More

    ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ಉದ್ಯೋಗಕ್ಕೆ ಆಹ್ವಾನ- 56 ಹುದ್ದೆಗಳು ಖಾಲಿ

    ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಇಲಾಖೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಯೂತ್ ಅಫೇರ್ಸ್ ಇಲಾಖೆಗಳಲ್ಲಿ ನೇಮಕಾತಿ ನಡೆಯುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

    ಹುದ್ದೆ ವಿವರ
    * ಜೂನಿಯರ್ ಟೈಮ್ ಸ್ಕೇಲ್ (ಜೆಟಿಎಸ್)- 29

    ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯದ ಸಹಾಯಕ ಕಾರ್ವಿುಕ ಆಯುಕ್ತ (ಕೇಂದ್ರ)/ ಸಹಾಯಕ ಕಲ್ಯಾಣ ಆಯುಕ್ತ (ಕೇಂದ್ರ) / ಸಹಾಯಕ ಕಾರ್ವಿುಕ ಕಲ್ಯಾಣ ಆಯುಕ್ತ ಹುದ್ದೆಗಳನ್ನು ಒಳಗೊಂಡ ಕೇಂದ್ರ ಕಾರ್ವಿುಕ ಸೇವೆಯ (ಗ್ರೂಪ್ ಎ) ಗ್ರೇಡ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸೋಷಿಯಲ್ ವರ್ಕ್/ ಲೇಬರ್ ವೆಲ್ಪೇರ್/ ಇಂಡಸ್ಟ್ರಿಯಲ್ ರಿಲೇಷನ್/ ಪರ್ಸನಲ್ ಮ್ಯಾನೇಜ್​ವೆುಂಟ್/ ಲೇಬರ್ ಲಾದಲ್ಲಿ ಪದವಿ/ ಡಿಪ್ಲೊಮಾ ಪಡೆದಿರುವ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 7ನೇ ವೇತನ ಆಯೋಗದ 10ನೇ ಹಂತದ ವೇತನ ಅನ್ವಯವಾಗಲಿದೆ.
    *ಸೀನಿಯರ್ ಗ್ರೇಡ್- 20

    ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಭಾರತೀಯ ಮಾಹಿತಿ ಸೇವೆಯ ಹಿರಿಯ ಶ್ರೇಣಿಯ ಹುದ್ದೆ ಇದಾಗಿದ್ದು, ಹಿಂದಿ-6, ಇಂಗ್ಲಿಷ್-6, ತೆಲುಗು-1, ಮರಾಠಿ-2, ಬೆಂಗಾಳಿ-2, ತಮಿಳು-2, ಕಾಶ್ಮೀರಿ ಭಾಷೆಯಲ್ಲಿ 1 ಹುದ್ದೆ ಇದೆ. ಯಾವುದೇ ಪದವಿ/ ಜರ್ನಲಿಸಂ/ ಮಾಸ್ ಕಮ್ಯುನಿಕೇಷನ್​ನಲ್ಲಿ ಪದವಿ/ ಡಿಪ್ಲೊಮಾ/ ಸ್ನಾತಕೋತ್ತರ ಪದವಿ ಪಡೆದಿರುವ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿದ್ದು, 7ನೇ ಹಂತದ ಅನ್ವಯ ವೇತನ ಇದೆ.

    * ಯೂತ್ ಆಫೀಸರ್- 5

    ಯೂತ್ ಅಫೇರ್ಸ್ ಆಂಡ್ ಸ್ಪೋರ್ಟ್ಸ್ ಸಚಿವಾಲಯದ ನ್ಯಾಷನಲ್ ಸರ್ವಿಸ್ ಸ್ಕೀಮ್ (ಎನ್​ಎಸ್​ಎಸ್)ನಲ್ಲಿ ಈ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಪದವಿ/ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ 2 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. 7ನೇ ವೇತನ ಆಯೋಗ ಅನ್ವಯ 7ನೇ ಹಂತದ ವೇತನ ಇದ್ದು, ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    * ಡೇಟಾ ಪ್ರೊಸೆಸಿಂಗ್ ಅಸಿಸ್ಟೆಂಟ್ – 1

    ಸಸ್ಯ ಸಂರಕ್ಷಣಾ ಮತ್ತು ಶೇಖರಣಾ ನಿರ್ದೇಶನಾಲಯದಲ್ಲಿ ಡೇಟಾ ಸಂಸ್ಕರಣಾ ಸಹಾಯಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕಂಪ್ಯೂಟರ್ ಅಪ್ಲಿಕೇಷನ್/ ಇನ್​ಫರ್ವೆಷನ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿದ್ದು, 7ನೇ ಹಂತದ ಅನ್ವಯ ವೇತನ ನೀಡಲಾಗುವುದು.

    * ಪ್ರೖೆವೇಟ್ ಸೆಕ್ರೇಟರಿ – 1

    ಕೃಷಿ ಇಲಾಖೆಯ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (ಸಿಎಸಿಪಿ)ದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಪದವಿ ಪಡೆದಿದ್ದು, ಟೈಪಿಂಗ್ ಜ್ಞಾನ ಅವಶ್ಯ. ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಿದ್ದು, 7ನೇ ಹಂತದ ವೇತನ ಇದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 25 ರೂ. ಅರ್ಜಿ ಶುಲ್ಕ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೇದಿನ: 28.10.2021

    ಅಧಿಸೂಚನೆಗೆ: https://bit.ly/3DqBNdu
    ಮಾಹಿತಿಗೆ: http://www.upsc.gov.in

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts