More

    ಮೂಢನಂಬಿಕೆಗೆ ಬಲಿಯಾದ 11 ವರ್ಷದ ಕಂದ: ಚಿಕಿತ್ಸೆ ಬದಲು ಕುರಾನ್‌ ಕೇಳಿಸಿದ ಅಪ್ಪ ಅರೆಸ್ಟ್‌

    ಕಣ್ಣೂರು (ಕೇರಳ): ತೀವ್ರ ಜ್ವರದಿಂದ ಬಳಲುತ್ತಿದ್ದ 11 ವರ್ಷದ ಬಾಲಕಿ ಅಪ್ಪನ ನಿರ್ಲಕ್ಷ್ಯದಿಂದಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

    ಈ ಸಂಬಂಧ ಬಾಲಕಿ ಫಾತಿಮಾಳ ಅಪ್ಪ ಸತ್ತಾರ್ ಹಾಗೂ ಈ ಸಲಹೆ ನೀಡಿದ ಮುಸ್ಲಿಂ ಧರ್ಮದ ಮುಖಂಡ ಮೊಹಮ್ಮದ್‌ ಉವೈಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಕೂಡ ಇಂಥ ಏಳೆಂಟು ಘಟನೆಗಳು ನಡೆದಿದ್ದು, ಇದೀಗ ಈ ಘಟನೆ ಬೆಳಕಿಗೆ ಬಂದಿದೆ.

    ಬಾಲಕಿ ಫಾತೀಮಾ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆಕೆಯ ಮೇಲೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ ಎಂದು ಮೊಹಮ್ಮದ್‌ ಉವೈಸ್‌ ಹೇಳಿದ್ದಾರೆ. ಇವರು ಮುಸ್ಲಿಂ ಧರ್ಮದ ಮುಖಂಡ (ಸತ್ತಾರ್​ ಇಮಾಮ್) ಆಗಿದ್ದು, ಬಾಲಕಿಯ ಅಪ್ಪ ಅವರ ಬಳಿ ಕರೆದುಕೊಂಡು ಹೋಗಿದ್ದರು. ಆಕೆಗೆ ಪವಿತ್ರ ಎನಿಸುವ ನೀರು ಕುಡಿಸಿ ಅವಳ ಎದುರಿಗೆ ಕುರಾನ್‌ ಓದಿದರೆ ಮಗಳು ಆರೋಗ್ಯವಂತಳಾಗುತ್ತಾಳೆ ಎಂದು ಸಲಹೆ ನೀಡಲಾಗಿದೆ.

    ಅದಾಗಲೇ ಬಾಲಕಿಯ ಪರಿಸ್ಥಿತಿ ಬಿಗಡಾಯಿಸಿದೆ. ಇಂಥ ಪರಿಸ್ಥಿತಿಯಲ್ಲಿಯೂ ಆಕೆಯ ಅಪ್ಪ ಮುಖಂಡ ಹೇಳಿದಂತೆ ನೀರು ಕುಡಿಸಿ ಕುರಾನ್‌ ಓದತೊಡಗಿದ್ದಾನೆ. ಇಷ್ಟಾಗುತ್ತಲೇ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರೂ ಬಾಲಕಿಯ ಅಪ್ಪ ಕೇಳಲಿಲ್ಲ ಎಂದು ಅವರು ದೂರಿದ್ದಾರೆ.
    ಈ ಹಿನ್ನೆಲೆಯಲ್ಲಿ ಧರ್ಮದ ಮುಖಂಡ ಹಾಗೂ ಬಾಲಕಿಯ ಅಪ್ಪ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದುದು ತಿಳಿದುಬಂದಿದೆ. ಇದು ಸಾಯುವಂಥ ರೋಗ ಆಗಿರಲಿಲ್ಲ. ಬಾಲಕಿಗೆ ಸರಿಯಾದ ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರೆ, ಬದುಕುಳಿಯುಳಿಯುತ್ತಿದ್ದಳು ಎಂದಿದ್ದಾರೆ ವೈದ್ಯರು.

    ಸಮಾಜಕ್ಕೆ ಗಂಡ ಬೇಕು, ಅದಕ್ಕೇ ಡಿವೋರ್ಸ್‌ ಕೊಡಲ್ಲ ಅಂತ ಲವರ್‌ ಜತೆಗಿದ್ದಾಳೆ: ಕಾನೂನು ಸಲಹೆ ಕೊಡಿ ಮೇಡಂ…

    ‘ಕಾಡಿನಲ್ಲೂ ಡಾ.ರಾಜ್‌ಗೆ ಪುನೀತ್‌ದ್ದೇ ಚಿಂತೆಯಾಗಿತ್ತು, ನಾನ್‌ ಸತ್ರೂ ಪರವಾಗಿಲ್ಲ, ಅವ್ನು ನಟ ಆಗ್ಬೇಕು ಅಂತ ಹೇಳ್ಕೊಂಡಿದ್ರು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts