More

    ಬ್ಲ್ಯಾಕ್‌ ಫಂಗಸ್‌ ಗುರುತಿಸುವುದು ಹೇಗೆ? ಚಿಕಿತ್ಸೆ, ಪರಿಹಾರವೇನು? ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿ ಇಲ್ಲಿದೆ

    ನವದೆಹಲಿ: ಕರೊನಾದ ಎರಡನೆಯ ಅಲೆ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವ ನಡುವೆಯೇ ಸೋಂಕಿತರು ಹಾಗೂ ಸೋಂಕಿನಿಂದ ಗುಣಮುಖರಾದ ಕೆಲವರ ಜೀವ ಕಸಿದಿದೆ ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌). ಇದಕ್ಕೆ ವೈದ್ಯಕೀಯ ಹೆಸರು ಮ್ಯುಕೋರ್ಮೈಕೋಸಿಸ್​. ಇದಾಗಲೇ ದೆಹಲಿ, ಮಹಾರಾಷ್ಟ್ರಗಳಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಈ ಸೋಂಕಿನಿಂದ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ.

    ಈ ಕುರಿತಂತೆ ದೆಹಲಿಯ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಬ್ಲ್ಯಾಕ್‌ ಫಂಗಸ್‌ ಗುರುತಿಸುವುದು ಹೇಗೆ? ಅದಕ್ಕೆ ಚಿಕಿತ್ಸಾ ವಿಧಾನಗಳು ಏನು? ಯಾರನ್ನು ಇದು ಹೆಚ್ಚು ಬಾಧಿಸುತ್ತದೆ? ಇದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಈ ಮಾರ್ಗಸೂಚಿಯಲ್ಲಿ ವಿವರಣೆ ನೀಡಲಾಗಿದೆ.

    ಯಾರನ್ನು ಬ್ಲ್ಯಾಕ್‌ ಫಂಗಸ್‌ ಹೆಚ್ಚಿಗೆ ಬಾಧಿಸುತ್ತದೆ ಎಂದು ನೋಡೋಣ. ವೈದ್ಯಕೀಯ ವಿಜ್ಞಾನ ಸಂಸ್ಥೆ ಹೇಳಿರುವ ಪ್ರಕಾರ-
    * ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು
    * ದೀರ್ಘಕಾಲದ ಅನಾರೋಗ್ಯ ಸಮಸ್ಯೆಯುಳ್ಳವರು
    * ಅತಿ ಹೆಚ್ಚು ಸ್ಟೀರಾಯ್ಡ್‌ ಬಳಕೆ ಮಾಡುತ್ತಿರುವವರು, ಅಥವಾ ಆಸ್ಪತ್ರೆಯಲ್ಲಿ ಸ್ಟೀರಾಯ್ಡ್‌ನ ಬಳಕೆಯಾದವರು
    * ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಸೇವಿಸುತ್ತಿರುವವರು
    * ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವವರು
    * ತೀವ್ರ ಸ್ವರೂಪದಲ್ಲಿ ಶೀತ, ಥಂಡಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಉಸಿರಾಟದ ಸಮಸ್ಯೆಯಿದ್ದು ಆಕ್ಸಿಜನ್​ ಸಹಾಯ ಪಡೆಯುವವರು

    ಬ್ಲ್ಯಾಕ್​ ಫಂಗಸ್​ ಸೋಂಕು ತಗುಲಿದೆ ಎಂದು ಹೇಗೆ ಗುರುತಿಸುವುದು?
    * ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು
    * ಮೂಗಿನಿಂದ ಅಸಹಜ ಎನ್ನಿಸುವಷ್ಟು ಕಪ್ಪು ವಿಸರ್ಜನೆಯಾಗುವುದು, ರಕ್ತ ಸೋರುವುದು
    * ಮುಖ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವ ಅನುಭವ
    * ಮುಖದಲ್ಲಿ ಊತ, ಕಪ್ಪುಗಟ್ಟುವಿಕೆ, ಗಟ್ಟಿಯಾಗುವಿಕೆ, ನೋವು ಕಾಣಿಸಿಕೊಳ್ಳುವುದು
    * ಮೂಗಿನಲ್ಲಿ ಕಿರಿಕಿರಿ, ತಲೆನೋವು
    * ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು, ಕಣ್ಣು ಸರಿಯಾಗಿ ಕಾಣದಿರುವುದು, ಅಸ್ಪಷ್ಟತೆ, ಕಣ್ಣು ತೆರೆಯುವುದಕ್ಕೆ ಹಾಗೂ ಮುಚ್ಚುದಕ್ಕೆ ಕಷ್ಟವಾಗುವುದು
    * ಹಲ್ಲು ಉದರುವುದು, ಬಾಯಿ ಒಳಗೂ ಕಪ್ಪು ಬಣ್ಣ ಹಾಗೂ ಊತ ಕಾಣಿಸಿಕೊಳ್ಳುವುದು

    ಸೋಂಕಿದೆ ಎಂದಾಕ್ಷಣ ಮಾಡಬೇಕಾದುದೇನು?
    * ಬ್ಲ್ಯಾಕ್ ಫಂಗಸ್ ಪತ್ತೆಯಾದಾಗ ಕಣ್ಣಿನ ವೈದ್ಯರು ಅಥವಾ ಸೂಕ್ತ ತಜ್ಞರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
    * ರಕ್ತದಲ್ಲಿನ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಸೂಕ್ತ ಕ್ರಮ ಅನುಸರಿಸಬೇಕು
    * ಯಾವುದೇ ರೀತಿಯ ವಿಪರೀತ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು
    * ವೈದ್ಯರನ್ನು ಕೇಳದೆ ಯಾವ ಕಾರಣಕ್ಕೂ ಸ್ಟಿರಾಯ್ಡ್ ಹಾಗೂ ಆ್ಯಂಟಿ ವೈರಲ್ ಡ್ರಗ್ ಉಪಯೋಗಿಸಬಾರದು
    * ವೈದ್ಯರ ಸಲಹೆ ಮೇರೆಗೆ ಎಂಆರ್‌ಐ, ಸಿಟಿ ಸ್ಕ್ಯಾನ್ ಮಾಡಿಸಬೇಕು.

    ಮಹಿಳೆ ಮರುಮದುವೆಯಾಗಿ ಹುಟ್ಟುವ ಮಗುವಿಗೆ ಮೊದಲ ಪತಿಯ ಆಸ್ತಿಯೂ ಸಿಗುತ್ತಾ?

    ಕೋವಿಡ್‌ ಕೇಂದ್ರದ ಟಾಯ್ಲೆಟ್‌ ಕೈಯಲ್ಲಿಯೇ ಕ್ಲೀನ್‌ ಮಾಡಿದ ಸಂಸದ: ಅಧಿಕಾರಿಗಳು ಕಕ್ಕಾಬಿಕ್ಕಿ

    ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಐಪಿಎಸ್‌ ಅಧಿಕಾರಿಗೆ ಪ್ರಮೋಷನ್‌!

    ಪ್ರಥಮ ದಲಿತ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಜಗನ್ನಾಥ್‌ ಕೋವಿಡ್‌ಗೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts