More

    ನಕಲಿ ಪಾಸ್‌ಪೋರ್ಟ್‌ನಿಂದ ಚೀನಿಯರ ಎಂಟ್ರಿ- ಸಾವಿರಾರು ಕೋಟಿ ಟೋಪಿ: ಸಿಕ್ಕಿಬಿದ್ದ ಖದೀಮರು

    ನವದೆಹಲಿ: ಚೀನಾ ಮಾಲ್‌ಗಳು ಎಂದರೆ ನಕಲಿ ಎಂದೇ ಹೆಸರುವಾಸಿ. ಆದರೂ ಅದರ ಬೆಲೆ ಕಮ್ಮಿ ಇರುವ ಕಾರಣ, ನಕಲಿ ಎನ್ನುತ್ತಲೇ ಅದೇ ವಸ್ತುಗಳಿಗೆ ಮುಗಿಬೀಳುವವರು ಅಧಿಕ. ಆದರೆ ಇದೀಗ ಚೀನಾ ಮಾಲ್‌ಗಳಷ್ಟೇ ನಕಲಿಯಲ್ಲ, ಬದಲಿಗೆ ಭಾರತದಲ್ಲಿ ನಕಲಿ ಕಂಪೆನಿಗಳನ್ನೂ ಚೀನಿಯರು ತೆಗೆದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

    ಹೌದು! ಭಾರತಕ್ಕೆ ನುಸುಳುವ ನಕಲಿ ಪಾಸ್‌ಪೋರ್ಟ್‌ಗಳನ್ನು ತಯಾರಿಸಿಕೊಂಡು, ಭಾರತಕ್ಕೆ ಎಂಟ್ರಿ ಕೊಟ್ಟಿರುವ ಕೆಲವು ಚೀನಿಯರು ಇಲ್ಲಿ ಭಾರತೀಯರೇ ಎಂದುಕೊಂಡು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡದೇ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.

    ಭಾರತದ ನಕಲಿ ಪಾಸ್ ಪೋರ್ಟ್ ಹೊಂದಿರುವ ಚೀನಾದ ವ್ಯಕ್ತಿ ಇದರ ಕಿಂಗ್‌ಪಿನ್ ಎನ್ನಲಾಗಿದೆ. ಮಣಿಪುರದಲ್ಲಿ ಭಾರತದ ನಕಲಿ ಪಾಸ್ ಪೋರ್ಟ್ ತಯಾರು ಮಾಡಿ ಕೊಡಲಾಗಿದೆಯಂತೆ. ಈ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದು, ಶೋಧ ಕಾರ್ಯ ಮುಂದುವರೆಸಿರುವುದಾಗಿ ವರದಿ ತಿಳಿಸಿದೆ.

    ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗುಂಡೇಟು, ಗಾಯಗೊಂಡವರು ಮನೆಯಲ್ಲೇ ಅಡಗಿದ್ದಾರೆ…

    ಗಲ್ವಾನ್ ಗಡಿ ವಿಚಾರದಲ್ಲಿ ಸಂಘರ್ಷಕ್ಕೆ ಇಳಿದಿದ್ದ ಚೀನಾಕ್ಕೆ ಭಾರತ ಆರ್ಥಿಕ ಪೆಟ್ಟು ನೀಡುತ್ತಲೇ ಇದ್ದು, ಇದಾಗಲೇ ಸಾವಿರಾರು ಕೋಟಿ ರೂಪಾಯಿಗಳ ನಷ್ಟವನ್ನು ಚೀನಾ ಅನುಭವಿಸುತ್ತಿದೆ. ಆದರೆ ಅದೇ ಇನ್ನೊಂದೆಡೆ, ಈ ರೀತಿಯ ಕುತಂತ್ರ ಬುದ್ಧಿಯನ್ನೂ ಚೀನಿಯರು ಶುರು ಮಾಡಿಕೊಂಡಿದ್ದಾರೆ. ಆದರೆ ದುರದೃಷ್ಟಕರ ಸಂಗತಿ ಎಂದರೆ ಇವರಿಗೆ ನೆರವು ನೀಡುತ್ತಿರುವುದು ಕೆಲವು ಭಾರತೀಯರು!

    ಚೀನಿಯರು ಭಾರತೀಯರ ಹೆಸರಿನಲ್ಲಿ ನಡೆಸುತ್ತಿದ್ದ ಕೆಲವು ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದಾಗಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನ್ ತಿಳಿಸಿದೆ.

    ದೆಹಲಿ, ಗುರುಗ್ರಾಮ ಮತ್ತು ಗಾಜಿಯಾಬಾದ್‌ನಲ್ಲಿ ಚೀನಿಯರು ನಡೆಸುತ್ತಿದ್ದ ಸುಮಾರು 12 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇದರಲ್ಲಿ ಅವರ ಕೆಲವು ಭಾರತೀಯ ಸಹವರ್ತಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

    ದೇಶದಲ್ಲಿರುವ ಕೆಲವು ಚೀನಿಯರ ಬಗ್ಗೆ ಮಾಹಿತಿ ಸಿಗುತ್ತಲೇ ಕಾರ್ಯಾಚರಣೆಗಿಳಿದಿರುವ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಾರತದ ನಕಲಿ ಪಾಸ್ ಪೋರ್ಟ್ ಜಾಲದ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ಜತೆ ಮಾಹಿತಿ ಹಂಚಿಕೊಂಡಿದ್ದು, ಪಾಸ್ಸ್‌ಪೋರ್ಟ್‌ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿರುವುದಾಗಿ ವರದಿ ಹೇಳಿದೆ.

    ಪಿಯುಸಿ ಟಾಪರ್‌ ಅಪಘಾತದಲ್ಲಿ ಸಾವು: ಘಟನೆಯ ಹಿಂದಿದೆ ಕಾಣದ ಕೈ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts