More

    ಭಾರತಕ್ಕೆ ಅಕ್ರಮವಾಗಿ ಬಂದು ದಲೈಲಾಮಾ ಮೇಲೆ ಕಣ್ಣಿಟ್ಟಿದ್ದ ಚೀನಿ ‘ಕಳ್ಳ’!

    ನವದೆಹಲಿ: ನಕಲಿ ಪಾಸ್‌ಪೋರ್ಟ್‌ ಮೂಲಕ ಭಾರತಕ್ಕೆ ನುಸುಳಿ ಇಲ್ಲಿ ಹವಾಲಾ ದಂಧೆ ನಡೆಸುತ್ತಿದ್ದ ಚೀನಿ ವ್ಯಕ್ತಿಯೊಬ್ಬ, ಟಿಬೆಟಿಯನ್‌ ಬೌದ್ಧಗುರು ದಲೈ ಲಾಮಾ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.

    ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿರುವ ಲ್ಯೂ ಸಾಂಗ್‌ ಎಂಬ ಚೀನಾದವ, ದಲೈ ಲಾಮಾ ಮೇಲೆ ಕಣ್ಣಿಟ್ಟಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

    ಭಾರತದಲ್ಲಿ ವಾಸವಿದ್ದ ಹಲವು ಟಿಬೆಟಿಯನ್‌ ಬೌದ್ಧರಿಗೆ ಈತ ಲಂಚ ನೀಡಿದ್ದ. ಅಲ್ಲದೆ, ದೆಹಲಿಯ ಮಜುಕಾಟೀಲಾ ಬಳಿ ಹಲವರಿಗೆ 2- 3 ಲಕ್ಷ ರೂಪಾಯಿ ಅಕ್ರಮ ಹಣ ನೀಡಿದ್ದ. ಈ ಮೂಲಕ ದಲೈ ಲಾಮಾ ಮತ್ತು ಸಹಚರರ ವಿಚಾರಗಳನ್ನು ಕಲೆಹಾಕುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

    ದೆಹಲಿಯಲ್ಲಿ ಇತ್ತೀಚೆಗಷ್ಟೇ ಚೀನೀ ಹವಾಲಾ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಚಾರ್ಲಿ ಪೆಂಗ್‌ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದ್ದ ಲ್ಯೂಸಾಂಗ್‌ ಎಂಬಾತನನ್ನೂ ಈ ವೇಳೆ ಬಂಧಿಸಿದ್ದರು.

    ಆತನನ್ನು ವಿಚಾರಣೆ ನಡೆಸಲಾಗುತ್ತಿತ್ತು. ಇದೀಗ ಈ ವಿಷಯ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಜಪಾನ್ ಪ್ರಧಾನಿ ಶಿಂಜೋ ಅಬೆ ಆಸ್ಪತ್ರೆಗೆ ದಾಖಲು

    ನೇಪಾಳ ಮೂಲಕ ಪಾಸ್‌ಪೋರ್ಟ್‌ ಇಲ್ಲದೇ ಅಕ್ರಮವಾಗಿ 2014ರಲ್ಲಿ ಭಾರತವನ್ನು ಪ್ರವೇಶಿಸಿದ್ದ ಲ್ಯೂ ಸಾಂಗ್‌ ಮಿಝೋರಾಂನ ಮಹಿಳೆಯನ್ನು ವಿವಾಹವಾಗಿದ್ದ. ನಕಲಿ ಆಧಾರ್‌ ಕಾರ್ಡ್‌ ಕೂಡ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ. 2018ರಲ್ಲಿ ಗೂಢಚಾರ ನಡೆಸಿದ ಆರೋಪ ಕೂಡ ಈತ ಎದುರಿಸಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ವೀ ಚ್ಯಾಟ್‌ ಮೂಲಕ ಸಂವಹನ ನಡೆಸುತ್ತಿದ್ದ ಈತ ಚಾರ್ಟರ್ಡ್‌ ಅಕೌಂಟಂಟ್ ಮೂಲಕ 40ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಕೊರಿಯರ್‌ ಮೂಲಕ ಅಕ್ರಮ ಹಣ ಕಳುಹಿಸುತ್ತಿದ್ದ. ಈತನಿಗೆ ನೆರವಾದ ದೆಹಲಿ ಮೂಲದ ಚಾರ್ಟೆಡ್‌ ಅಕೌಂಟೆಂಟ್‌ನನ್ನೂ ಬಂಧಿಸಲಾಗಿದೆ.

    ಹಿಂದೂ ದೇವತೆಯನ್ನು ಕೀಳಾಗಿ ಸೃಷ್ಟಿಸಿ ಪೋಸ್ಟ್‌ ಹಾಕಿದ್ರು, ನಾನದಕ್ಕೆ ಕಮೆಂಟ್‌ ಹಾಕಿದ್ದಷ್ಟೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts