More

    ಬಾಹ್ಯಾಕಾಶ ನಿಲ್ದಾಣಕ್ಕೆ ಮನುಷ್ಯರನ್ನು ಹೊತ್ತೊಯ್ಯಿತು ಚೀನಾ: ಇತಿಹಾಸ ಬರೆದ ರೋಚಕ ಕ್ಷಣಗಳು ಇಲ್ಲಿವೆ ನೋಡಿ…

    ಜಿಕ್ಯುಯಾನ್ (ಚೀನಾ): ಬಾಹ್ಯಾಕಾಶ ಯಾನಕ್ಕೆ ಇದೇ ಮೊದಲ ಬಾರಿ ಚೀನಾ ಮಾನವರನ್ನು ಕಳುಹಿಸಿದ್ದು, ಇಂದು ಮುಂಜಾನೆ ರಾಕೆಟ್ ಪ್ರಯಾಣ ಬೆಳೆಸಿದೆ. ಟಿಯಾಂಗಾಂಗ್ ನಿಲ್ದಾಣದಿಂದ ‘ಲಾಂಗ್ ಮಾರ್ಚ್ 2’ ರಾಕೆಟ್ ಉಡಾವಣೆಯಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 9.22ಕ್ಕೆ ರಾಕೆಟನ್ನು ಉಡಾವಣೆ ಮಾಡಲಾಗಿದೆ.

    ಈ ಮೂಲಕ ಚೀನಾ ತನ್ನ ದೇಶದಲ್ಲಿ ಇತಿಹಾಸ ಸೃಷ್ಟಿಸಿದ್ದು, ಮಾನವ ಸಹಿತ ಚೊಚ್ಚಲ ರಾಕೆಟ್‌ ಅನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದೆ. ಬಾಹ್ಯಾಕಾಶ ಯಾನಿಗಳನ್ನು ಕರೆದೊಯ್ಯುವ ಮಹತ್ವಾಕಾಂಕ್ಷಿ ಮಿಷನ್ ಇದಾಗಿದ್ದು, ಇದರ ಮೂಲಕ ವಿಶ್ವದ ಪ್ರಬಲ ಬಾಹ್ಯಾಕಾಶ ಶಕ್ತಿಯಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಚೀನಾದ್ದಾಗಿದೆ. ಗಗನಯಾತ್ರಿಗಳು ಮೂರು ತಿಂಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯಲಿದ್ದಾರೆ.

    ಚೀನಾದಲ್ಲಿ ಕಮ್ಯುನಿಸ್ಟ್ ಆಳ್ವಿಕೆಯ 100ನೇ ವರ್ಷದ ಸಂಭ್ರಮ ಜುಲೈ 1ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಉಡಾವಣೆಗೆ ಭಾರಿ ಪ್ರಚಾರ ನೀಡಲಾಗಿದೆ. ಉಡಾವಣೆಗೊಂಡ 10 ನಿಮಿಷಗಳ ನಂತರ ರಾಕೆಟ್‌ ಕಕ್ಷೆಯನ್ನು ತಲುಪಿದ್ದು, ಬಾಹ್ಯಾಕಾಶ ನೌಕೆ ರಾಕೆಟ್‌ನಿಂದ ಬೇರ್ಪಟ್ಟಿದೆ.

    ಇಷ್ಟಾಗುತ್ತಿದ್ದಂತೆಯೇ ನಿಯಂತ್ರಣ ಕೊಠಡಿಗಳಲ್ಲಿ ಇಂಜಿನಿಯರ್‌ಗಳಿಂದ ಚಪ್ಪಾಳೆ ಸದ್ದು ಮೊಳಗಿದ್ದು, ನೌಕೆಯ ಒಳಗಿರುವ ಮೂವರು ಗಗನಯಾತ್ರಿಗಳು ಮುಗುಳು ನಗೆ ಬೀರಿದ್ದಾರೆ. ನೌಕೆಯ ಹೊರಗಡೆ ಕ್ಯಾಮೆರಾ ಫಿಕ್ಸ್‌ ಮಾಡಲಾಗಿದ್ದು, ಅದು ಭೂಮಿಯ ಹೊರ ಭಾಗದ ಚಿತ್ರವನ್ನು ಕ್ಲಿಕ್ಕಿಸುತ್ತಿದೆ.

    ಇದರ ವಿಡಿಯೋ ಇಲ್ಲಿದೆ ನೋಡಿ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts