More

    ಜನರು ಅನಗತ್ಯ ಓಡಾಡುತ್ತಿದ್ರೆ ಅವರ ನಿಯಂತ್ರಣಕ್ಕೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ- ಜಿಲ್ಲಾಡಳಿತಗಳಿಗೆ ಸಿಎಂ ಖಡಕ್ ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಸರಪಳಿಯನ್ನು ಕಡಿಯಲು‌ ಮೇ 12ರವರೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಸೂಚಿಸಿದಂತೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ, ಇದು ನಿಮ್ಮ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ಕೊಟ್ಟಿದ್ದಾರೆ.

    ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಮುಖ್ಯಮಂತ್ರಿ ಹಲವು ಸೂಚನೆಗಳನ್ನು ನೀಡಿದರು.

    ಜನರಿಗೆ ಅಗತ್ಯವಸ್ತು ಕೊಳ್ಳಲು 6 ರಿಂದ 10 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ. ಕೆಲವು ವರ್ಗದವರಿಗೆ ವಿನಾಯಿತಿ ನೀಡಲಾಗಿದೆ, ಅವರನ್ನು ಹೊರತುಪಡಿಸಿ ಈ ಸಮಯದ ಬಳಿಕ ಜನರ ಓಡಾಟವನ್ನು ಮುಲಾಜಿಲ್ಲದೆ ನಿಯಂತ್ರಿಸಿ. ಇದು ಅನಿವಾರ್ಯ ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಆಕ್ಸಿಜನ್, ಬೆಡ್, ಔಷಧಿ, ಆಂಬುಲೆನ್ಸ್ ಲಭ್ಯತೆ ಸೇರಿ ವಿವಿಧ ವಿಚಾರಗಳ ಬಗ್ಗೆ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿದ‌ ಸಿಎಂ, ಯಾವುದೇ ಕೊರತೆ ಇದ್ದರೆ ತಕ್ಷಣ ಗಮನಕ್ಕೆ ತನ್ನಿ. ಮುಂಜಾಗ್ರತೆಯಾಗಿ ಎಲ್ಲ ತಯಾರಿ ಮಾಡಿಕೊಳ್ಳಿ, ಸರ್ಕಾರ ನಿಮ್ಮ‌ಜತೆಗಿರುತ್ತದೆ ಎಂದು ಭರವಸೆ ನೀಡಿದರು.

    ಮುಖ್ಯಮಂತ್ರಿ ಏನು ಹೇಳಿದ್ರು ಎಂದು ಇಲ್ಲಿ ಕೇಳಿ…
    https://www.facebook.com/VVani4U/videos/1948755508595873/

    ಪಶ್ಚಿಮ ಬಂಗಾಳದಲ್ಲಿ ಕೊನೆ ಹಂತದ ಮತದಾನ- ಮತಗಟ್ಟೆ ಸಮೀಪ ಬಾಂಬ್‌: ಬೆಚ್ಚಿಬಿದ್ದ ಜನತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts