More

    ಕ್ಯಾಲಿಫೋರ್ನಿಯಾ ಧಗಧಗ: ಹರಡುತ್ತಲೇ ಸಾಗಿದೆ ಕಾಳ್ಗಿಚ್ಚು- 11 ಮಂದಿ ಬಲಿ

    ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ವಿವಿಧೆಡೆಗಳಲ್ಲಿ ಉಂಟಾಗುತ್ತಿರುವ ಕಾಳ್ಗಿಚ್ಚು ಭೀಕರ ಸ್ವರೂಪ ಪಡೆಯುತ್ತಲೇ ಸಾಗಿದೆ.

    ಕಳೆದ ವಾರವಷ್ಟೇ ಸುಮಾರು ಎರಡು ದಶಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶವನ್ನು ಬೆಂಕಿಯಲ್ಲಿ ದಹಿಸಿ ಹೋಗಿತ್ತು. ಇದೀಗ ಸ್ಯಾಕ್ರಾಮೆಂಟೊದ ಉತ್ತರಕ್ಕೆ ಕಾಳ್ಗಿಚ್ಚು ರೌದ್ರಾವತಾರ ತೋರಿದ್ದು, ನಿನ್ನೆ ಒಂದೇ ದಿನ ಮೂರು ಮಂದಿಯನ್ನು ಬಲಿ ಪಡೆದಿದೆ. ಇಲ್ಲಿಯವರೆಗೆ ಕಾಳ್ಗಿಚ್ಚಿನಿಂದ ಸತ್ತವರ ಸಂಖ್ಯೆ 11ಕ್ಕೆ ಏರಿದೆ.

    ಕಾಡಿನಂಚಿನಲ್ಲಿರುವ ಸಾವಿರಾರು ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಅಪಾಯದಲ್ಲಿರುವ ಹಿನ್ನೆಲೆಯಲ್ಲಿ ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಒರೊವಿಲ್ಲೆ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

    ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಬೆಂಕಿ ಹರಡುವ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಮಾರು 40 ಕಿಲೋಮೀಟರ್​ನಷ್ಟು ಬೆಂಕಿ ಹರಡಿದ್ದು, ಈ ಪ್ರದೇಶ ಕೆಂಪು ಬಣ್ಣಕ್ಕೆ ತಿರುಗಿದೆ.

    ಇದನ್ನೂ ಓದಿ: ದೀದೀ ‘ದುರ್ಗಾವತಾರ’: 100 ಬಸ್ಕಿ ಹೊಡೆಯಲು ಸಿದ್ಧ ಎಂದದ್ದೇಕೆ ಮಮತಾ?

    ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ಮೂರು ವಾರಗಳಿಗಿಂತ ಹರಡುತ್ತಲೇ ಸಾಗಿದ್ದು, ಹೆಚ್ಚಿನ ಅನಾಹುತವಾಗುವ ಸಂಭವವಿದೆ. ಇದಾಗಲೇ ಅರಣ್ಯದಲ್ಲಿ ಇರುವ ವನ್ಯಮೃಗಗಳು ದಹಿಸಿ ಹೋಗಿದ್ದು, ಎಂಟು ರಾಷ್ಟ್ರೀಯ ಅರಣ್ಯ ಪ್ರದೇಶಗಳನ್ನು ಮುಚ್ಚಲಾಗಿದೆ.

    ಬೆಂಕಿಯು 24 ಗಂಟೆಗಳಲ್ಲಿ ಸುಮಾರು 400 ಚದರ ಮೈಲಿ (1,036 ಚದರ ಕಿಲೋಮೀಟರ್) ಹರಡಿದೆ ಎಂದು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ಡೇನಿಯಲ್ ಸ್ವೈನ್ ಹೇಳಿದ್ದಾರೆ. ಸಮೀಪ ಇರುವ ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗಿವೆ. ವನ್ಯಜೀವಿಗಳಚಿತೂ ಅನುಭವಿಸಿದ ಯಾತನೆ ದೇವರಿಗೆ ಪ್ರೀತಿ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

    ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

    ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿದ್ದ ಕರೊನಾ ಸೋಂಕಿತೆ ತಲುಪಿದ್ದು ದೆಹಲಿ! ಆಗಿದ್ದೇನು?

    11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

    ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

    2024ರಲ್ಲಿಯೂ ಹಿಂದುತ್ವವೇ ಗೆಲ್ಲಲಿದೆ ಎಂದ ಸುಬ್ರಮಣಿಯನ್​ ಸ್ವಾಮಿ ಕೇಂದ್ರವನ್ನು ಟೀಕಿಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts