪ್ರಯಾಣಿಸುವವರಿಗೆ ಅಥವಾ ಇನ್ನಾವುದೇ ಸಂದರ್ಭಗಳಲ್ಲಿ ತತ್‌ಕ್ಷಣ ಇದನ್ನು ತೋರಿಸಲು ಸಾಧ್ಯವಾಗುವುದರಿಂದ ಇದು ಎಲ್ಲಕ್ಕಿಂತಲೂ ಸುಲಭ ಎನ್ನಲಾಗಿದೆ.

    ಹಾಗಿದ್ದರೆ ಇದನ್ನು ಪಡೆಯುವುದು ಹೇಗೆ ನೋಡೋಣ:

    ಮೊದಲಿಗೆ ಮೊಬೈಲಿನಲ್ಲಿ 90131 51515 ಸಹಾಯವಾಣಿ ಸಂಖ್ಯೆಯನ್ನು ಸೇವ್‌ ಮಾಡಿಕೊಳ್ಳಬೇಕು. ಚ್ಯಾಟ್ ಆಯ್ಕೆಯಲ್ಲಿ ಈ ಸಹಾಯವಾಣಿ ನಂಬರ್ ತೆಗೆದು ಅದರಲ್ಲಿ Certificate ಎಂದು ಟೈಪ್ ಮಾಡಿ ಕಳುಹಿಸಿ. ಎಸ್‌ಎಂಎಸ್ ಮೂಲಕ ನಿಮ್ಮ ಫೋನ್‌ಗೆ 6 ಅಂಕಿಯ ಒಟಿಪಿ ಬರುತ್ತದೆ. ಇದು ಮೂರು ನಿಮಿಷಗಳವರೆಗೆ ಇರುತ್ತದೆ. ಅಷ್ಟರ ಒಳಗೆ ಒಟಿಪಿ ನಂಬರ್ ಅನ್ನು ನಮೂದಿಸಿ, ಕಳುಹಿಸಬೇಕು.

    ನಿಮ್ಮ ಫೋನ್ ನಂಬರ್‌ನಿಂದ ಯಾರ್ಯಾರು ಲಸಿಕೆ ಹಾಕಿಸಿಕೊಂಡಿದ್ದಾರೋ ಅವರ ಹೆಸರು ಅದರಲ್ಲಿ ಕಾಣಿಸುತ್ತದೆ. ಇದರರ್ಥ ಕೆಲವೊಮ್ಮೆ ಒಂದೇ ಫೋನ್‌ ನಂಬರ್‌ ಬಳಸಿ ಬೇರೆ ಬೇರೆಯವರು ಲಸಿಕೆ ಹಾಕಿಸಿಕೊಂಡಿದ್ದರೆ ಎಲ್ಲರ ಹೆಸರು ಅದರಲ್ಲಿ ಕಾಣಿಸುತ್ತದೆ. ನಿಮಗೆ ಯಾರ ಲಸಿಕೆಯ ಪ್ರಮಾಣ ಪತ್ರ ಬೇಕು ಅವರ ಹೆಸರಿನ ಮುಂದೆ ಇರುವ ಸಂಖ್ಯೆಯನ್ನು ಟೈಪ್‌ ಮಾಡಿ ಕಳುಹಿಸಿ. ಈಗ ನಿಮ್ಮ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಕೇವಲ 30 ಸೆಕೆಂಡುಗಳಲ್ಲಿ ಪಿಡಿಎಫ್ ಆವೃತ್ತಿಯಲ್ಲಿ ಪಡೆದುಕೊಳ್ಳಬಹುದು.

    ಲೈಂಗಿಕ ಕ್ರಿಯೆ ವೇಳೆ ಮನಬಂದಂತೆ ಕಚ್ಚುವ ಪತಿ ವಿರುದ್ಧ ಅರ್ಜಿ: ಹಲ್ಲನ್ನು ತೆಗೆದುಹಾಕುವಂತೆ ಕೋರ್ಟ್‌ ಆದೇಶ

    ಕಾರಿನ ಹೊರಗೆ ಮದುವೆಯ ಮೆರುಗು- ಒಳಗಡೆ ಹಸುಗಳ ಒದ್ದಾಟ! ಉಡುಪಿಯಲ್ಲಿ ಅಮಾನವೀಯ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts