More

    3 ವರ್ಷ ಇವ್ರೇ ಸಿಎಂ ಎಂದ್ರು ಕಟೀಲ್​- ಅವ್ರು ಸಿಎಂ ಆಗೋದು ತಿರುಕನಕನಸು ಎಂದ್ರು ರವಿ…

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯ ಸುದ್ದಿ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.

    ಉಪಚುನಾವಣೆಯ ನಂತರ ಯಾವುದೇ ಸಂದರ್ಭದಲ್ಲಾದರೂ ನಾಯಕತ್ವ ಬದಲಾವಣೆಯಾಗಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ. ಕೇಂದ್ರ ಸರ್ಕಾರದವರಿಗೂ, ಪಕ್ಷದ ಹೈಕಮಾಂಡ್ ನಾಯಕರಿಗೂ ಇವರ ಬಗ್ಗೆ ಸಾಕಾಗಿದೆ ಎಂದು ನಿನ್ನೆಯಷ್ಟೇ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡುವ ಮೂಲಕ ನಾಯಕತ್ವ ಬದಲಾವಣೆ ಕುರಿತಂತೆ ಹೇಳಿಕೆಗಳು ಮತ್ತಷ್ಟು ಗರಿಗೆದರಿದ್ದವು.

    ಆದರೆ ಇದೀಗ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಮ್ಮ ಟ್ವಿಟರ್​ ಖಾತೆಯ ಮೂಲಕ ಒಂದು ಮಾತನ್ನು ಸ್ಪಷ್ಟಪಡಿಸಿದ್ದಾರೆ. ಅದೇನೆಂದರೆ, ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಮೂರು ವರ್ಷಗಳ ಕಾಲ ಬಿಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ’ ಎಂಬುದಾಗಿ ಅವರು ಟ್ವಿಟರ್​ನಲ್ಲಿ ಹೇಳಿದ್ದಾರೆ.

    ಈ ರೀತಿ ಸ್ಪಷ್ಟತೆ ನೀಡುವ ಮೂಲಕ ನಾಯಕತ್ವ ಬದಲಾವಣೆ ಕುರಿತ ಚರ್ಚೆಯನ್ನು ಮುಕ್ತಾಯ ಮಾಡುವಂತೆ ಸೂಚ್ಯವಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಬಿಎಸ್​ವೈ ಅಧಿಕಾರ ಮುಗೀತು- ಉ.ಕದವರೇ ಮುಂದಿನ ಸಿಎಂ: ಯತ್ನಾಳ್​ ಸಿಡಿಸಿದರು ಬಾಂಬ್​

    ಅದೇ ಇನ್ನೊಂದೆಡೆ, ಸಿದ್ದರಾಮಯ್ಯನವರು ತಾವೇ ಮುಂದಿನ ಮುಖ್ಯಮಂತ್ರಿ ಎನ್ನುವಂತೆ ಮಾತನಾಡುತ್ತಿರುವುದಕ್ಕೆ ಟೀಕಿಸಿದ ಸಚಿವ ಸಿ.ಟಿ. ರವಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ತಿರುಕನ ಕನಸು ಎಂದಿದ್ದಾರೆ.

    ಧಾರವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರವಿಯವರು, ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತಾ, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಮಾತು ಹೇಳುತ್ತಿದ್ದಾರೆ. ಕೆಲವು ಸಂಗತಿಗಳನ್ನು ಕಾಲ ನಿರ್ಣಯಿಸುತ್ತದೆ. ಈಗ ದೇಶದಲ್ಲಿ ಬಿಜೆಪಿ ಕಾಲ ನಡೆಯುತ್ತಿದೆ. ತವರಿನಲ್ಲೇ ಅವರವರ ಪಕ್ಷವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ. ಜಮೀರ್ ಅಹ್ಮದ್ ಬೆಂಗಳೂರಿನಲ್ಲೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ತಿರುಕನ ಕನಸು ಎಂದು ಹೇಳಿದರು.

    ಡಿಜೆಹಳ್ಳಿ ಗಲಭೆಕೋರರೊಂದಿಗೆ ಸಂಪರ್ಕ- ಕಾಲ್​ ರೆಕಾರ್ಡ್ಸ್​ನಿಂದ ‘ಸಿಕ್ಕಿಬಿದ್ದ’ ಸಂಪತ್​ರಾಜ್​

    ಫ್ಯಾನ್ಸಿ​ ನಂಬರ್​ನಲ್ಲಿ ಸಾರಿಗೆ ಇಲಾಖೆ ದಾಖಲೆ: 0001 ಸಂಖ್ಯೆಗೆ ಎಷ್ಟು ಹಣ ಕೊಟ್ರು ಗೊತ್ತಾ?

    ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts